ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಕಾರವಾರ(Karwar) : ಬುಧವಾರ ರಾತ್ರಿ ನಗರದ ಟ್ಯಾಗೋರ್ ಕಡಲತೀರದ ಮಯೂರವರ್ಮ ವೇದಿಕೆಯಲ್ಲಿ ಖ್ಯಾತ ಗಾಯಕ ಸೋನು ನಿಗಮ್(Famous Singer Sonu Nigam) ನೆರೆದ ಪ್ರೇಕ್ಷಕರನ್ನು ಹುಚ್ಚೆದ್ದು ಕುಣಿಸಿದರು.

ಕರಾವಳಿ ಉತ್ಸವದ(Karavali utsav) ಅಂಗವಾಗಿ ಸೋನು ನಿಗಮ್ ತಮ್ಮ ಕಾರ್ಯಕ್ರಮ ಪ್ರಸ್ತುತಪಡಿಸಿದರು. ಈ ಸಂದರ್ಭದಲ್ಲಿ ಹಾಡುತ್ತಲೆ ಅವರು ವೇದಿಕೆಯಲ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಾ, ನಾನು ಹಿಂದಿ ಭಾಷಿಕನಾದರೂ ಕಳೆದ ಜನ್ಮದಲ್ಲಿ ಕನ್ನಡಿಗನಾಗಿದ್ದೆ ಅನ್ನಿಸುತ್ತಿದೆ. ಅದೇ ಕಾರಣಕ್ಕೆ ಕನ್ನಡ ಹಾಡು ಹಾಡುವಾಗ ಸಾಹಿತ್ಯಕ್ಕೆ ತಕ್ಕಂತೆ ಭಾವನೆಯೂ ಮೂಡುತ್ತದೆ ಎಂದು ಹೇಳಿದರು.
ರಾತ್ರಿ 9-55ಕ್ಕೆ ಹಿಂದಿ ಹಾಡುಗಳ ಮೂಲಕ ತಮ್ಮ ಗಾಯನ ಆರಂಭಿಸಿದ ಸೋನು ನಿಗಮ್ ನಂತರ ‘ಈ ಸಂಜೆ ಯಾಕಾಗಿದೆ..’ ಕನ್ನಡ ಗೀತೆಗೆ ನಾಂದಿ ಹಾಡಿದರು. ತಮ್ಮಗಾಯನ ನಡುವೆ ಪರೋಕ್ಷವಾಗಿ ಕನ್ನಡಿಗರ ಬಳಿ ಮತ್ತೊಮ್ಮೆ ಕ್ಷಮೆ ಕೋರಿದರು.
ಮೇ ತಿಂಗಳಲ್ಲಿ ಬೆಂಗಳೂರಿನ ಈಸ್ಟ್ ಪಾಯಿಂಟ್ ಕಾಲೇಜ್ ಆಫ್ ಎಂಜಿನಿಯರಿಂಗ್ ಅಂಡ್ ಟೆಕ್ನಾಲಜಿಯಲ್ಲಿ ನಡೆದಿದ್ದ ಸಂಗೀತ ಕಾರ್ಯಕ್ರಮದಲ್ಲಿ ಕನ್ನಡ ಹಾಡು ಹಾಡಲು ಒತ್ತಾಯಿಸಿದ್ದಕ್ಕೆ ಕನ್ನಡಿಗರ ವರ್ತನೆಗೆ ಪಹಲ್ಗಾಮ್ ದಾಳಿ ಘಟನೆಗೆ ಹೋಲಿಸಿದ್ದು ಬಾರೀ ಆಕ್ಷೇಪಕ್ಕೆ ಕಾರಣವಾಗಿತ್ತು.
ಆ ಘಟನೆ ನಂತರ ಇದೇ ಮೊದಲ ಬಾರಿಗೆ ಕಾರವಾರದಲ್ಲಿ ಸೋನು ನಿಗಮ್ ಸಂಗೀತ ಸುಧೆ ಹರಿಸಿದರು. ನಡುವೆ ಒಂದು ತಾಸುಗಳ ಕಾಲ ಕನ್ನಡ ಹಾಡುಗಳನ್ನು ಹಾಡುತ್ತಾ. ನೆರೆದವರನ್ನ ರಂಜಿಸಿದರು. ಹತ್ತಿರ ಹತ್ತಿರ ಲಕ್ಷದ ಸಮೀಪ ಜನ ಸೇರಿದ್ದರು.
ಇದನ್ನು ಓದಿ : ಹೊನ್ನಾವರ: ಮಂಕಿ ಪಟ್ಟಣ ಪಂಚಾಯತ್ ಚುನಾವಣೆಯಲ್ಲಿ ಬಿಜೆಪಿ ಸ್ಪಷ್ಟ ಬಹುಮತ
ಕಾರವಾರದಲ್ಲಿ ಕೈಗಾ ಉದ್ಯೋಗಿ ಲೈವ್ ಸೂಡ್. ಮಲ್ಲಾಪುರ ಠಾಣೆಯಲ್ಲಿ ಪ್ರಕರಣ.*
