ಮಂಗಳೂರು (Manglore) : ಖಾಸಗಿ ಬೀಚ್ ರೆಸಾರ್ಟ್(Beach Resort) ನ ಈಜುಕೊಳದಲ್ಲಿ ಮುಳುಗಿ ಮೂವರು ಯುವತಿಯರು ಸಾವನ್ನಪ್ಪಿದ ಘಟನೆ ಮಂಗಳೂರು ಹೊರವಲಯದ ಉಚ್ಚಿಲ ಬೀಚ್(Uchil Beach) ಬಳಿ ನಡೆದಿದೆ.
ಮೈಸೂರು ಮೂಲದ(Mysore Native) ಮೂವರು ಯುವತಿಯರು ದುರ್ಮರಣಕ್ಕಿಡಾಗಿದ್ದಾರೆ. ಮೈಸೂರು ಕುರುಬರಹಳ್ಳಿ ನಾಲ್ಕನೇ ಕ್ರಾಸ್ ನಿವಾಸಿ ನಿಶಿತ ಎಂ.ಡಿ. (21), ಮೈಸೂರು (Mysore) ರಾಮಾನುಜ ರಸ್ತೆ, ಕೆ.ಆರ್ ಮೊಹಲ್ಲಾ ನಿವಾಸಿ ಪಾರ್ವತಿ ಎಸ್ (20) ಹಾಗೂ ಮೈಸೂರು ವಿಜಯನಗರ(Vijayanagar) ದೇವರಾಜ ಮೊಹಲ್ಲ ನಿವಾಸಿ ಕೀರ್ತನ ಎನ್(21) ಮೃತ ಯುವತಿಯರೆಂದು ಹೇಳಲಾಗಿದೆ.
ಶನಿವಾರ ಬೆಳಗ್ಗೆ ಬೀಚ್ ರೆಸಾರ್ಟ್ ಗೆ (Beach Resort) ಆಗಮಿಸಿದ ಮೂವರು ಯುವತಿಯರು ವಾಸ್ತವ್ಯ ಹೂಡಿದ್ದರು. ಭಾನುವಾರ ಬೆಳಿಗ್ಗೆ 8.30ರ ಸುಮಾರಿಗೆ ಸ್ವಿಮ್ಮಿಂಗ್ ಫೂಲ್(Swimming Fool) ನಲ್ಲಿ ಈಜಲು ತೆರಳಿದ್ದರು. ಸ್ವಿಮ್ಮಿಂಗ್ ಫೂಲ್ ನಲ್ಲಿ ಒಂದು ಬದಿ ಆರು ಅಡಿಯಷ್ಟು ಆಳವಿತ್ತು. ಈ ವೇಳೆ ಆಯತಪ್ಪಿ ಓರ್ವ ಯುವತಿ ಮುಳುಗಿದ್ದಾಳೆ. ಅವಳನ್ನ ರಕ್ಷಿಸಲು ಹೋದ ಇನ್ನಿಬ್ಬರು ಮುಳುಗಿದ್ದಾರೆ.
ಉಳ್ಳಾಲ ಪೊಲೀಸರು (Ullal police) ಸ್ಥಳಕ್ಕೆ ಆಗಮಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ರೆಸಾರ್ಟ್ (Resort) ಮಾಲಕ ಮನೋಹರ್ ಪುತ್ರನ್‌ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ. ರೆಸಾರ್ಟ್‌ನಲ್ಲಿ ನಿಯಮ ಪಾಲಿಸದೇ ಇರೋದೆ ಘಟನೆಗೆ ಕಾರಣ ಎಂದು ಗೊತ್ತಾಗಿದೆ.
ಇದನ್ನು ಓದಿ : ಹೊಳೆಯಲ್ಲಿ ಮುಳುಗಿದ ಇಬ್ಬರನ್ನ ಆಪತ್ಬಾಂಧವನಂತೆ ಬಂದು ರಕ್ಷಿಸಿದ ಯುವಕ
ಖಜಾನೆ ಅಧಿಕಾರಿಗಳ ಮೇಲೆ ಲೋಕಾಯುಕ್ತರ ದಾಳಿ
ಗಾಂಜಾ ಮಾರಾಟಕ್ಕೆ ಯತ್ನಿಸುತ್ತಿದ್ದ ಮೂವರ ಬಂಧನ