ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news)ಭಟ್ಕಳ(Bhatkal) : ಇಲ್ಲಿನ ಶಹರ ಠಾಣೆಗೆ ಇ-ಮೇಲ್ ಸಂದೇಶವೊಂದನ್ನ ಕಳಿಸಿದ ವ್ಯಕ್ತಿಯೋರ್ವ ಬಾಂಬ್ ಸ್ಪೋಟಿಸುವ ಬೆದರಿಕೆ (Bomb Threat) ಹಾಕಿದ್ದಾನೆ.
ಜುಲೈ 10ರಂದು ಬೆಳಿಗ್ಗೆ ಎರಡು ಇ-ಮೇಲ್ ಸಂದೇಶವನ್ನು(Email Message) ಕಳಿಸಿ ಬೆದರಿಕೆ ಹಾಕಲಾಗಿದೆ. ಕಣ್ಣನ್ ಗುರುಸ್ವಾಮಿ ಎಂಬ ಹೆಸರಿನ ವ್ಯಕ್ತಿಯಿಂದ [email protected] ನಿಂದ ಭಟ್ಕಳ ಶಹರ ಠಾಣೆಗೆ ಇಮೇಲ್ ಸಂದೇಶ ಕಳಿಸಲಾಗಿದೆ. ಭಟ್ಕಳ ಶಹರ ಠಾಣೆಯ [email protected] ಗೆ ಈಮೇಲ್ ಸಂದೇಶ ಬಂದಿದೆಯೆಂದು ತಿಳಿದು ಬಂದಿದೆ.
ಇ-ಮೇಲ್ ಸಂದೇಶದಲ್ಲಿ ಭಟ್ಕಳದಲ್ಲಿ(Bhatkal) ಬಾಂಬ್ ಸ್ಫೋಟಿಸುವ ಬಗ್ಗೆ ಆತ ಉಲ್ಲೇಖಿಸಿದ್ದಾನೆ ಎನ್ನಲಾಗಿದೆ. ಇದರಿಂದ ಅಲರ್ಟ್ ಭಟ್ಕಳ ಪೊಲೀಸರು ಕೆಲ ಕಡೆಗಳಲ್ಲಿ ತಪಾಸಣೆ ನಡೆಸಿದ್ದಾರೆ. ಬಾಂಬ್ ನಿಷ್ಕ್ರಿಯ ದಳ ಭಟ್ಕಳದಲ್ಲಿ ಬೀಡು ಬಿಟ್ಟಿದ್ದು ನಗರದ ಪ್ರಮುಖ ಸ್ಥಳಗಳಲ್ಲಿ ದಳ ತಪಾಸಣೆ ನಡೆಸಿದೆ.
ಇಮೇಲ್ ಸಂದೇಶಕ್ಕೆ ಸಂಬಂಧಿಸಿ ಭಟ್ಕಳ ಶಹರ(Bhatkal Town) ಪೊಲೀಸರು ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿದ್ದಾರೆ. ಬೆದರಿಕೆ ಸಂದೇಶ ಕಳಿಸಿದಾತನಿಗಾಗಿ ಶೋಧ ನಡೆಸಿದ್ದಾರೆ.
ಇದನ್ನು ಓದಿ : ಕಾರವಾರದಲ್ಲಿ ತಪ್ಪಿದ ಬಾರೀ ಅನಾಹುತ. ಮರ ತೆರವುಗೊಳಿಸುವ ವೇಳೆ ಬುಡ ಸಮೇತ ಕೆಳಕ್ಕೆ ಬಿದ್ದ ಕಾರ್ಮಿಕ. ಬಚಾವ್.
ಕಾರವಾರ ಜಿಲ್ಲಾಸ್ಪತ್ರೆಯ ಸರ್ಜನ್ ಡಾ ಶಿವಾನಂದ ರೆಡ್ ಹ್ಯಾಂಡಾಗಿ ಲೋಕಾಯುಕ್ತ ಬಲೆಗೆ.