ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಬೆಂಗಳೂರು(Bangalore) : ಇತ್ತಿಚಿಗಷ್ಟೆ ಅದ್ಧೂರಿಯಾಗಿ ಸೀಮಂತ ಶಾಸ್ತ್ರ ಮಾಡಿಸಿಕೊಂಡಿದ್ದ ನಟಿ ಭಾವನಾ ರಾಮಣ್ಣ (Bhavana Ramanna) ಅವರು ತಾಯಿಯಾಗಿದ್ದಾರೆ.
ಅವರ ಅವಳಿ ಐವಿಎಫ್ (IVF) ಶಿಶುಗಳಲ್ಲಿ ಒಂದು ಮಗು ಸಾವನ್ನಪ್ಪಿದ್ದಾಗಿ ಗೊತ್ತಾಗಿದೆ. ಐವಿಎಫ್ ಮೂಲಕ ಮಗು ಮಾಡಿಕೊಳ್ಳಲು ಮುಂದಾಗಿದ್ದ 40 ವರ್ಷದ ಭಾವನಾಗೆ ಎರಡು ವಾರದ ಹಿಂದೆ ಹೆರಿಗೆ ಆಗಿದೆ. ಹೆರಿಗೆ ಸಂದರ್ಭದಲ್ಲೇ ಒಂದು ಮಗು ಮೃತಪಟ್ಟಿದೆ. ಇನ್ನೊಂದು ಒಂದು ಮಗು ಆರೋಗ್ಯವಾಗಿದೆ. ಹೆಣ್ಣು ಮಗುವಿಗೆ ನಟಿ ಭಾವನಾ(Bhavana) ತಾಯಿ ಆಗಿದ್ದಾರೆ.
ನಟಿ ಭಾವನಾ ಗರ್ಭಿಣಿಯಾಗಿ ಏಳು ತಿಂಗಳು ತುಂಬಿದಾಗ ಹೊಟ್ಟೆಯಲ್ಲಿದ್ದ ಒಂದು ಶಿಶುವಿನ ಆರೋಗ್ಯದಲ್ಲಿ ಸಮಸ್ಯೆ ಕಾಣಿಸಿಕೊಂಡಿದೆ. ಹೀಗಾಗಿ ವೈದ್ಯರ ಅಲಹೆಯಂತೆ ಎಂಟು ತಿಂಗಳಿಗೆ ಹೆರಿಗೆ ಮಾಡಿಸಲಾಗಿದೆ.
ಮದುವೆಯಾಗದೆ ಸಿಂಗಲ್ ಮದರ್(Single Mother) ಅನಿಸಿಕೊಳ್ಳುತ್ತಿರುವ ಭಾವನಾ ಐವಿಎಫ್(IVF) ಚಿಕಿತ್ಸೆ ಮೂಲಕ ಈಗ ತಾಯಿಯಾಗಿದ್ದಾರೆ.
ಇದನ್ನು ಓದಿ : ಅಂಕೋಲಾದಲ್ಲಿ ಪ್ರೀತಿಸುತ್ತಿದ್ದ ಹುಡುಗಿಯೊಂದಿಗೆ ನಾಪತ್ತೆಯಾದ ಹುಡುಗ. ಮದುವೆಯಾಗಿ ಠಾಣೆಯಲ್ಲಿ ಪ್ರತ್ಯಕ್ಷ.
ಶಿರಸಿಯಲ್ಲಿ ಗುಂಡು ತಗುಲಿ ಬಾಲಕ ಸಾವು: ಪ್ರಕರಣಕ್ಕೆ ತಿರುವು, ಇಬ್ಬರು ವಶಕ್ಕೆ.
	
						
							
			
			
			
			
