ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ದಾಂಡೇಲಿ(Dandeli) : ನಗರದ ಕೇಂದ್ರ ಅಂಚೆ ಕಚೇರಿಯ ಮುಂಭಾಗದ ಬರ್ಚಿ ರಸ್ತೆಯಲ್ಲಿ ವೃದ್ದೆಯೊಬ್ಬರ ಗಮನವನ್ನು ಬೇರೆಡೆಗೆ ಸೆಳೆದು ಲಕ್ಷಾಂತರ ರೂ ಮೌಲ್ಯದ ಬಂಗಾರದ ಆಭರಣವನ್ನು(Gold Ornaments) ದೋಚಿದ(Robbery) ಘಟನೆ ನಡೆದಿದೆ.
ನಗರದ ಬಂಗೂರನಗರ ಓಲ್ಡ್ ಡಿ.ಆರ್.ಟಿ ಕಾಲೋನಿಯ ನಿವಾಸಿ ಶಾಂತ ಯಲ್ಲಪ್ಪ ಪವಾರ್ (85) ಎಂಬುವವರೇ ಬಂಗಾರದ ಆಭರಣವನ್ನು ಕಳೆದುಕೊಂಡವರು. ವೈಯಕ್ತಿಕ ಕೆಲಸದ ನಿಮಿತ್ತ ಬರ್ಚಿ ರಸ್ತೆಯಲ್ಲಿ(Barchi Road) ಹೋಗುತ್ತಿರುವಾಗ ಈ ಘಟನೆ ನಡೆದಿದೆ. ಬೈಕಿನಲ್ಲಿ ಬಂದ ಇಬ್ಬರು ಖದೀಮರು ಕೃತ್ಯ ಏಸಗಿ ಪರಾರಿಯಾಗಿದ್ದಾರೆ.
ಸುಮಾರು ಎರಡು ಲಕ್ಷ ರೂಪಾಯಿ ಮೌಲ್ಯದ 40 ಗ್ರಾಂ ತೂಕದ ಬಂಗಾರದ ಎರಡು ಬಳೆಗಳನ್ನು ಎಗರಿಸಿದ್ದಾರೆ. ಈ ಇಬ್ಬರು ಖದೀಮರ ಚಲನವಲನ ಹತ್ತಿರದ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ಬಗ್ಗೆ ದಾಂಡೇಲಿ ನಗರ ಪೊಲೀಸ್ ಠಾಣೆಯಲ್ಲಿ(Dandeli Police Station) ಪ್ರಕರಣ ದಾಖಲಾಗಿದ್ದು, ನಗರ ಠಾಣೆಯ ಪೊಲೀಸರು ಈ ಇಬ್ಬರು ಖದೀಮರ ಬಂಧನಕ್ಕೆ ಬಲೆ ಬೀಸಿದ್ದಾರೆ.