ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news)ಶಿರಸಿ(Sirsi) : ಹಿಂದು ಪೈರ್ ಬ್ರ್ಯಾಂಡ್, ಮಾಜಿ ಸಂಸದ ಅನಂತಕುಮಾರ್ ಹೆಗಡೆ(Anantkumar Hegade) ಅವರಿಗೆ ಮುಂಬೈ ಮೂಲದ ವ್ಯಕ್ತಿಯೋರ್ವನ ಇಮೇಲ್ ನಿಂದ ಬೆದರಿಕೆ(Threat) ಬಂದಿದೆ.
ಶಿರಸಿ ಮಾರುಕಟ್ಟೆ ಠಾಣೆಯಲ್ಲಿ(Sirsi Market Station)  ಅನಂತಕುಮಾರ್ ಆಪ್ತ ಕಾರ್ಯದರ್ಶಿ ಸುರೇಶ್ ಶೆಟ್ಟಿ ಅವರು ದೂರು ದಾಖಲಿಸಿದ್ದಾರೆ. ಮುಂಬೈ ಮೂಲದ(Mumbai Native) ವಿನಿತ್ ಕಜೇರಿಯ ಎನ್ನುವ 76 ವರ್ಷದ ವ್ಯಕ್ತಿಯ ವಿರುದ್ದ ದೂರನ್ನ ದಾಖಲಿಸಿದ್ದಾರೆ.  ಜೂನ್ 23ರಂದು ದಾಬಸಪೇಟೆಯಲ್ಲಿ ವಾಹನ ಓವರ್ ಟೇಕ್ ಮಾಡಿದ ಕಾರಣಕ್ಕೆ ಗಲಾಟೆ ನಡೆದಿತ್ತು. ಅದಾದ ಮಾರನೇ ದಿನ ಜೂನ್ 24ರಂದು ಬೆದರಿಕೆ ಪತ್ರ ಬಂದಿದೆ. ಆಗ ಎನ್ಸಿ ಪ್ರಕರಣ ದಾಖಲಾಗಿತ್ತು. ಇದೀಗ ನ್ಯಾಯಾಲಯದ ಅನುಮತಿ ಪಡೆದು ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
 
ಸದಾ ಒಂದಿಲ್ಲೊಂದು ವಿವಾದದ ಮೂಲಕ ಹೆಸರಾಗಿರುವ ರಾಜಕಾರಣಿ ಅನಂತಕುಮಾರ. ಹಿಂದುತ್ವ ವಿಚಾರದಲ್ಲಿ ತಮ್ಮ ಭಾಷಣದ ಮೂಲಕವೇ ಅಪಾರ ಅಭಿಮಾನಿಗಳನ್ನ ಹೊಂದಿರುವ  ಹೆಗಡೆಗೆ ಆಗಾಗ ಜೀವ ಬೆದರಿಕೆ ಕರೆಗಳು ಬರುತ್ತಲೇ ಇದೆ. ಈ ಬಗ್ಗೆ  ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿವೆ.
ಆರೋಪಿತ ಮೇಲ್ ಮೂಲಕ ಕಳಿಸಿದ ಬೆದರಿಕೆ ಪತ್ರದಲ್ಲಿ ಹಿಂದು ಮುಸ್ಲೀಂ ಎಂದು ದ್ವೇಷ ಮಾಡುವುದರ ಕಿಡಿಕಾರಿದ್ದಾನೆ. ಈಗಾಗಲೇ ಪೊಲೀಸರು ಸಹ ಅವರ ಮನೆಗೆ ರಕ್ಷಣೆಯನ್ನ ಕೊಟ್ಟಿದ್ದಾರೆ. ಸದ್ಯ ಅವರಿಗೆ ಹೆಚ್ಚಿನ ರಕ್ಷಣೆ ಕೊಡುವ ಬಗ್ಗೆ ಚರ್ಚಿಸಲಾಗುವುದು ಎಂದು ಉತ್ತರ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ದೀಪನ್ ಎಂ ಎನ್ ತಿಳಿಸಿದ್ದಾರೆ.
ಇದನ್ನು ಓದಿ : ಪತ್ರಕರ್ತ ಗುರುಪ್ರಸಾದ ಹೆಗಡೆ ಅನಾರೋಗ್ಯದಿಂದ ನಿಧನ. ಪತ್ರಕರ್ತರ ಸಂತಾಪ.
ಬಾಲಕಿ ಪ್ರಾಣ ತೆಗೆದ ಜೋಕಾಲಿ. ಭಟ್ಕಳದ ತೆರ್ನಮಕ್ಕಿಯಲ್ಲಿ ಸಂಭವಿಸಿದ ಘಟನೆ.
ಲಂಚ ಪ್ರಕರಣದಲ್ಲಿ ಸಿಕ್ಕಿ ಬಿದ್ದ ಜಿಲ್ಲಾ ಸರ್ಜನ್ ಡಾ. ಶಿವಾನಂದ ಕುಡ್ತಲಕರ್ ಅಮಾನತ್ತು
	
						
							
			
			
			
			
