ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಹೊನ್ನಾವರ(Honnavar) : ಪ್ರಕರಣದಾಖಲಾದ ಕೆಲವೇ ಗಂಟೆಗಳಲ್ಲಿ ಆರೋಪಿಗಳನ್ನ ಬಂಧಿಸಿ ಕದ್ದ ಮಾಲನ್ನು ವಶಪಡಿಸಿಕೊಳ್ಳುವಲ್ಲಿ ಹೊನ್ನಾವರ ಪೊಲೀಸರು(Honnavar Police) ಯಶಸ್ವಿಯಾಗಿದ್ದಾರೆ.
ಪ್ರಕರಣದಲ್ಲಿ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ಕದ್ದ ಮಾಲನ್ನು(Theft Material) ವಶಪಡಿಸಿಕೊಂಡಿದ್ದಾರೆ. ಹೊನ್ನಾವರ ತಾಲೂಕಿನ ಸಂಶಿ ದಾಸಗೋಡ ನಿವಾಸಿಗಳಾದ ಅಬ್ದುಲ್ ವಾಜೀದ್ ಅಬ್ದುಲ್ ಗನಿ ಸಾಬ್ ಮತ್ತು ಅಪ್ತಾಬ್ ಮಹಮ್ಮದ್ ಬಂಧಿತ ಆರೋಪಿಗಳಾಗಿದ್ದಾರೆ.
ಫೆಬ್ರವರಿ 23 ರ ಬೆಳಗ್ಗೆಯಿಂದ ಮಾರ್ಚ್ 4 ರ ಮಧ್ಯಾಹ್ನದ ನಡುವಿನ ಅವಧಿಯಲ್ಲಿ ಉಪ್ಪೋಣಿಯಲ್ಲಿರುವ(Upponi) ಗೋಡೌನ್ ನಿಂದ ಕಳ್ಳರು ಕೈಚಳಕ ತೋರಿದ್ದರು. ಒಟ್ಟು 89,000 ರೂ. ಮೌಲ್ಯದ ಹೊಸ ಹಾಗೂ ಹಳೆಯ ವಾಯರ್ ಬಂಡಲ್ಗಳು, ಫ್ಲವರ್ ಪಾಟ್ ಮತ್ತು ಫೈಬರ್ ಟ್ಯೂಬ್ ಲೈಟ್ಗಳನ್ನು ಕಳವು ಮಾಡಲಾಗಿತ್ತು. ಈ ಬಗ್ಗೆ ಮಾರ್ಚ್ 16 ರಂದು ಹೊನ್ನಾವರ ಪೊಲೀಸ್ ಠಾಣೆಯಲ್ಲಿ(Honnavar Police Station) ಪ್ರಕರಣ ದಾಖಲಾಗಿತ್ತು.
ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆಗೆ ಇಳಿದಿದ್ದರು. ಖಚಿತ ಮಾಹಿತಿ ಕಲೆ ಹಾಕಿದ ತನಿಖಾ ತಂಡ ಕೇವಲ 12 ತಾಸಿನೊಳಗೆ ಆರೋಪಿಗಳನ್ನ ಬಂಧಿಸಿತು. ವಿಚಾರಣೆ ವೇಳೆ ಆರೋಪಿಗಳು ತಪ್ಪೊಪ್ಪಿಕೊಂಡಿದ್ದಾರೆ. ಬಂಧಿತರಿಂದ ಒಟ್ಟು 65,000 ರೂ. ಬೆಲೆಬಾಳುವ ಕದ್ದ ವಸ್ತುಗಳನ್ನು ಹಾಗೂ ಕೃತ್ಯಕ್ಕೆ ಬಳಸಿದ್ದ ‘ಪಲ್ಸರ್’ ಬೈಕನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ಅವರಿಗೆ ನ್ಯಾಯಾಂಗ ಬಂಧನ ವಿಧಿಸಿದೆ.
ಇದನ್ನು ಓದಿ : ‘ಮಿಸ್ ಕಾರವಾರ’ ಆಗಿ ಕಾಂಚನಾ ಗೌಡ. ಕೋಲ್ಕತ್ತಾ ಮೂಲದ ಸುತಪಾ ರನ್ನರ್ ಅಪ್.
ಭಟ್ಕಳದಲ್ಲಿ ಕೂಲಿ ಕಾರ್ಮಿಕ ಸಂಶಯಾಸ್ಪದ ಸಾವು. ಪೊಲೀಸರಿಂದ ತನಿಖೆ.
ಭಟ್ಕಳದಲ್ಲಿ ಕದ್ದು ಮುಚ್ಚಿ ಜಾನುವಾರು ಸಾಗಾಟ. ಇಬ್ಬರಿಗೆ ಹೆಡೆಮುರಿ ಕಟ್ಟಿದ ಪೊಲೀಸರು.
