ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ನವದೆಹಲಿ(Newdelhi) : ಕೆಲ ತಿಂಗಳ ಹಿಂದೆ ಸಂಚಲನ ಉಂಟು ಮಾಡಿದ್ದ ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ(Renukaswami murder) ಪ್ರಕರಣದಲ್ಲಿ ಕರ್ನಾಟಕ ಹೈಕೋರ್ಟ್(High court) ನೀಡಿದ್ದ ಜಾಮೀನನ್ನು ಸುಪ್ರೀಂಕೋರ್ಟ್(Supremcourt) ರದ್ದುಪಡಿಸಿದೆ. ಹೀಗಾಗಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ತೂಗುದೀಪ(Toogudeep Darshan), ಪವಿತ್ರಾ ಗೌಡ(Pavitra Gouda) ಮತ್ತೆ ಜೈಲು ಸೇರಬೇಕಾದ ಪರಿಸ್ಥಿತಿ ಬಂದಿದೆ.
ಇಡೀ ದೇಶದ ಗಮನ ಸೆಳೆದಿದ್ದ ಈ ಪ್ರಕರಣದಲ್ಲಿ ದರ್ಶನ್ ತೂಗುದೀಪ ಮತ್ತು ಅವರ ಗ್ಯಾಂಗ್ ಮತ್ತೆ ಜೈಲು ಸೇರಬೇಕಾಗಿದೆ. ಕರ್ನಾಟಕ ಹೈಕೋರ್ಟ್(Karnataka Highcourt) ನೀಡಿದ್ದ ಜಾಮೀನು ರದ್ದುಪಡಿಸುವ ಮೂಲಕ ಕೊಲೆ ಆರೋಪಿಗಳಿಗೆ ದೊಡ್ಡ ಶಾಕ್ ನೀಡುವುದರ ಮೂಲಕ ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳು ದೊಡ್ಡ ಸಂದೇಶ ರವಾನಿಸಿದ್ದಾರೆ. ಈ ಸಂದರ್ಭದಲ್ಲಿ ಕಾನೂನಿನ ಮುಂದೆ ಎಲ್ಲರೂ ಸಮಾನರು ಸುಪ್ರಿಮಕೋರ್ಟ್ ತಿಳಿಸಿದೆ.
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ತೂಗುದೀಪ ಅವರಿಗೆ ಜಾಮೀನು ನೀಡಿದ್ದನ್ನು ಪ್ರಶ್ನಿಸಿ ಕರ್ನಾಟಕ ಪೊಲೀಸರು(Karnataka Police) ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು.
ಕಳೆದ ವರ್ಷ ಜೂನ್ 11ರಂದು ದರ್ಶನ್ ಬಂಧನಕ್ಕೊಳಗಾಗಿ ನಾಲ್ಕು ತಿಂಗಳು ಜೈಲಿನಲ್ಲಿದ್ದರು. ಬೆನ್ನು ನೋವಿನ ಕಾರಣಕ್ಕಾಗಿ ಅವರಿಗೆ ಜಾಮೀನು ನೀಡಲಾಗಿತ್ತು. ಇದೀಗ ಸುಪ್ರಿಮಕೋರ್ಟ್ ಬಾರೀ ಹೊಡೆತ ನೀಡಿದೆ.
ಇದನ್ನು ಓದಿ : ಶಾಸಕರ ಮನೆಯಲ್ಲಿ ಬೆಳಿಗ್ಗೆವರೆಗೆ ಮುಂದುವರಿದ ಇಡಿ ತಪಾಸಣೆ. ಎರಡು ಟ್ರಂಕ್ ನಷ್ಟು ನಗದು ಜಪ್ತಿ ಸಾಧ್ಯತೆ.
ಭಟ್ಕಳಕ್ಕೆ ಗಾಂಜಾ ಸಾಗಾಟ. ಪೊಲೀಸರ ದಾಳಿ. ಓರ್ವನ ಬಂಧನ. ಮತ್ತೋರ್ವ ಪರಾರಿ.