ಅಂಕೋಲಾ : ನಿಯಂತ್ರಣ ತಪ್ಪಿ ಬೈಕ್ ನಿಂದ ಬಿದ್ದು ಗಂಭೀರ ಗಾಯಗೊಂಡಿದ್ದ ವ್ಯಕ್ತಿಯೊರ್ವ ಸಾವನ್ನಪ್ಪಿದ ಘಟನೆ ನಡೆದಿದೆ.

ಅಂಕೋಲಾದ ಹೊನ್ನಿಕೇರಿ ನಿವಾಸಿ ನವೀನ ಆನಂದು ನಾಯ್ಕ (33) ಮೃತ ದುರ್ದೈವಿ ಎಂದು ಗುರುತಿಸಲಾಗಿದೆ. ಮೇ ಎಂಟರಂದು ರಾತ್ರಿ ಬೈಕ್ ನಲ್ಲಿ ಹೋಗುತ್ತಿದ್ದ ನವೀನ್ ಶ್ವಾನವೊಂದು ಅಡ್ಡ ಬಂದಿದ್ದರಿಂದ ನಿಯಂತ್ರಣ ತಪ್ಪಿ ಬಿದ್ದಿದ್ದ. ಪರಿಣಾಮವಾಗಿ ರಸ್ತೆಯ ಪಕ್ಕದ ಸಿಮೆಂಟ್ನ ಡಿವೈಡರ್ಗೆ ಹೊಡೆದು ತೀವ್ರವಾಗಿ ಗಾಯಗೊಂಡಿದ್ದ .  ಹೆಚ್ಚಿನ ಚಿಕಿತ್ಸೆಗಾಗಿ ಕುಟುಂಬದವರು ಮಂಗಳೂರಿನ ಕೆಎಸ್ ಹೆಗಡೆ ಆಸ್ಪತ್ರೆಗೆ ದಾಖಲಿಸಿದ್ದರು.

ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಚೇತರಿಸಿಕೊಳ್ಳುತ್ತಿದ್ದ. ಇದ್ದಕ್ಕಿದ್ದಂತೆ ಅರೋಗ್ಯದಲ್ಲಿ ವ್ಯತ್ಯಾಸ ಆಗಿದ್ದರಿಂದ  ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ

ಸರಳ ಸಜ್ಜನ ಮತ್ತು ಪ್ರಾಮಾಣಿಕ ವ್ಯಕ್ತಿಯಾಗಿದ್ದ ನವೀನ ನಾಯ್ಕ  ಅಂಕೋಲಾದ ವೈಭವ್ ಗ್ಯಾರೇಜ್ ನಲ್ಲಿ ಮೆಕ್ಯಾನಿಕ್ ಆಗಿ ಕೆಲಸ ನಿರ್ವಹಿಸುತ್ತಿದ್ದರು . ಎಲ್ಲರೊಂದಿಗೆ ಸ್ನೇಹಜೀವಿಯಾಗಿ ಬೆರೆಯುತ್ತಿದ್ದ ನವೀನ್ ಅವರ ಸಾವು ಸ್ನೇಹಿತ ವರ್ಗಕ್ಕೆ ಅಘಾತ ಉಂಟುಮಾಡಿದೆ.