ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಹೊನ್ನಾವರ(Honnavar) : ತಾಲೂಕಿನ ಹಳದೀಪುರ(Haladipur) ಕಲ್ಕಟ್ಟೆ ಬಳಿ ರೈಲ್ವೆಗೆ ತಲೆಕೊಟ್ಟು ವ್ಯಕ್ತಿಯೋರ್ವ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.
ಹನುಮಂತ ತಿಮ್ಮು ಗೌಡ (42) ಮೃತ ದುರ್ದೈವಿ. ಮೃತ ವ್ಯಕ್ತಿ ಹಳದೀಪುರ ಸಾಲಿಕೇರಿಯ ಗುಂದಾ ನಿವಾಸಿ ಎಂದು ಗುರುತಿಸಲಾಗಿದೆ.
ಐದು ವರ್ಷಗಳ ಹಿಂದೆ ಹನುಮಂತನ ಪತ್ನಿ ತೀರಿಕೊಂಡಿದ್ದು, ಬಳಿಕ ಆತನು ಮಾನಸಿಕ ಖಾಯಿಲೆಯಿಂದ ಬಳಲುತ್ತಿದ್ದ ಎನ್ನಲಾಗಿದೆ. ಹೊನ್ನಾವರದ ಸೆಂಟ್ ಇನ್ನೇಶಿಯಸ್ ಆಸ್ಪತ್ರೆಯಲ್ಲಿ(Honnavar St Ignatius Hospital) ಚಿಕಿತ್ಸೆ ಪಡೆಯುತ್ತಿದ್ದರೂ ಆರೋಗ್ಯದಲ್ಲಿ ಚೇತರಿಸಿಕೊಂಡಿರಲಿಲ್ಲ. ಹೀಗಾಗಿ ನೊಂದು ಸೋಮವಾರ ಬೆಳಗ್ಗೆ ಮಂಗಳೂರಿನಿಂದ ಮಡಗಾಂವ್ ಕಡೆ ತೆರಳುತ್ತಿದ್ದ ಗೂಡ್ಸ್ ಟ್ರೈನ್‌ಗೆ(Goods Train) ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಘಟನೆ ಕುರಿತು ಮೃತನ ಅಣ್ಣ ಮಾದೇವ ತಿಮ್ಮು ಗೌಡ ಹೊನ್ನಾವರ ಪೊಲೀಸ್ ಠಾಣೆಯಲ್ಲಿ(Honnavar Police Station) ದೂರು ದಾಖಲಿಸಿದ್ದು, ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ.
ಇದನ್ನು ಓದಿ : ಕರ್ನಾಟಕ ರಾಜ್ಯದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ. ಗೋವಾದಲ್ಲಿ ಮಾಡಿದ ಅಧಿಕಾರಿಗಳು.
ಭಾರತದ ರೋಚಕ ಗೆಲುವು. 9ನೇ ಬಾರಿಯೂ ಏಷ್ಯಾ ಕಪ್ ಮಡಿಲಿಗೆ ಹಾಕಿಕೊಂಡ ಟೀಮ್ ಇಂಡಿಯಾ.