ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news)ಕಾರವಾರ (Karwar): ಪೆಹಲ್ಗಾಮ್ ನಲ್ಲಿ ಭಯೋತ್ಪಾದಕರ ದಾಳಿ ಹಿನ್ನಲೆಯಲ್ಲಿ ಪಾಕಿಸ್ತಾನಿ ಪ್ರಜೆಗಳು ದೇಶ ಬಿಟ್ಟು ಹೋಗಲು ಕೇಂದ್ರ ಸರ್ಕಾರ(Central Government) ಗಡುವು ನೀಡಿದೆ.
ರಾಜ್ಯದಲ್ಲಿಯೇ ಅತಿ ಹೆಚ್ಚು ಪಾಕಿಸ್ತಾನಿಯರಿರುವ ಉತ್ತರಕನ್ನಡ (Uttarakannada) ಜಿಲ್ಲೆಯಲ್ಲಿ ಅವರ ಮೇಲೆ ಪೊಲೀಸ್ ಇಲಾಖೆ ನಿಗಾ ಇಟ್ಟಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಎಂ ನಾರಾಯಣ್ ಹೇಳಿದ್ದಾರೆ.
ನಮ್ಮ ರಾಜ್ಯದಲ್ಲಿ 88 ಜನ ಲಾಂಗ್ ಟರ್ಮ್ ವೀಸಾ(LTV) ಹಾಗೂ 4 ಜನ ವಿಸಿಟರ್ ವೀಸಾದಲ್ಲಿದ್ದಾರೆ. ಉತ್ತರಕನ್ನಡ ಜಿಲ್ಲೆಯಲ್ಲಿ 15 ಜನ ಪಾಕಿಸ್ತಾನಿ(Pakisthani) ಪ್ರಜೆಗಳಿದ್ದಾರೆ. 13 ಜನ ಭಟ್ಕಳದಲ್ಲಿದ್ದು ಓರ್ವರು ಕಾರವಾರದಲ್ಲಿದ್ದಾರೆ 10 ಮಹಿಳೆಯರಿದ್ದು ಮೂವರು ಮಕ್ಕಳಿದ್ದಾರೆ. ಒಬ್ಬರು ನ್ಯಾಯಾಲಯದಲ್ಲಿ ಪ್ರಕರಣ ನಡೆಯುತ್ತಿದೆ ಎಂದು ಎಸ್ಪಿ ಹೇಳಿದ್ದಾರೆ.
ಎಲ್ಲರೂ ಲಾಂಗ್ ಟರ್ಮ್ ವೀಸಾ ಪಡೆದವರಾಗಿದ್ದಾರೆ. ಹೊನ್ನಾವರದ(Honnavar Valki) ವಲ್ಕಿಯ ಯುವತಿ ಪಾಕಿಸ್ತಾನದಲ್ಲಿ ಮದುವೆಯಾಗಿದ್ದು ಅಲ್ಲಿನ ಸರ್ಕಾರದ ತಿರ್ಮಾನಕ್ಕಾಗಿ ಕಾಯುತ್ತಿದ್ದೇವೆ ಎಂದ ಎಸ್ಪಿ ಅವರು ವೀಸಾದಲ್ಲಿ 28 ಬಗೆ ಇದೆ. ಮದುವೆ ಆದವರಿಗೆ ಲಾಂಗ್ ಟರ್ಮ್ ವೀಸಾ ಕೊಡಲಾಗುತ್ತದೆ. ಲಾಂಗ್ ಟರ್ಮ್ ವೀಸಾ ಹೊರತು ಪಡಿಸಿ ಉಳಿದವರು ಕಳಿಸಲು ಸೂಚನೆ ನೀಡಿದೆ.
ಹೀಗಾಗಿ ಉತ್ತರಕನ್ನಡ ಜಿಲ್ಲೆಯಲ್ಲಿ ಯಾವುದೇ ಪಾಕಿಸ್ತಾನಿ ಪ್ರಜೆ ಗಡಿಪಾರು ಮಾಡಲು ಆಗುವುದಿಲ್ಲ ಎಂದು ಎಸ್ಪಿ ಅವರು ಸ್ಪಷ್ಟಪಡಿಸಿದ್ದಾರೆ.