ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಕಾರವಾರ(Karwar) : ಉತ್ತರಕನ್ನಡ ಜಿಲ್ಲೆಯಲ್ಲಿ(Uttarakannada District) ಸೇವೆ ಸಲ್ಲಿಸುತ್ತಿರುವ ಕೆಲ ಪ್ರಾಮಾಣಿಕ ಅಧಿಕಾರಿಗಳ(Honest Officer) ಬಗ್ಗೆ ಪೂರ್ವಾಪರ ಯೋಚಿಸದೇ ಸುದ್ದಿ ಮಾಡಿದ ಕೆಲವರ ಬಂಡವಾಳ ಬಟಾಬಯಲಾಗಿದೆ. 

ಉತ್ತರಕನ್ನಡ ಜಿಲ್ಲೆಯ ಕಾರವಾರದಲ್ಲಿರುವ ಜಿಲ್ಲಾ ಪ್ರವಾಸೋದ್ಯಮ ಇಲಾಖೆಯ(District Tourism Department) ಕಚೇರಿಗೆ ಹೊಂದಿಕೊಂಡ ಕೊಠಡಿಯಲ್ಲಿ ಮಂಚ ಪತ್ತೆಯಾಗಿದೆ ಎಂದು ಆರು ತಿಂಗಳ ‌ಹಿಂದೆ ಸಾಮಾಜಿಕ ಜಾಲತಾಣದಲ್ಲಿ(Social Media) ಸುದ್ದಿ ಹರಿದಾಡಿಸಿದ್ದರು.  ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ‘ಕಚೇರಿಯಲ್ಲಿನ ಮಂಚ’ ವಿಡಿಯೋ ಪ್ರವಾಸೋದ್ಯಮ ಇಲಾಖೆಯಲ್ಲಿ ಅನಗತ್ಯ ವಿವಾದಕ್ಕೆ ಎಬ್ಬಿಸಿತ್ತು.

ಅಂದು ಪ್ರವಾಸೋದ್ಯಮ ಇಲಾಖೆಯ(Tourism Department) ಉಪನಿರ್ದೇಶಕರಾಗಿದ್ದ ಜಯಂತ ಅವರ ಮೇಲೆ ಮಾಡಲಾದ ಆರೋಪಕ್ಕೆ ಈಗ ಸಿಕ್ಕಿರುವ ದಾಖಲೆಗಳು ಸ್ಪಷ್ಟನೆ ನೀಡಿವೆ. ಸಂಬಂಧಿತ ಅಧಿಕಾರಿ ವಿರುದ್ಧ ಯಾವುದೇ ತಪ್ಪು ಕಂಡುಬಂದಿಲ್ಲವೆಂಬುದು ದಾಖಲೆಯಿಂದ ಗೊತ್ತಾಗಿದೆ.

ಆರ್ ಟಿ ಓ ಕಚೇರಿ(RTO Office) ಪಕ್ಕದಲ್ಲಿದ್ದ ಪ್ರವಾಸೋದ್ಯಮ ಇಲಾಖೆಯ ಕಚೇರಿಯನ್ನು ಜಿಲ್ಲಾಧಿಕಾರಿ ಕಚೇರಿ ಕಟ್ಟಡಕ್ಕೆ ಸ್ಥಳಾಂತರಿಸುವ ಸಂದರ್ಭದಲ್ಲಿ ಸುರಕ್ಷತೆ ಹಾಗೂ ದಾಖಲೆ ಸುರಕ್ಷತೆಯ ದೃಷ್ಟಿಯಿಂದ ಸಂಪೂರ್ಣ ಸಾಮಗ್ರಿಗಳ ವಿಡಿಯೋ ಚಿತ್ರೀಕರಣ ಮಾಡಲಾಗಿತ್ತು. ಆದರೆ ನಂತರ ವೈರಲ್ ಆದ ದೃಶ್ಯದಲ್ಲಿ ಕೇವಲ ‘ಹಾಸಿಗೆ’(Cot) ಭಾಗವನ್ನಷ್ಟೆ ತೋರಿಸಿ  ಸಾಮಾಜಿಕ ತಾಲತಾಣದ(Social Media) ಮೂಲಕ ಇಲ್ಲಸಲ್ಲದ ವಿಷಯ ಸೇರಿಸಿ ಸುದ್ದಿ ಹರಡಿಸಲಾಗಿತ್ತು. ಇದು ಜನರಲ್ಲಿ ತಪ್ಪು ಕಲ್ಪನೆ ಮೂಡಿಸಲು ಕಾರಣವಾಯಿತು. ಆ ಕೊಠಡಿಯಲ್ಲಿ ಕಂಡುಬಂದ ಎಲ್ಲ ವಸ್ತುಗಳು 2016ರಲ್ಲಿ ಪ್ರವಾಸೋದ್ಯಮ ಇಲಾಖೆ ಜಪ್ತಿ  ಮಾಡಿಕೊಂಡ  ಸಾಮಗ್ರಿಗಳಾಗಿದ್ದವು  (Seaz Material) ಎನ್ನುವುದು ದಾಖಲೆಗಳಿಂದ ಗೊತ್ತಾಗಿದೆ.

ಆಡಳಿತಾತ್ಮಕ ಕಾರಣಗಳಿಂದ ಪ್ರವಾಸೋದ್ಯಮ ಇಲಾಖೆಯ ಉಪ ನಿರ್ದೇಶಕರು ಬೆಂಗಳೂರಿನಲ್ಲಿ ಇದ್ದ ಸಂದರ್ಭ, ಪ್ರವಾಸೋದ್ಯಮ ವಿಭಾಗದ ಇನ್‌ಚಾರ್ಜ್ ಜವಾಬ್ದಾರಿಯನ್ನು ಸಹಾಯಕ ಆಯುಕ್ತರು ವಹಿಸಿಕೊಂಡಿದ್ದರು. ಇದೇ ಅವಧಿಯಲ್ಲಿ ಜಯಂತ ಅವರ ಹೆಸರನ್ನ ಕೆಡಿಸಬೇಕು ಎನ್ನುವ ಕಾರಣಕ್ಕೆ  ಉದ್ದೇಶಪೂರ್ವಕವಾಗಿ ಚಿತ್ರೀಕರಿಸಿದ ಮಂಚದ ವಿಡಿಯೋ(Cot Video) ಅಷ್ಟನ್ನೆ ಇಟ್ಟುಕೊಂಡು ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಮಾಡುವ ಮೂಲಕ ಪ್ರವಾಸೋದ್ಯಮ ಇಲಾಖೆಯ ಉಪ ನಿರ್ದೇಶಕರ ವಿರುದ್ದ ಅಪಪ್ರಚಾರ ಮಾಡಲಾಗಿದೆ ಎನ್ನುವುದು ಈಗಿನ ದಾಖಲೆಯಿಂದ ತಿಳಿದುಬಂದಿದೆ.

  ಪ್ರವಾಸೋದ್ಯಮ ಇಲಾಖೆಯಲ್ಲಿ ಉಪನಿರ್ದೇಶಕರಾಗಿದ್ದ(Tourism Department Deputy Director) ಜಯಂತ್ ಅವರು ಜಿಲ್ಲೆಯ ಪ್ರವಾಸೋದ್ಯಮದಲ್ಲಿ ನಡೆಸಲಾಗುತ್ತಿದ್ದ ಕೆಲ ಅಕ್ರಮ ದಂಧೆಗಳಿಗೆ ಕಡಿವಾಣ ಹಾಕಿದ್ದರು ಎನ್ನಲಾಗಿದೆ. ಈ ಕಾರಣಕ್ಕಾಗಿ ಅಸಮಧಾನಗೊಂಡ ಕೆಲ ಗುಂಪುಗಳು ಅವರ ವಿರುದ್ಧ ಷಡ್ಯಂತ್ರ ರೂಪಿಸಿ ಮಂಚದ ವಿಡಿಯೋ ಮೂಲಕ ಅವರ ಪ್ರಾಮಾಣಿಕ ಆಡಳಿತಕ್ಕೆ ಕಡಿವಾಣ ಹಾಕಲು ನಡೆಸಿದ ತಂತ್ರ ಎನ್ನಲಾಗಿದೆ‌.

ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದ ಸುಳ್ಳು ಸುದ್ದಿಯಿಂದಾಗಿ ಮಾನಸಿಕ ಕಿರುಕುಳಕ್ಕೆ ಒಳಗಾದ ಜಯಂತ್ ಅವರು  ತಮ್ಮನ್ನ ಪ್ರವಾಸೋದ್ಯಮ ಇಲಾಖೆಯಿಂದ ಬಿಡುಗಡೆಗೊಳಿಸುವಂತೆ  ಹಿರಿಯ ಅಧಿಕಾರಿಗಳಿಗೆ ಪತ್ರಬರೆದ ಆಧಾರದಲ್ಲಿ ಅವರನ್ನ  ಬಿಡುಗಡೆ ಮಾಡಲಾಗಿತ್ತು.

ಮಂಚದ ವಿವಾದದ(Vot Dispute) ಬಳಿಕ ಜಿಲ್ಲಾಧಿಕಾರಿಗಳ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಪ್ರವಾಸೋದ್ಯಮ ಕಚೇರಿಯನ್ನು ಮತ್ತೆ ಹಳೆಯ ಕಟ್ಟಡಕ್ಕೆ ಸ್ಥಳಾಂತರಿಸಲಾಗಿದೆ. ಇದರಿಂದಾಗಿ ಯಾವುದೇ ಅಕ್ರಮ ಅಥವಾ ವೈಯಕ್ತಿಕ ದುರುಪಯೋಗ ನಡೆದಿಲ್ಲ ಎಂಬುದು ಮತ್ತೊಮ್ಮೆ ದೃಢಪಟ್ಟಿದೆ.

ಪೂರ್ವಾಪರ ಯೋಚಿಸದೇ ಸುಳ್ಳು ಸುದ್ದಿ(Fake News) ಹರಡಿದವರು ಇನ್ನೂ ಕೂಡ ತಮ್ಮದೇ ಸರಿ ಎಂದು ಹಲುಬಿ ಮುಂದೆ ನಡೆಯುತ್ತಲೇ ಇದ್ದಾರೆ. ಸುಖಾ ಸುಮ್ಮನೇ ಪ್ರಾಮಾಣಿಕ ಅಧಿಕಾರಿಗಳಿಗೆ(Honest Officer) ತೊಂದರೆ ಕೊಡುವವರ ಬಗ್ಗೆ ಎಚ್ಚರದಿಂದ  ಇರಬೇಕಾಗಿದೆ. ಯೋಚಿಸದೇ ಕ್ರಮ ಕೈಗೊಳ್ಳುವ ಹಿರಿಯ ಅಧಿಕಾರಿಗಳ ಬುಡಕ್ಕೆ ಬಿಸಿನೀರು‌ ಬಿಟ್ಟಂತಾಗಿದೆ ಈ ಪ್ರಕರಣ.
ಇದನ್ನು ಓದಿ : ಅಬಕಾರಿ ಇಲಾಖೆಯ ಭರ್ಜರಿ ದಾಳಿ. ವಾಹನ ಬಿಟ್ಟೋಡಿದ ಮದ್ಯಗಳ್ಳರು.

ಕಾರವಾರ ಜೈಲಿನಲ್ಲು ಸಿಕ್ತು‌ ಮೊಬೈಲ್ ಪೋನ್, ನಿಷೇಧಿತ ವಸ್ತುಗಳು.

ಶಬರಿಮಲೆ ಯಾತ್ರಿಕರೇ ಎಚ್ಚರ. ನೀರಿನಲ್ಲಿದೆ ಮಾರಣಾಂತಿಕ ‌ಸೋಂಕು.