ಶಿರಸಿ(SIRSI) : ಮಂಡ್ಯದ ನಾಗಮಂಗಲದಲ್ಲಿ(MANDYA NAGAMANGAL) ಕಿಡಿಗೇಡಿಗಳು ದುಷ್ಕ್ರತ್ಯ ಏಸಗಿ ಕೋಮು ಸಂಘರ್ಷ ಕಾರಣರಾದ ಬೆನ್ನಲ್ಲೇ ಶಿರಸಿಯ ನಗರದಲ್ಲಿ ಸೌಹಾರ್ದತೆ ಸಾರಿದ ಸುದ್ದಿ ಲಭಿಸಿದೆ.

ಶಿರಸಿ ನಗರ ಠಾಣೆ ವ್ಯಾಪ್ತಿಯ ನಾಗಲಿಂಗೇಶ್ವರ ಯುವಕ ಮಂಡಳಿ ರಾಮನಬೈಲ್  ನವರು ನಿನ್ನೆ ಗಣೇಶ ವಿಸರ್ಜನಾ ಮೆರವಣಿಗೆ  ಹಮ್ಮಿಕೊಂಡಿದ್ದರು. ಮೆರವಣಿಗೆ ಸಂದರ್ಭದಲ್ಲಿ ರಾಮನಬೈಲ್ ನ ದೊಡ್ಡ ಮಸೀದಿ(MASJID) ಮುಂದೆ ಮೆರವಣಿಗೆ ಹೋಗುವಾಗ ಮುಸಲ್ಮಾನ ಬಾಂಧವರು ನೀರು ಮತ್ತು ಸಿಹಿ ಹಂಚಿದ್ದಾರೆ.

ಸ್ಥಳೀಯರಾದ ಫಾರೂಕ್ ಶೇಖ್ ನೇತ್ರತ್ವದಲ್ಲಿ ಪರಸ್ಪರ  ಕೋಮ ಸೌಹಾರ್ಧ ಹಾಗೂ ಭಾವೈಕ್ಯತೆ ಮೆರೆಯುವ ಮೂಲಕ  ಒಗ್ಗಟ್ಟಿನ ಮಂತ್ರ ಸಾರಿದ್ದಾರೆ. ಜಾತಿ, ಧರ್ಮ ಅಂತಾ ಕಚ್ಚಾಡುವ ಸಮಾಜದಲ್ಲಿ ಇಂಥ ಬೆಳವಣಿಗೆ ಅಗತ್ಯವಾಗಿರುವಂತದ್ದಾಗಿದೆ.

ಇದನ್ನು ಓದಿ : ಕೆಪಿಎಸ್ ಸಿ ಪರೀಕ್ಷೆ ಮುಂದೂಡಿಕೆ

ಪ್ರವಾಸಕ್ಕೆ ಬಂದು ನೀರು ಪಾಲಾದ ವಿದ್ಯಾರ್ಥಿ

rATM ಗೆ ನುಗ್ಗಿದ ಕಳ್ಳ ವಶಕ್ಕೆ