ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಬೆಂಗಳೂರು(Bangalore) : ಸಿನೇಮಾ ಸ್ಟೈಲ್(Cinema Style), ಅದರಲ್ಲೂ ಪುಷ್ಪ ಸಿನಿಮಾದಲ್ಲಿ(Pushpa Cinema) ರಕ್ತಚಂದನ ಸ್ಮಗ್ಲಿಂಗ್ ಹೇಗೆ ಮಾಡ್ತಾರೆ ಅನ್ನೋದನ್ನ ತಿಳಿದುಕೊಂಡ ಖತಾರ್ನಾಕ್ ಕಳ್ಳರು ಶ್ರೀಗಂಧವನ್ನ(Sandalwood) ಈರುಳ್ಳಿ ಮೂಟೆಯಲ್ಲಿ ಸಾಗಿಸಿ ಈಗ ಪೊಲೀಸರ ಕೈಯಲ್ಲಿ ಸಿಕ್ಕಿ ಬಿದ್ದಿದ್ದಾರೆ.
ಆಂಧ್ರಪ್ರದೇಶದ(Andrapradesh) ಕರ್ನೂಲ್‌ನಿಂದ ಬೆಂಗಳೂರಿಗೆ(Karnul to Bangalore) ಶ್ರೀಗಂಧವನ್ನು ತಂದು ಇನ್ನೇನು ತಾವಂದುಕೊಂಡ ಸ್ಥಳಕ್ಕೆ ಸಾಗಿಸಬೇಕೆನ್ನುವಷ್ಟರಲ್ಲಿ ನಾಕಾಬಂದಿ ಮಾಡಿ ತಪಾಸಣೆ ಮಾಡುತ್ತಿದ್ದ ಸಿದ್ದಾಪುರ ಪೊಲೀಸರಿಗೆ(Siddapura Police) ನಾಲ್ವರು ಚೋರರು ಶ್ರೀಗಂಧದ ಮರಗಳ(Sandalwood Trees) ಸಮೇತ ಲಾಕ್ ಆಗಿದ್ದಾರೆ.
ಪ್ರಕರಣ ಸಂಬಂಧ ಶೇಖ್ ಶಾರೂಕ್, ಶೇಖ್ ಅಬ್ದುಲ್, ಪರಮೇಶ್, ರಾಮ್ ಭೂಪಾಲ್ ಎಂಬ ನಾಲ್ವರು ಶ್ರೀಗಂಧ ಕಳ್ಳರನ್ನು ಬಂಧಿಸಲಾಗಿದೆ. ಈರುಳ್ಳಿ ಮೂಟೆಗಳನ್ನ ಸಾಗಿಸುತ್ತಿದ್ದ ವ್ಯಾನ್ ಪರಿಶೀಲನೆ ಮಾಡುತ್ತಿದ್ದ ಪೊಲೀಸರು ವ್ಯಾನ್ ಕಂಡು ಬೆರಗಾಗಿದ್ದಾರೆ. ಪುಷ್ಪಾ ಸಿನಿಮಾ(Pushpa Cinema) ಮಾದರಿಯಲ್ಲಿಯೇ ಶ್ರೀಗಂಧದ ಮರದ ತುಂಡುಗಳನ್ನ ಚೀಲದ ಅಡಿಯಲ್ಲಿ ಹಾಕಿ ಮೇಲೆ ಈರುಳ್ಳಿ(Onion) ತುಂಬಿ ಸಾಗಿಸಲಾಗುತ್ತಿತ್ತು.
ಸಿರಾಜ್ ಎಂಬಾತನೇ ಈ ಗ್ಯಾಂಗ್ ನ ಪ್ರಮುಖನಾಗಿದ್ದು ಆಂಧ್ರದ ಕರ್ನೂಲ್ ಅರಣ್ಯದಿಂದ ಶ್ರೀಗಂಧ ಮರಗಳನ್ನು ಕಡಿದು ಈರುಳ್ಳಿ ಮಾರಾಟಗಾರರ ವೇಷದಲ್ಲಿ ಬೆಂಗಳೂರಿಗೆ ತಂದು ಇಲ್ಲಿಂದ ಚೀನಾಗೆ ಪೂರೈಕೆ ಮಾಡುತ್ತಿದ್ದ ಎನ್ನಲಾಗಿದೆ. ಪೊಲೀಸರು ನಾಕಾಬಂದಿ ಹಾಕಿ ಪರಿಶೀಲನೆ ನಡೆಸಿದಾಗ ಈರುಳ್ಳಿ ಮೂಟೆಗಳಲ್ಲಿ 18 ಶ್ರೀಗಂಧದ ಮರದ ತುಂಡುಗಳ ಬ್ಯಾಗ್ ಜಪ್ತಿಯಾಗಿದೆ.
ಆಂಧ್ರ ಮೂಲದ ಸಿರಾಜ್ ತನ್ನ ಗ್ಯಾಂಗ್ ನೊಂದಿಗೆ ಅಕ್ರಮವಾಗಿ ಖರೀದಿ ಮಾಡಿ ಬೆಂಗಳೂರಿನ ಡೀಲರ್‌ಗೆ(Bangalore Dealers) ತಲುಪಿಸಿ ಅಲ್ಲಿಂದ ಚೀನಾಗೆ ಪೂರೈಸುತ್ತಿದ್ದ(China Supply) ಎಂದು ಪೊಲೀಸರು ಮಾಹಿತಿ ಕಲೆ ಹಾಕಿದ್ದಾರೆ.
ಶ್ರೀಗಂಧ ಅಕ್ರಮ ಸಾಗಾಟದ ಜಾಲದ ಹಿಂದೆ ಬಿದ್ದಿರುವ ಪೊಲೀಸರು ತಲೆಮರೆಸಿಕೊಂಡಿರುವ ಬೆಂಗಳೂರಿನ ಡೀಲರ್‌ಗಾಗಿ ತಲಾಶ್ ನಡೆಸುತ್ತಿದ್ದಾರೆ.
ಇದನ್ನು ಓದಿ : ದಿ. ಬಂಗಾರಪ್ಪ ಸಾಮಾಜಿಕ ನ್ಯಾಯದ ಪ್ರತಿಪಾದನೆಯ ಧೀಮಂತ ನಾಯಕ: ರವೀಂದ್ರ ನಾಯ್ಕ
ಮಣ್ಕುಳಿಯಿಂದ ಸ್ಯಾಂಡಲ್‌ವುಡ್‌ಗೆ ಯುವ ಪ್ರತಿಭೆ ಜಯ್ ಡಿ. ಭಟ್ಕಳ. ಅಕ್ಟೋಬರ್ 31ಕ್ಕೆ ಪ್ಯಾನ್ ಇಂಡಿಯಾ ಸಿನೇಮಾ.
ಬೈಕ್ ನಲ್ಲಿ ಪಟಾಕಿ ಸಿಡಿಸಿ ಸ್ಟಂಟ್. ಕಾರವಾರ ಟ್ರಾಫಿಕ್ ಪೊಲೀಸರಿಂದ ಯುವಕರಿಬ್ಬರು ವಶಕ್ಕೆ.

