ಕಾರವಾರ(KARWAR) : ಉತ್ತರಕನ್ನಡ  ಶೈಕ್ಷಣಿಕ ಜಿಲ್ಲೆಯ ಹಿರಿಯ ಪ್ರಾಥಮಿಕ ವಿಭಾಗದಲ್ಲಿ ಜಿಲ್ಲಾ ಅತ್ಯುತ್ತಮ ಶಿಕ್ಷಕಿ ಪ್ರಶಸ್ತಿಯನ್ನು(TEACHER AWARD) ಪಡೆದ ವೀಣಾ ಆನಂದು ಗುನಗಿ ಅವರನ್ನು ಗುನಗಿ ಸಮಾಜದ ಸಹಾಯವಾಣಿ ಸಂಘದ (GUNAGI SAMAJ HELPLINE SANGHA) ಸದಸ್ಯರಿಂದ ಸನ್ಮಾನಿಸಿ ಗೌರವಿಸಲಾಯಿತು.

ಕಿನ್ನರ ಗ್ರಾಮದ ಪ್ರಶಸ್ತಿ ವಿಜೇತ ಶಿಕ್ಷಕಿಯವರ ಸ್ವಗೃಹದಲ್ಲಿ ಗೌರವಿಸಲಾಯಿತು. ಗುನಗಿ ಸಮಾಜದ ಸಹಾಯವಾಣಿ ಸಂಘದ ಅಧ್ಯಕ್ಷ ಅರವಿಂದ ಗುನಗಿ ಮಾತನಾಡಿ, ಈಗಾಗಲೇ ನಮ್ಮ‌ ಸಮಾಜ ಹಿಂದುಳಿದ ಸಮಾಜವಾಗಿದ್ದು, ಇದೀಗ ನಮ್ಮ ಸಮಾಜದ ಶಿಕ್ಷಕಿಗೆ ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕಿ ಪ್ರಶಸ್ತಿ ನೀಡಿ ಪುರಸ್ಕರಿಸಿರುವುದು ನಮ್ಮ ಸಮಾಜಕ್ಕೆ  ಹೆಮ್ಮೆಯ ವಿಷಯವಾಗಿದೆ ಎಂದರು.

ನೂತನವಾಗಿ ಗುನಗಿ ಸಮಾಜದ ಸಹಾಯವಾಣಿ ಸಂಘ ರಚನೆ ಮಾಡಿ ನಮ್ಮ ಸಮಾಜದ ಜನರಿಗೆ ಯಾವುದೇ ಇಲಾಖೆಯಲ್ಲಿ ಕೆಲಸ ಆಗದೇ ಇದ್ದಲ್ಲಿ ಆತಂಹ ಕೆಲಸವನ್ನು ಗಮನಕ್ಕೆ ತಂದರೆ ಆ ಕೆಲಸ ಮಾಡಿಕೊಡಲು ಪ್ರಯತ್ನ ಮಾಡುತ್ತೇವೆ. ನಮ್ಮ ಸಮಾಜದ ಯುವಕರು ಮುಂದೆ ಬರಬೇಕಾಗಿದೆ. ಇದಕ್ಕೆ ನಮ್ಮ ಸಮಾಜದ ಹಿರಿಯರು ಹಾಗೂ ಆತ್ಮೀಯರಾದ ಪ್ರಕಾಶ ಗುನಗಿ ಅವರು ಸಹ ನಮಗೆ ಬೆಂಬಲ ನೀಡಿದ್ದು, ಅವರ ಮಾರ್ಗದರ್ಶನದಲ್ಲಿ ಈ ಸಂಘ ರಚನೆ  ಮಾಡಿದ್ದೇವೆ ಎಂದು ಹೇಳಿದರು.

ಕೆಡಿಸಿಸಿ ಬ್ಯಾಂಕ್ (KDCC BANK) ನಿರ್ದೇಶಕರು ಹಾಗೂ ಗುನಗಿ ಸಮಾಜದ ಹಿರಿಯರಾದ ಪ್ರಕಾಶ ಗುನಗಿ ಮಾತನಾಡಿ, ಇವತ್ತು ನಮ್ಮ ಸಮಾಜದ ಶಿಕ್ಷಕಿಯೋರ್ವರನ್ನು ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕಿ ಪ್ರಶಸ್ತಿ ನೀಡಿದಕ್ಕೆ ಸಮಾಜದ ವತಿಯಿಂದ  ತಾವು ಬಂದು ಸನ್ಮಾನಿಸಿ ಗೌರವಿಸಿರುವುದು ಸಂತೋಷದ ವಿಷಯವಾಗಿದೆ. ಇದೇ ರೀತಿ ಎಲ್ಲಾ ಯುವಕರ ಆಸಕ್ತಿ, ಶ್ರಮದಿಂದಾಗಿ ಈ ಸಂಘವು ಇನ್ನೂ ಹೆಚ್ಚಿನ ರೀತಿಯಲ್ಲಿ ಉತ್ತಮವಾಗಿ ಬೆಳೆಯಲಿ. ಅದಕ್ಕೆ ನನ್ನ ಬೆಂಬಲ ಹಾಗೂ ಸಹಕಾರ ಸದಾ ಇದೆ ಎಂದು ಹೇಳಿದರು.

ಸನ್ಮಾನ ಸ್ವೀಕರಿಸಿದ ಜಿಲ್ಲಾ ಅತ್ಯುತ್ತಮ ಶಿಕ್ಷಕಿ ಪ್ರಶಸ್ತಿ ಪಡೆದ ವೀಣಾ ಗುನಗಿ ಮಾತನಾಡಿ, ಗುನಗಿ ಸಮಾಜದ ವತಿಯಿಂದ ಸನ್ಮಾನಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು. ಯುವಕರು ಮುಂದೆ ಬಂದು ನಮ್ಮ ಸಮಾಜ ಇನ್ನೂ ಎತ್ತರಕ್ಕೆ ಬೆಳೆಯುವಂತಾಗಲಿ ಎಂದು ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷ ಆನಂದು ಗುನಗಿ, ಕಾರ್ಯದರ್ಶಿ ಶ್ರೀಧರ ಗುನಗಿ, ಖಜಾಂಚಿ ಅರುಣ ಗುನಗಿ, ಸಹ ಕಾರ್ಯದರ್ಶಿ ರಾಘವೇಂದ್ರ ಗುನಗಿ, ಕಾರ್ಯಕಾರಿ ಸದಸ್ಯರಾದ ಅಕ್ಷಯ ನಾಯ್ಕ, ತುಳಸಿದಾಸ ಗುನಗಿ, ರೋಶನ ಗುನಗಿ, ನವೀನ ಗುನಗಿ, ಲೋಹಿತ ಗುನಗಿ, ಪ್ರಸಾದ ಗಾಡಿಗ, ಪ್ರಸಾದ ಗುನಗಿ, ಗಣೇಶ ಗುನಗಿ, ಪ್ರಜ್ಜಲ್ವ ಗುನಗಿ, ಗಿರಿಧರ ಗುನಗಿ ಸೇರಿದಂತೆ ಕಿನ್ನರ ಗ್ರಾಮ ಯುವಕರು ಇದ್ದರು.

ಇದನ್ನು ಓದಿ : ಶಿರೂರು ದುರಂತ ಕಿತಾಪತಿ. ಅರ್ಜುನ್ ಕುಟುಂಬದ ದೂರು

ರಾಜ್ಯಮಟ್ಟದ ಪ್ರಶಸ್ತಿಗೆ ಕಥಾ ಸಂಕಲನ ಆಹ್ವಾನ

ಅರಣ್ಯ ಪ್ರದೇಶದಲ್ಲಿ ಎಲೆ ಮಾನವರ ಮೇಲೆ ದಾಳಿ

ಶಿರೂರು ಕಾರ್ಯಾಚರಣೆ ಸ್ಥಗಿತ