ಕಾರವಾರ(Karwar) – ಏರ್ ಫೋರ್ಸ್ ಫ್ಲೈಯಿಂಗ್ ಆಫೀಸರ್(Airforce Flying Officer) ಹುದ್ದೆಗೆ ಅಸ್ನೋಟಿಯ ಸಾಯಿಶ್ರೀ ಕರುಣಾ ಅರುಣ ನಾಯ್ಕ ಆಯ್ಕೆಯಾಗಿದ್ದಾರೆ.
ಶಿವಾಜಿ ವಿದ್ಯಾ ಮಂದಿರ(Shivaji Vidya Mandira), ನ್ಯೂ ಮಾಡೆಲ್ ಇಂಗ್ಲೀಷ್ ಸ್ಕೂಲ್(New Model English School) ಅಸ್ನೋಟಿ(Asnoti) ಹಾಗೂ ಲಯನ್ಸ್ ಕ್ಲಬ್ ಸದಾಶಿವಗಡ(Lions Club Sadashivaghada), ರೋಟರಿ ಕ್ಲಬ್ (Rotary Club) ಪಶ್ಚಿಮ ಕಾರವಾರ ಮತ್ತು ಕಲ್ಲೂರ ಏಜ್ಯುಕೇಶನ್ ಟ್ರಸ್ಟ್(Kalluru Education Trust) ಕಾರವಾರ ಇವರ ಸಂಯುಕ್ತಾಶ್ರಯದಲ್ಲಿ ಏರ್ ಫೋರ್ಸ್ ಫ್ಲೈಯಿಂಗ್ ಆಫಿಸರ್ ಹುದ್ದೆಗೆ ಆಯ್ಕೆಯಾದ ಹೆಮ್ಮೆಯ ಸುಪುತ್ರಿ ಸಾಯಿಶ್ರೀ ಕರುಣಾ ಅರುಣ ನಾಯ್ಕ ಅವರನ್ನ ಅಸ್ನೋಟಿ ಶಿವಾಜಿ ವಿದ್ಯಾ ಮಂದಿರದಲ್ಲಿ(Shivaji Vidya Mandira) ಸನ್ಮಾನಿಸಲಾಯಿತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಉದ್ದಿಮೆಗಳು ಹಾಗೂ ಪ್ರೀಮಿಯರ್ ಗ್ರುಪ್(Premier Group) ಕಾರವಾರದ ಸಂಸ್ಥಾಪಕ ದಿನಕರ ಸಾಳುಂಕೆ, ನಮ್ಮ ಊರಿನ ಅದ್ವಿತೀಯ ಸಾಧಕಿ ಸಾಯಿಶ್ರೀ ಯುವಜನಾಂಗಕ್ಕೆ ಸ್ಪೂರ್ತಿ ಮತ್ತು ಧೈರ್ಯದ ಸೆಲೆಯಾಗಿದ್ದಾರೆ ಎಂದರು.
ಮುಖ್ಯ ಅತಿಥಿಗಳಾಗಿದ್ದ ನಗರಾಭಿವೃದ್ಧಿ ಕೋಶದ ಇಂಜಿನಿಯರ್ ರವಿಕುಮಾರ್ ಕೆ ಎಮ್, ಸಾಧನೆ ಅನ್ನುವದು ಸಾಧಕರ ಸ್ವತ್ತಾಗಬೇಕು ಅದನ್ನು ನಮ್ಮ ಮಧ್ಯ ಇರುವ ಸಾಯಿಶ್ರೀ ಮಾಡಿ ತೋರಿಸಿದ್ದಾರೆ ಎಂದರು. ಆಹ್ವಾನಿತರಾದ ಲ.ವಿನಯಾ ವಿ ನಾಯ್ಕ, ರೋ.ಶಿವಾನಂದ ನಾಯ್ಕ, ಲ.ಇಬ್ರಾಹಿಂ ಕಲ್ಲೂರ ಊರಿನ ಹಿರಿಯರಾದ ನಾರಾಯಣ ದೇಸಾಯಿ ಕಾರ್ಯಕ್ರಮ ಕುರಿತು ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.
ಸಾಯಿಶ್ರೀ ಅವರ ತಾಯಿ ಕರುಣಾ ನಾಯ್ಕ ಅವರು ಮಗಳ ಶ್ರಮ ಮತ್ತು ಅವರ ಪರಿಶ್ರಮ ಕುರಿತು ಮಾತನಾಡಿದರು. ಸನ್ಮಾನಿತ ಸಾಯಿಶ್ರೀ ಕರುಣಾ ಅರುಣ ನಾಯ್ಕ ಮಾತನಾಡುತ್ತಾ, ನನ್ನ ಕಠಿಣ ಪರಿಶ್ರಮ ಜೊತೆಗೆ ಸಮಯದ ಸದುಪಯೋಗ ನನ್ನ ಸಾಧನೆಗೆ ಬೆಳಕಾಗಿದೆ ಮತ್ತು ಬಾಲ್ಯದ ದಿನಗಳಲ್ಲಿ ನನಗೆ ಸಹಕರಿಸಿದ ಗ್ರಾಮದ ಹಿರಿಯರನ್ನು ಮತ್ತು ತಾಯಿಯ ನೆರವನ್ನು ಅಂತರಂಗದ ನುಡಿಗಳಲ್ಲಿ ಭಾವನಾತ್ಮಕವಾಗಿ ಸ್ಮರಿಸಿಕೊಂಡರು.
ಅಸ್ನೋಟಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಉಮೇಶ್ ಸಾಳುಂಕೆ ಅಧ್ಯಕ್ಷತೆ ವಹಿಸಿ ಮಾತನಾಡಿ, ಗ್ರಾಮದ ಸುಪುತ್ರಿಯ ಸಾಧನೆಯನ್ನು ಅಭಿನಂದಿಸಿದರು.
ವೇದಿಕೆಯಲ್ಲಿ ಅಸ್ನೋಟಿ ಗ್ರಾಮ ಪಂಚಾಯತಿ ಉಪಾಧ್ಯಕ್ಷ ಅಶ್ವಿನಿ ಮ್ಹಾಳ್ಸೇಕರ, ಸಂಸ್ಥೆಯ ಉಪಾಧ್ಯಕ್ಷ ಗಿರೀಶ್ ದೇಸಾಯಿ, ಕಾರ್ಯಕಾರಿ ಮಂಡಳಿ ಸದಸ್ಯರಾದ ಶಶಿಕಾಂತ ಸಾಳುಂಕೆ, ಅಸ್ನೋಟಿ ಮಾಜಿ ಸೈನಿಕರ ಕಲ್ಯಾಣ ಸಂಘದ ಅಧ್ಯಕ್ಷರಾದ ಬಾಲಕೃಷ್ಣ ಸಾಳುಂಕೆ ಹಾಗೂ ತನುಜಾ ಗುರುನಾಥ ನಾಯ್ಕ , ಆನಂದು ಸಾಳುಂಕೆ ಇತರರು ಉಪಸ್ಥಿತರಿದ್ದರು.
ಶಾಲಾ ವಿದ್ಯಾರ್ಥಿನಿಯರಾದ ದಿಕ್ಷಾ ತಳೇಕರ ಸಂಗಡಿಗರು ಪ್ರಾರ್ಥಿಸಿದರು. ಸಂಸ್ಥೆಯ ಕಾರ್ಯದರ್ಶಿ ನ್ಯಾಯವಾದಿ ಸಂಜಯ ಜಿ ಸಾಳುಂಕೆ ಸ್ವಾಗತಿಸಿದರು. ಸಂಘಟಕ ಶಿಕ್ಷಕ ಡಾ.ಗಣೇಶ ಎನ್ ಬಿಷ್ಟಣ್ಣನವರ ನಿರೂಪಿಸಿದರು.
ಇದನ್ನು ಓದಿ : ಪಾಕಿಸ್ತಾನದಲ್ಲಿರುವ ಮನಮೋಹನ್ ಸಿಂಗ್ ಬಾಲಕರ ಶಾಲೆ.
ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಇನ್ನಿಲ್ಲ. ಇಂದು ಸರ್ಕಾರಿ ರಜೆ ಘೋಷಣೆ.