ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಬಾಗಲಕೋಟೆ(Bagalakote) :ಮಹಿಳೆಯೋರ್ವಳು ತನ್ನ ಸಮಯ ಪ್ರಜ್ಞೆಯಿಂದ ಜಿರಲೆ ಸ್ಪ್ರೇ ಸಿಂಪಡಿಸಿ ಕಳ್ಳರನ್ನ ಓಡಿಸಿದ ಘಟನೆ ಬಾಗಲಕೋಟೆ ಜಿಲ್ಲೆಯ ಜಮಖಂಡಿ ನಗರದಲ್ಲಿ ನಡೆದಿದೆ.
ನಗರದ ಗೌತಮ ಬುದ್ಧ ಕಾಲೋನಿಯಲ್ಲಿರೋ ಪೃಥ್ವಿ ಎಂಬ ಮಹಿಳೆ ಒಂಟಿಯಾಗಿರೋದನ್ನ ಗಮನಿಸಿದ ಖದೀಮರು ಮದ್ಯಾಹ್ನವೇ ಮನೆಗೆ ಹೊಂಚು ಹಾಕಲು ಯತ್ನಿಸಿದ್ದರು. ಮೊದಲು ಹಿಂದಿ ಭಾಷೆಯಲ್ಲಿ ಮಾತು ಆರಂಭಿಸಿದ ಕಳ್ಳರು ಬಳಿಕ ಗಮನ ಬೇರೆಡೆ ಸೆಳೆದು ಸರಗಳ್ಳತನಕ್ಕೆ ಯತ್ನಿಸಿದ್ದಾರೆ.
ತಕ್ಷಣ ಎಚ್ಚೆತ್ತ ಮಹಿಳೆ ಪಕ್ಕದಲ್ಲಿಯೇ ಇದ್ದ ಜಿರಲೆ ಸ್ಪ್ರೇ ಸಿಂಪಡಿಸಿದ್ದಾಳೆ. ಆಗ ವಿಚಲಿತರಾದ ಕಳ್ಳರು ತಕ್ಷಣ ಸ್ಥಳದಿಂದ ಕಾಲ್ಕಿತ್ತು ಓಡಿದ್ದಾರೆ . ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದು, ಮಹಿಳೆಯಿಂದ ಮಾಹಿತಿ ಪಡೆದುಕೊಂಡಿದ್ದಾರೆ.
ಇದನ್ನು ಓದಿ : ಮುಂಬೈ ಮೂಲದ ವ್ಯಕ್ತಿಯಿಂದ ಅನಂತಕುಮಾರ ಹೆಗಡೆಗೆ ಬೆದರಿಕೆ ಪತ್ರ.
ಬಾಲಕಿ ಪ್ರಾಣ ತೆಗೆದ ಜೋಕಾಲಿ. ಭಟ್ಕಳದ ತೆರ್ನಮಕ್ಕಿಯಲ್ಲಿ ಸಂಭವಿಸಿದ ಘಟನೆ.
ಪತ್ರಕರ್ತ ಗುರುಪ್ರಸಾದ ಹೆಗಡೆ ಅನಾರೋಗ್ಯದಿಂದ ನಿಧನ. ಪತ್ರಕರ್ತರ ಸಂತಾಪ.
	
						
							
			
			
			
			
