ಕಾರವಾರ(KARWAR): ಶಿರೂರು ದುರ್ಘಟನೆಗೆ ಸಂಬಂಧಿಸಿ ಗುರುವಾರ ಕಠಿಣ ಕಾರ್ಯಾಚರಣೆ ನಡೆಸಲಾಗಿದೆ.

10 ನೇ ದಿನದ ಕಾರ್ಯಾಚರಣೆಯಲ್ಲಿ ನಿವೃತ್ತ ಮೇಜರ್ ಇಂದ್ರಪಾಲ್ ನೇತೃತ್ವದಲ್ಲಿ ಐಬೋಡ್ ಮೂಲಕ ಪತ್ತೆ ಕಾರ್ಯ ನಡೆದಿದೆ.

ಈಗಾಗಲೇ ನೌಕಾಪಡೆ, ಭೂಸೇನೆ (ARMY), ಎನ್ಡಿಆರ್ಎಪ್, ಎಸ್ಡಿಆರ್ಎಪ್, ಪೊಲೀಸರು ನಿರಂತರವಾಗಿ ಶ್ರಮಿಸುತ್ತಿದ್ದಾರೆ. ಈಗಾಗಲೇ ಹಲವು ಬಾರೀ ದ್ರೋಣ್ ಮೂಲಕ ಘಟನಾ ಸ್ಥಳದಲ್ಲಿ ಅಂಗಡಿ ಇರುವ ಗಂಗಾವಳಿ ನದಿಯಲ್ಲಿ ಸ್ಕ್ಯಾನಿಂಗ್ ಮಾಡಲಾಗುತ್ತಿದೆ.

ಕಾರವಾರ ಶಾಸಕರ ವಿಶೇಷ ಆಸಕ್ತಿಯಿಂದ ಈಗಾಗಲೇ ಎರಡು ಬೂಮರ್ ಯಂತ್ರಗಳು ಕೆಲಸ ಮಾಡುತ್ತಿವೆ. ಘಟನಾ ಸ್ಥಳದಲ್ಲಿ ಯಾವುದೇ ಇಲೆಕ್ಟ್ರಾನಿಕ್ಸ್ ವಸ್ತುಗಳ ನಿಷೇಧಿಸಲಾಗಿದೆ.

ಒಂದು ಹಂತದಲ್ಲಿ ಕೇರಳದ ಅರ್ಜುನ್(ARJUN) ಇರುವ ಟ್ರಕ್ ಪತ್ತೆಯಾಗಿದೆ. ಇದರ ಜೊತೆಗೆ ಇನ್ನೂ ಮೂರು ವಾಹನಗಳು ಪತ್ತೆಯಾಗಿದೆ ಎನ್ನಲಾಗಿದೆ. ಸಂಜೆ ವೇಳೆ ಇಂದಿನ ಕಾರ್ಯಾಚರಣೆ ಬಗ್ಗೆ ಬಹುತೇಕ ಮಾಹಿತಿ ಲಭ್ಯವಾಗುವ ಸಾಧ್ಯತೆ ಇದೆ.