ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಕುಮಟಾ(Kumta) : ಉತ್ತರಕನ್ನಡ ಜಿಲ್ಲೆಯ ಕೆಲ ತಾಲೂಕುಗಳಲ್ಲಿ ಅಕಾಲಿಕ ಮಳೆ(Rain) ಮುಂದುವರಿದಿದೆ. ಗುಡುಗು-ಸಿಡಿಲಿನೊಂದಿಗೆ (Thunderstorm) ಸುರಿದ ಮಳೆಯಿಂದಾಗಿ ಕುಮಟಾ(Kumta) ತಾಲೂಕು ಆಡಳಿತ ಸೌಧದ ಕಟ್ಟಡಕ್ಕೆ ಹಾನಿ ಉಂಟಾಗಿದೆ.
ಸಿಡಿಲಿನ ಆರ್ಭಟಕ್ಕೆ ಆಡಳಿತ ಸೌಧ ಕಟ್ಟಡದ ಮುಂಭಾಗಕ್ಕೆ ಹಾನಿಯಾಗಿದ್ದು, ಸೌಧದ ನಾಮಫಲಕದ ಅಕ್ಷರಗಳು ಉದುರಿ ಬಿದ್ದಿವೆ. ಪರಿಣಾಮವಾಗಿ ಸೌಧದ ಸಂಪೂರ್ಣ ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದು ಕತ್ತಲೆ ಉಂಟಾಗಿದೆ.
ತಾಲೂಕಿನಾದ್ಯಂತ ಗುಡುಗು ಸಿಡಿಲಿನ ಆರ್ಭಟದಿಂದ ಕೆಲ ಮನಡ ಗೋಡೆಗಳಿಗೆ ಹಾನಿಯಾಗಿದೆ. ಹಲವೆಡೆ ವಿದ್ಯುತ್ ವಾಹಕಗಳು ಸುಟ್ಟು ಹೋಗಿದ್ದು, ಬಹುತೇಕ ಪ್ರದೇಶಗಳಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಹೆಸ್ಕಾಂ ಸಿಬ್ಬಂದಿಗಳು ವಿದ್ಯುತ್ ಸಂಪರ್ಕ ಮರುಸ್ಥಾಪಿಸಲು ಹರಸಾಹಸ ಪಡುವಂತಾಗಿದೆ.
ಇದನ್ನು ಓದಿ : ಆರ್ ಟಿ ಓ ಮನೆ ಮತ್ತು ಮಳಿಗೆಯ ಮೇಲೆ ದಾಳಿ. ಲೋಕಾಯುಕ್ತರಿಂದ ರಾತ್ರಿವರೆಗೂ ನಡೆದ ಪರಿಶೀಲನೆ.
ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ ಪರಾರಿಯಾಗಿದ್ದ ಕಳ್ಳ ಮಂಡ್ಯದಲ್ಲಿ ಆರೆಸ್ಟ್.
ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಘೋಷಿಸದಿದ್ದರೆ ರಾಜಕೀಯ ನಿವೃತ್ತಿ: ಶಾಸಕ ಸತೀಶ್ ಸೈಲ್