ಇ ಸಮಾಚಾರ ಡಿಜಿಟಲ್ ನ್ಯೂಸ್(esamachara digital news)ಬಾಗಲಕೋಟೆ(Bagalakote): ತಾಳಿ ಕಟ್ಟಿದ ಹದಿನೈದೇ ನಿಮಿಷದಲ್ಲಿ ಮಂಟಪದಲ್ಲಿ ವರ ಮೃತಪಟ್ಟಿರುವ ಘಟನೆ ಬಾಗಲಕೋಟೆ (Bagalakote) ಜಿಲ್ಲೆಯ ಜಮಖಂಡಿ(Jamakhandi) ನಗರದಲ್ಲಿ ನಡೆದಿದೆ.
ಜಮಖಂಡಿ ತಾಲೂಕಿನ ಕುಂಬಾರ ಹಳ್ಳ ಗ್ರಾಮದ ನಿವಾಸಿ ಪ್ರವೀಣ ಕುರ್ನೆ (25) ಮೃತ ದುರ್ದೈವಿಯಾಗಿದ್ದಾನೆ. ಜಮಖಂಡಿಯ ನಂದಿಕೇಶ್ವರ ಕಲ್ಯಾಣ ಮಂಟಪದಲ್ಲಿ (Nandikeshwar kalyana mantapa) ಮದುವೆ ಸಮಾರಂಭ ನಡೆದಿತ್ತು. 12-15ಕ್ಕೆ ಮದುವೆ ಮುಹೂರ್ತದಲ್ಲಿ ವರ ತಾಳಿ ಕಟ್ಟಿದ್ದ. ಕೆಲ ಹೊತ್ತಿನಲ್ಲಿ ವೇದಿಕೆಯ ಮೇಲೆ ವರ ಹೃದಯಾಘಾತವಾಗಿ ಕುಸಿದುಬಿದ್ದಿದ್ದಾನೆ. ಇದರಿಂದ ನವ ಜೀವನ ಆರಂಭಿಸಬೇಕಾಗಿದ್ದ ಯುವಕ ಅಂತಿಮ ವಿದಾಯ ಹೇಳಿದ್ದಾನೆ.
ಪೂಜಾ ಎಂಬ ವಧುವಿನ ಜತೆ ಪ್ರವೀಣ್ ಕುರ್ನೆ ವಿವಾಹ ನಿಗದಿಯಾಗಿತ್ತು. ಆದರೆ ತಾಳಿ ಕಟ್ಟಿದ ಕೆಲವೇ ಕ್ಷಣಗಳಲ್ಲಿ ವರ ಹೃದಯಾಘಾತದಿಂದ ಸಾವನ್ನಪ್ಪಿದ್ದರಿಂದ ನೂರಾರು ಕನಸುಗಳನ್ನು ಕಟ್ಟಿಕೊಂಡು ಬಂದ ವಧುವಿಗೆ ಬರ ಸಿಡಿಲು ಬಡಿದಂತಾಗಿದೆ. ಘಟನೆಯಿಂದ ಮದುವೆಗೆ ಬಂದ ಸಂಬಂಧಿಕರು ಕಣ್ಣೀರಿಡುವಂತಾಯಿತು.
ಇದನ್ನು ಓದಿ :
ಪಾಕಿಸ್ತಾನಕ್ಕೆ ಬಿತ್ತು ಹೊನ್ನಾವರದ ಬರೋಬ್ಬರಿ ಹೊಡೆತ. ಕಾರಣ ಏನು?
ಅಪ್ರಾಪ್ತ ಬಾಲಕನಿಂದ ಗರ್ಭಿಣಿಯಾದ ಶಿಕ್ಷಕಿ. ಗರ್ಭಪಾತಕ್ಕೆ ಕೋರ್ಟ್ ಅನುಮತಿ.
ಪ್ರಧಾನಿ ಅವರ ಅವಮಾನಕಾರಿ ದೃಶ್ಯದ ಫೇಸ್ ಬುಕ್ ಲಿಂಕ್ ಶೇರ್ ಮಾಡಿದ್ದ ವ್ಯಕ್ತಿಯ ಬಂಧನ.