ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಹೊನ್ನಾವರ(Honnavar) : ಅರಣ್ಯ ಇಲಾಖೆಯಲ್ಲಿ(Forest Department) ಕಾರ್ಯನಿರ್ವಹಿಸುತ್ತಿರುವ ದಿನಗೂಲಿ ನೌಕರನೋರ್ವನಿಗೆ ಮಾನಸಿಕವಾಗಿ ಕಿರುಕುಳ ನೀಡಿರುವ ಘಟನೆ ಬಹಿರಂಗಗೊಂಡಿದೆ. ಗೇರುಸೊಪ್ಪ ವಲಯದಲ್ಲಿ(Gerudoppa Range) ಡ್ರೈವರ್ ಆಗಿ ಕೆಲಸ ಮಾಡುತ್ತಿರುವ ಮಂಜುನಾಥ ನಾಯ್ಕ ಅವರ ಪತ್ನಿ ವೀಣಾ ಪೂಜಾರಿ ಆತ್ಮಹತ್ಯೆ ಪತ್ರ ಬರೆದಿಟ್ಟು ನಾಪತ್ತೆಯಾಗಿದ್ದಾರೆ.
ಮಂಜುನಾಥ ನಾಯ್ಕ ಅವರ ಹೇಳಿಕೆ ಪ್ರಕಾರ, ಅರಣ್ಯ ಇಲಾಖೆಯ ಡಿಎಫ್ಒ(DFO) ಯೋಗೇಶ್ ಹಾಗೂ ಆರ್ಎಫ್ಒ(RFO) ಕಾರ್ತಿಕ್ರಿಂದ ಕಿರುಕುಳ ಅನುಭವಿಸುತ್ತಿದ್ದ ಹಿನ್ನೆಲೆಯಲ್ಲಿ ವೀಣಾ ಪೂಜಾರಿ ಪತ್ರ ಬರೆದಿಟ್ಟು ಮನೆಯಿಂದ ಹೊರಟಿದ್ದಾರೆ ಎಂಬುದು ತಿಳಿದು ಬಂದಿದೆ. ಮಂಜುನಾಥ ನಾಯ್ಕ ಅವರು ನೀಡಿದ ದೂರಿನಲ್ಲಿ, ಆರ್ಎಫ್ಒ ಕಾರ್ತಿಕ್ ಅವರು ಡ್ರೈವರ್(Driver) ಕೆಲಸ ಬಿಟ್ಟು ಅಡಿಗೆ ಕೆಲಸ ಮಾಡಲು ಒತ್ತಡ ಹಾಕುತ್ತಿದ್ದರೆನ್ನಲಾಗಿದೆ.
ಈ ಬಗ್ಗೆ ದಿನಗೂಲಿ ನೌಕರರ ಸಂಘದ ರಾಜ್ಯಾಧ್ಯಕ್ಷರಿಗೂ ಮಂಜುನಾಥ ದೂರು ಸಲ್ಲಿಸಿದ್ದು, ನಂತರ ಮೇಲಾಧಿಕಾರಿಗಳ ನಿರ್ದೇಶನದ ಮೇರೆಗೆ ಮಂಜುನಾಥ ಅವರಿಗೆ ಪುನಃ ಡ್ರೈವರ್ ಕೆಲಸ ನೀಡಲಾಗಿತ್ತು. ಆದಾಗ್ಯೂ, ಆರ್ಎಫ್ಒ ಕಾರ್ತಿಕ್ ಅವರಿಂದ ಕಿರುಕುಳ ಮುಂದುವರಿದಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಘಟನೆಯ ಸಂಬಂಧ ಹೊನ್ನಾವರ ಪೊಲೀಸ್ ಠಾಣೆಯಲ್ಲಿ(Honnavar Police Station) ಪ್ರಕರಣ ದಾಖಲಾಗಿದ್ದು, ವೀಣಾ ಪೂಜಾರಿ ಅವರ ಪತ್ತೆಗೆ ಪೊಲೀಸರ ಶೋಧ ಕಾರ್ಯ ಆರಂಭಿಸಿದ್ದು ಪ್ರಕರಣದ ತನಿಖೆ ಮುಂದುವರಿದಿದೆ.
ಇದನ್ನು ಓದಿ : ರಾಜ್ಯಮಟ್ಟದ ಚಿತ್ರಕಲೆಯಲ್ಲಿ ಶಿರಸಿಯ ಬಿಂದು ಪ್ರಥಮ. ಸಿಎಂ ಸಿದ್ದರಾಮಯ್ಯ ಅವರಿಂದ ಬಹುಮಾನ.
ನಿರ್ದೋಷಿ ತೀರ್ಪು. ಮುರುಘಾ ಶ್ರೀಗಳಿಗೆ ಬಿಗ್ ರಿಲೀಪ್.
ಪ್ಲ್ಯಾಟ್ ನೀಡುತ್ತೇನೆಂದು ಹಲವರಿಗೆ ಬಿಲ್ಡರ್ ಓರ್ವನಿಂದ ಮೋಸದ ಆರೋಪ.
ಆನ್ಲೈನ್ ಟ್ರೇಡಿಂಗ್ ಹೆಸರಲ್ಲಿ ವಂಚನೆ. ಇಬ್ಬರು ಬ್ಯಾಂಕ್ ಅಧಿಕಾರಿ ಸೇರಿ ನಾಲ್ವರ ಬಂಧನ
