ಇ ಸಮಾಚಾರ ಡಿಜಿಟಲ್  ನ್ಯೂಸ್ (esamachara  digital news) ಕಾರವಾರ(Karwar) : ಬಂಗಾಳ ಕೊಲ್ಲಿಯಲ್ಲಿ ಉಂಟಾದ ವಾಯುಭಾರ ಕುಸಿತದ(Cyclone) ಪರಿಣಾಮವಾಗಿ ಉತ್ತರಕನ್ನಡ(Uttarakannada) ಜಿಲ್ಲೆಯಲ್ಲಿ ಹಲವೆಡೆ ಗುಡುಗು-ಮಿಂಚು(Lightning) ಸಹಿತ ಭಾರೀ ಮಳೆಯಾಗಿದೆ.

ಯಲ್ಲಾಪುರ(Yallapur) ಹಾಗೂ ಶಿರಸಿ(Sirsi) ತಾಲೂಕುಗಳಲ್ಲಿ ಸುಮಾರು ಅರ್ಧ ತಾಸಿನ ಕಾಲ ಸುರಿದ ಮಳೆಯಿಂದ ಜನ ಜೀವನ ಅಸ್ತವ್ಯಸ್ತಗೊಂಡಿದೆ. ಏಕಾಏಕಿ ಸುರಿದ ಮಳೆಯಿಂದ ಹೆದ್ದಾರಿಗಳ ಮೇಲೆ ನೀರು ತುಂಬಿ ಹರಿಯುತ್ತಿರುವ ದೃಶ್ಯ ಕಂಡುಬಂದಿದೆ. ಕೆಲವೆಡೆ ವಾಹನ ಸಂಚಾರಕ್ಕೂ  ಅಡಚಣೆ ಉಂಟಾಯಿತು. ಅಕಾಲಿಕ ಮಳೆಯಿಂದ ವ್ಯಾಪಾರಿಗಳು ಹಾಗೂ ದೈನಂದಿನ ಕೆಲಸಗಳಿಗೆ ತೆರಳಿದ ಜನರು ಸಂಕಷ್ಟ ಅನುಭವಿಸಿದರು.

ಜಿಲ್ಲಾದ್ಯಂತ ದಿನವಿಡೀ ಮೋಡ ಕವಿದ ವಾತಾವರಣ ಮುಂದುವರಿದಿದ್ದು, ಯಾವುದೇ ಸಮಯದಲ್ಲಾದರೂ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ(Metrology Department) ಮುಂಚಿತವಾಗಿ ಸೂಚನೆ ನೀಡಿತ್ತು. ಇಲಾಖೆಯ ಮುನ್ಸೂಚನೆ ಅನ್ವಯ ಮಳೆಯ ಪ್ರಮಾಣ ಇನ್ನೂ ಹೆಚ್ಚಾಗುವ ಸಾಧ್ಯತೆಯಿದೆ.

ಇದನ್ನು ಓದಿ : ಮನೆಗಳ ಮೇಲೆ ಕಲ್ಲು ತೂರಿದ ಹೀನ ಬುದ್ದಿಯವರು. ಠಾಣೆ ಮುಂದೆ ಹಿಂದು ಕಾರ್ಯಕರ್ತರ ಪ್ರತಿಭಟನೆ