ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ತಮಿಳುನಾಡು(Tamilunadu):  ಪ್ರಸಿದ್ಧ ನಟ, ತಮಿಳಿಗ ವೆಟ್ರಿ ಕಳಗಂ ಪಕ್ಷದ ಸಂಸ್ಥಾಪಕ, ವಿಜಯ್ ಅವರು ಕರೂರಿನಲ್ಲಿ  ಆಯೋಜಿಸಿದ ಚುನಾವಣಾ ಪ್ರಚಾರ ರ್ಯಾಲಿಯಲ್ಲಿ  ಸಂಭವಿಸಿದ್ದ ಭೀಕರ ಕಾಲ್ತುಳಿತ(Stampede) ದುರಂತದಲ್ಲಿ ಸಾವನ್ನಪ್ಪಿದವರ ಸಂಖ್ಯೆ 40 ಏರಿದೆ.

ಘಟನೆಯಲ್ಲಿ ನೂರಕ್ಕೂ ಅಧಿಕ   ಜನರು ಗಂಭೀರವಾಗಿ ಗಾಯಗೊಂಡಿದ್ದು ಚಿಕಿತ್ಸೆ ನೀಡಲಾಗಿದೆ.  ದುರಂತದಲ್ಲಿ ಸಾವನ್ನಪ್ಪಿದವರ ಕುಟುಂಬಕ್ಕೆ ನಟ ವಿಜಯ್ ತಲಾ 20 ಲಕ್ಷ ಪರಿಹಾರ(Compensations) ಘೋಷಿಸಿದ್ದಾರೆ.‌ ಗಾಯಾಳುಗಳಿಗೆ ತಲಾ 2 ಲಕ್ಷ ಪರಿಹಾರ ಘೋಷಣೆ ಮಾಡಿದ್ದಾರೆ.

ದುರಂತದ ಬಗ್ಗೆ ಮಾತನಾಡಿದ ನಟ ವಿಜಯ್, ಕರೂರಿನಲ್ಲಿ ರ್ಯಾಲಿಯ ವೇಳೆ ಸಂಭವಿಸಿದ ಕಾಲ್ತುಳಿತ(Stampede) ದುರಂತದಿಂದ ನನ್ನ ಹೃದಯ ಛಿದ್ರವಾಗಿದೆ. ಮನಸ್ಸಿನ ತುಂಬೆಲ್ಲ ದು:ಖ ಆವರಿಸಿದೆ. ಘಟನೆಯಿಂದಾಗಿ ನಾನು ಅಸಹನೀಯವಾದ ನೋವು ಹಾಗೂ ದು:ಖದಲ್ಲಿದ್ದೇನೆ. ದುರಂತದಲ್ಲಿ ಪ್ರಾಣ ಕಳೆದುಕೊಂಡಿರುವ ನನ್ನ ಸಹೋದರ, ಸಹೋದರಿಯರ ಕುಟುಂಬಗಳಿಗೆ ಸಂತಾಪ ಸೂಚಿಸುತ್ತೇನೆ. ಸಹಾನುಭೂತಿಯನ್ನು ವ್ಯಕ್ತಪಡಿಸುತ್ತೇನೆ. ಗಾಯಾಳುಗಳು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ವಿಜಯ್  ಪ್ರಾರ್ಥಿಸಿದ್ದಾರೆ.

ಇದನ್ನು ಓದಿ : ತಮಿಳುನಾಡಿನ ಕರೂರಿನಲ್ಲಿ ಕಾಲ್ತುಳಿತ. 39 ಜನರ ಸಾವು.

ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಗೆ ಸಾರ್ವಜನಿಕರು ಸ್ವಯಂ ಮಾಹಿತಿ ದಾಖಲಿಸಲು ಅವಕಾಶ.

ಕಕಡಲತೀರಕ್ಕೆ ಬಂದ ರಾಶಿ ರಾಶಿ ಮೀನುಗಳು.