ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಬೆಳಗಾವಿ (Belagavi) : ಪಡೆದ ಸಾಲದ ಹಣ ವಾಪಾಸ್ ನೀಡಿಲ್ಲ, ಸರಿಯಾಗಿ ಬಡ್ಡಿ ಕಟ್ಟಿಲ್ಲ ಎಂದು ಮಹಿಳೆಯೊಬ್ಬಳು ಸಾಲ(Loan) ಪಡೆದ ಮಹಿಳೆಯ ಅಪ್ರಾಪ್ತ ಮಗಳನ್ನು ತನ್ನ ಮಗನ ಜೊತೆ ಮದುವೆ(Minor Marriage) ಮಾಡಿಸಿ ಸಿಕ್ಕಿಬಿದ್ದಿದ್ದಾಳೆ.
ಬೆಳಗಾವಿಯಲ್ಲಿ ನಗರ(Belagavi Town) ವ್ಯಾಪ್ತಿಯ ಟಿಳಕವಾಡಿ ಪೊಲೀಸ್ ಠಾಣಾ (Tilakawadi Police Station) ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಆರೋಪಿ ವಿರುದ್ಧ ಫೋಕ್ಸೋ (Pocso) ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಅಪ್ರಾಪ್ತೆಯನ್ನು ಮದುವೆಯಾದ ಆರೋಪಿ ವಿಶಾಲ್ ಡವಳಿ ಮತ್ತು ಅವಮ ತಾಯಿ ರೇಖಾ ಡವಳಿಯನ್ನು ಪೊಲೀಸರು ಬಂಧಿಸಿದ್ದಾರೆ.
ಸವದತ್ತಿ ತಾಲೂಕಿನ ಯಕ್ಕುಂಡಿ ಗ್ರಾಮದ ಬಾಲಕಿ ಅನಾರೋಗ್ಯದಿಂದ ತನ್ನ ತಾಯಿಯೊಂದಿಗೆ ಬೆಳಗಾವಿಯಲ್ಲಿ ವಾಸವಾಗಿದ್ದಳು. ಮಗಳ ಆಸ್ಪತ್ರೆ ಖರ್ಚಿನ ಸಂಬಂಧ ಬಾಲಕಿಯ ತಾಯಿ ಬೆಳಗಾವಿ ಮಂಗಾಯಿನಗರ ವಡಗಾಂವ ನಿವಾಸಿ ರೇಖಾ ಪುಂಡಲೀಕ ಡವಳಿ ಬಳಿ 50 ಸಾವಿರ ಹಣ ಪಡೆದಿದ್ದರು. ಹಣ ವಾಪಸ್ಸು ನೀಡಲು ಸಾಧ್ಯವಾಗದಿದ್ದಾಗ ಬಾಲಕಿ ತಾಯಿ ಬಂಗಾರದ ಕಿವಿಯೊಲೆಯನ್ನು ಆರೋಪಿಗಳ ಬಳಿ ಒತ್ತೆ ಇಟ್ಟಿದ್ದರು. ಇಷ್ಟಕ್ಕೆ ಸುಮ್ಮನಾಗದ ಆರೋಪಿ ರೇಖಾ, “ನನ್ನ ಮಗ ವಿಶಾಲನಿಗೆ ನಿಮ್ಮ ಮಗಳನ್ನು ಮದುವೆ ಮಾಡಿಕೊಡಿ” ಎಂದು ಬಾಲಕಿಯ ತಾಯಿಗೆ ಹೇಳಿದ್ದಾಳೆ. ಇದಕ್ಕೆ ಬಾಲಕಿ ತಾಯಿ ಒಪ್ಪಿಲ್ಲ. ಹಾಗೇ, ಬಾಲಕಿ ಕೂಡ ಮದುವೆಗೆ ವಿರೋಧ ವ್ಯಕ್ತಪಡಿಸಿದ್ದಾಳೆ. ತಾನು ಓದಬೇಕು, ಮದುವೆ ಆಗುವುದಿಲ್ಲ” ಬಾಲಕಿ ಹೇಳಿದ್ದಾಳೆ.
2024ರ ನವೆಂಬರ್ 17 ರಂದು ಬಾಲಕಿಯ ಮನೆಗೆ ಆರೋಪಿ ಕಡೆಯವರು ಹೋಗಿ ಬಾಲಕಿ ಮತ್ತು ಬಾಲಕಿ ಚಿಕ್ಕಪ್ಪನನ್ನು ಒತ್ತಾಯಪೂರ್ವಕವಾಗಿ ಆಟೋದಲ್ಲಿ ಕೂರಿಸಿಕೊಂಡು ವಡಗಾಂವ ಮಂಗಾಯಿನಗರದಲ್ಲಿರುವ ಅವರ ಮನೆಗೆ ಕರೆದುಕೊಂಡು ಹೋಗಿದ್ದಾರೆ. ಬಳಿಕ ವಿವಾಹ ಮಾಡಿಸಿದ್ದಾರೆ.
ಇದೀಗ ಠಾಣೆಯಲ್ಲಿ ದೂರು ದಾಖಲಿಸಿದ್ದು ಮದುವೆಯಾದ ವ್ಯಕ್ತಿ ತನ್ನ ಜೊತೆ ಬಲವಂತದ ದೈಹಿಕ ಸಂಪರ್ಕ ಬೆಳೆಸಿದ್ದಾನೆ ಎಂದು ಆರೋಪಿಸಿ ಅಪ್ರಾಪ್ತೆ ದೂರಿದ್ದಾಳೆ. ಬಲವಂತದ ಮದುವೆ ಮಾಡಿಸಿದ ಅತ್ತೆ ಮಾವ ಹಾಗೂ ಬಲವಂತದ ದೈಹಿಕ ಸಂಪರ್ಕ ಸಾಧಿಸಿದ ಗಂಡನ ವಿರುದ್ಧ ಟಿಳಕವಾಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ. ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಇದನ್ನು ಓದಿ : ಟ್ರೈನಿ ವೈದ್ಯೆ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಆರೋಪಿ ದೋಷಿ ಎಂದು ಸಾಬೀತು.
ಗ್ರಾಮೀಣ ಸೊಗಡಿನ ಕೊಗ್ತಿ ಜಾತ್ರೆ ಸಂಪನ್ನ.
ಯಕ್ಷ ದಿಗ್ಗಜನ ಆಸೆ ಈಡೇರಿಸಿದ ಹಿರಿಯ ನಟಿ. ಪ್ರೇಕ್ಷಕರ ಎದುರು ಸಖತ್ ಮಿಂಚಿಂಗ್.