ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news)ದಾಂಡೇಲಿ(Dandeli) : ಪ್ರಧಾನ ಮಂತ್ರಿ ನರೇಂದ್ರ ಮೋದಿಯವರನ್ನು ಅವಮಾನಿಸಲಾದ ದೃಶ್ಯದ ಫೇಸ್ ಬುಕ್(Facebook) ಲಿಂಕನ್ನು ವಾಟ್ಸಪ್ (Whatsapp) ಮೂಲಕ ಶೇರ್ ಮಾಡಿದ್ದ ನಗರದ ಗಾಂಧಿನಗರದ ವ್ಯಕ್ತಿಯೋರ್ವನನ್ನು ಶುಕ್ರವಾರ ಬಂಧಿಸಲಾಗಿದೆ.
ದುಲೆಸಾಹೇಬ ಮುನಿರಸಾಬ ಸವಣೂರ ಎಂಬಾತನೇ ಬಂಧಿತ ವ್ಯಕ್ತಿಯಾಗಿದ್ದಾನೆ. ಗುರುವಾರ ಸಂಜೆ ಹಮ್ ಸಾಥ್ ಸಾಥ್ ಹೈ ವಾಟ್ಸಪ್ ಗ್ರೂಪ್ ನಲ್ಲಿ ತನ್ನ ಮೊಬೈಲ್ ಸಂಖ್ಯೆ : 9741270171 ರ ಮೂಲಕ ಶೇರ್ ಮಾಡಿದ್ದ.
ಪ್ರಧಾನಿ ನರೇಂದ್ರ ಮೋದಿಯವರು(PM Narendra Modi) ಪಾಕಿಸ್ತಾನದ ಪ್ರಧಾನಿ ಶಹಬಾಜ್ ಶರೀಫ್ (Pakistan PM Shehabaj Shareef) ಎದುರು ಮಂಡಿಯೂರಿ ಕುಳಿತು ಕೈ ಮುಗಿದ ರೀತಿಯ ಮತ್ತು ಪಾಕಿಸ್ತಾನದ ಧ್ವಜಗಳನ್ನು ಹಿಡಿದು ಸಾಲಾಗಿ ನಿಂತಿರುವ ಜನರು ಪ್ರಧಾನಿ ನರೇಂದ್ರ ಮೋದಿಯವರ ಮೇಲೆ ಶೂ ಎಸೆಯುತ್ತಿರುವುದು ಮತ್ತು ಅವರು ಓಡಿ ಹೋಗುತ್ತಿರುವ ದೃಶ್ಯದ ಲಿಂಕ್ ಹಾಗೂ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಹಗ್ಗದಿಂದ ಕಟ್ಟಿ ಎಳೆದುಕೊಂಡು ಹೋಗುತ್ತಿರುವ ದೃಶ್ಯದ ಫೇಸ್ ಬುಕ್ ಲಿಂಕನ್ನು ವಾಟ್ಸಪ್ ಮೂಲಕ ಶೇರ್ ಮಾಡಿದ್ದನು.
ಈತ ಮಾಡಿದ ಸಂದೇಶ ಎರಡು ವರ್ಗಗಳ ಮಧ್ಯೆ ದ್ವೇಷ ಹಾಗೂ ಸಂಘರ್ಷಕ್ಕೆ ಮತ್ತು ಮತೀಯ ಭಾವನೆಗಳಿಗೆ ಧಕ್ಕೆ ಬರುವ ರೀತಿಯಲ್ಲಿದ್ದವು. ಎರಡು ಸಮುದಾಯದ ಜನರಿಗೆ ಪ್ರಚೋದಿಸುವಂತೆಯೂ ಹಾಗೂ ಸಾರ್ವಜನಿಕರ ಶಾಂತಿ ಕದಡುವ ತರಹದ ರೀತಿಯಲ್ಲಿ ಮಾಡಿದ್ದ. ಎರಡು ವರ್ಗದವರನ್ನು ಉದ್ರೇಕಗೊಳಿಸಿ ದೊಂಬಿ ಅಪರಾಧ ನಡೆಯಲೆಂದು ಅಥವಾ ನಡೆಯುವ ಸಂಭವ ಇದೆ ಎಂದು ಗೊತ್ತಿದ್ದರೂ ಸಹ, ಎರಡು ವರ್ಗಗಳ ಜನರನ್ನು ಉದ್ರೇಕಿಸಿರುತ್ತಾನೆ ಹಾಗೂ ಎರಡು ಧರ್ಮದವರ ಮೇಲೆ ವೈರತ್ವದ ಭಾವನೆಯನ್ನು ಮೂಡಿಸುವಂತಹ ಫೇಸ್ ಬುಕ್ ಲಿಂಕನ್ನು ವಾಟ್ಸಪ್ ಮೂಲಕ ಶೇರ್ ಮಾಡಿರುವುದಕ್ಕೆ ದುಲೆಸಾಹೇಬ ಮುನಿರಸಾಬ ಸವಣೂರ ಈತನನ್ನು ಬಂಧಿಸಿ ಕಾನೂನು ರೀತಿಯ ಕ್ರಮವನ್ನು ಕೈಗೊಳ್ಳಲಾಗಿದೆ.
ಇದನ್ನು ಓದಿ : ಲಕ್ಷ ದ್ವೀಪಕ್ಕೆ ತೆರಳುತ್ತಿದ್ದ ಹಡಗು ಮುಳುಗಡೆ.