ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಮುರ್ಡೇಶ್ವರ(Murdeshwar) : ಸ್ಕೂಟರಲ್ಲಿ ಬರುತ್ತಿದ್ದ ವ್ಯಕ್ತಿಯ  ಚಿನ್ನದ ಸರ(Gold Chain) ದರೋಡೆ ನಡೆಸಿದ  ನಾಲ್ವರು ಮಂಗಳಮುಖಿಯರನ್ನ ವಶಕ್ಕೆ(Transgender Arrest) ಪಡೆಯುವಲ್ಲಿ ಮುರ್ಡೇಶ್ವರ ಪೊಲೀಸರ(Murdeshwar Police) ಯಶಸ್ವಿಯಾಗಿದ್ದಾರೆ.

ಪ್ರವಾಸಕ್ಕಾಗಿ ಮುರ್ಡೇಶ್ವರಕ್ಕೆ ಬಂದಿದ್ದ ನಾಲ್ವರು ಮಂಗಳಮುಖಿಯರು ದೌರ್ಜನ್ಯ(Transagenders Violence) ಏಸಗಿದ್ದರು. ಈ ಬಗ್ಗೆ ದೂರಿ ದಾಖಲಾಗಿ ಮೈಸೂರು ಮೂಲದ(Mysore Native) ನಾಲ್ವರು ಮಂಗಳಮುಖಿಯರನ್ನ ಬಂಧಿಸಲಾಗಿದೆ. ಅವರಲ್ಲಿ ಒಬ್ಬಳು ಅಪ್ರಾಪ್ತೆ ಎಂಬುದು ಗೊತ್ತಾಗಿದೆ.

ರೈಲು ಸಿಗದ ಕಾರಣ ರಾತ್ರಿ ತಮ್ಮ ವಸತಿಗೃಹಕ್ಕೆ ಮಂಗಳಮುಖಿಯರು  ಹಿಂದಿರುಗುತ್ತಿದ್ದರು. ಅದೇ  ರಾತ್ರಿ ಸುಮಾರು 10-30ರ ಸುಮಾರಿಗೆ ಮುರ್ಡೇಶ್ವರ ರೈಲು ನಿಲ್ದಾಣದ(Murdeshwar Railway Station) ಸಮೀಪ ಸ್ಕೂಟರ್‌ನಲ್ಲಿ ಹೋಗುತ್ತಿದ್ದ  ಆರ‍್ ಎನ್ ಎಸ್  ಡಿಪ್ಲೋಮಾ ಕಾಲೇಜಿನ ಸಿಬ್ಬಂದಿ ಹಾಗೂ ಮಾವಳ್ಳಿ ೨, ಗುಮ್ಮನಹಕ್ಕಲ್ ಮೂಲದ ಅರುಣಕುಮಾರ ಭಾಸ್ಕರ ನಾಯ್ಕ ಅವರನ್ನ  ಮಂಗಳಮುಖಿಯರು ತಡೆದು, ಮೈಮೇಲೆ ಕೈ ಹಾಕಿ ದೌರ್ಜನ್ಯ ತೋರಿಸಿ, ಕುತ್ತಿಗೆಗೆ ಕೈ ಹಾಕಿ ಚಿನ್ನದ ಸರ ಕಿತ್ತು ಪರಾರಿಯಾಗಿದ್ದರು.

ಈ  ಬಗ್ಗೆ ಮುರ್ಡೇಶ್ವರ ಪೊಲೀಸ್ ಠಾಣೆಯಲ್ಲಿ(Murdeshwar Police Station) ದೂರು ದಾಖಲಾಗಿತ್ತು. ಘಟನೆಯ ಬಳಿಕ ಚುರುಕಾದ ಕಾರ್ಯಾಚರಣೆಯಲ್ಲಿ ಪೊಲೀಸರು ನಾಲ್ವರು ಮಂಗಳಮುಖಿಯರನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ ಅವರ ವಿರುದ್ಧ ದರೋಡೆ ಪ್ರಕರಣ ದಾಖಲಿಸಲಾಗಿದೆ. ಮುರ್ಡೇಶ್ವರ ಪೊಲೀಸರು  ತನಿಖೆ ಮುಂದುವರಿಸಿದ್ದಾರೆ.

ಇದನ್ನು ಓದಿ : ಸಾರ್ವಜನಿಕರಿಗೆ ತಲೆ ನೋವಾಗಿದ್ದ ವ್ಯಕ್ತಿ ಗಡಿಪಾರು.

ಕೈಗಾದಿಂದ ಕೆಲಸ ಮುಗಿಸಿ ಬರುತ್ತಿದ್ದ ಕಾರ್ಮಿಕರ ಟೆಂಪೋ ಪಲ್ಟಿ. ಹಲವರಿಗೆ ಗಾಯ.

45 ವರ್ಷವಾದರೂ ಮದುವೆಯಾಗಿಲ್ಲ. ಚಾಕು ಇರಿದುಕೊಂಡ ಆತ್ಮತ್ಯೆಗೆ ಯತ್ನಿಸಿದ ಕಾರವಾರದ ವ್ಯಕ್ತಿ.*

ಮುರ್ಡೇಶ್ವರದಲ್ಲಿ ಮಂಗಳಮುಖಿಯರ ದೌರ್ಜನ್ಯ. ಬೈಕ್ ಸವಾರನ ಸರ ಕಿತ್ತು ಪರಾರಿ.

ವಿದ್ಯುತ್ ಶಾಕ್ ಗೆ ಜೋಡಿಯಾನೆ ಬಲಿ. ಜಮೀನು ಮಾಲೀಕನ ಮೇಲೆ ಪ್ರಕರಣ.

ಸಿಗ್ನಲ್ ಮೀರಿ ಬಂದ ಅಂಬುಲೆನ್ಸ್. ಭಟ್ಕಳದ ದಂಪತಿ ದುರ್ಮರಣ. ಮಕ್ಕಳು ಅನಾಥ.