ಇ ಸಮಾಚಾರ ಡಿಜಿಟಲ್ ನ್ಯೂಸ್(esamacharadigital news) ಕಾರವಾರ(Karwar) : ಮುಂಡಗೋಡ ಪೊಲೀಸ್ ಠಾಣೆಯ ಪಿಎಸ್‌ಐ ಯಲ್ಲಾಲಿಂಗ ಕುನ್ನೂರು  ಅನಾರೋಗ್ಯದಿಂದ ವಿಧಿವಶರಾಗಿದ್ದಾರೆ. ಅವರಿಗೆ 33 ವರ್ಷ ವಯಸ್ಸಾಗಿತ್ತು.

ಕೆಲ ದಿನಗಳಿಂದ ಅನಾರೋಗ್ಯಕ್ಕೀಡಾಗಿದ್ದ ಅವರು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ನಿಧನರಾಗಿದ್ದಾರೆ.

ಇತ್ತೀಚೆಗೆ ಎರಡನೇ ಬಾರಿಗೆ ಮುಂಡಗೋಡ ಪೊಲೀಸ್ ಠಾಣೆಗೆ ಪಿಎಸ್‌ಐ ಆಗಿ ವರ್ಗಾವಣೆಗೊಂಡಿದ್ದ ಯಲ್ಲಾಲಿಂಗ್ ಕುನ್ನೂರು, ಇದಕ್ಕೂ ಮುನ್ನ ಯಲ್ಲಾಪುರ ಪೊಲೀಸ್ ಠಾಣೆಯಲ್ಲೂ ಪಿಎಸ್‌ಐ ಆಗಿ ಸೇವೆ ಸಲ್ಲಿಸಿದ್ದರು.

ಜನಾನುರಾಗಿಯಾಗಿ, ಶಿಸ್ತುಬದ್ಧ ಹಾಗೂ ದಕ್ಷ ಪೊಲೀಸ್ ಅಧಿಕಾರಿಯಾಗಿ ಅವರು ತಮ್ಮ ಸೇವಾ ಅವಧಿಯಲ್ಲಿ ಗುರುತಿಸಿಕೊಂಡಿದ್ದರು.

ಅವರ ಅಕಾಲಿಕ ನಿಧನದಿಂದ ಪೊಲೀಸ್ ವಲಯದಲ್ಲಿ ಹಾಗೂ ಸಾರ್ವಜನಿಕರಲ್ಲಿ ತೀವ್ರ ದುಃಖ ವ್ಯಕ್ತವಾಗಿದೆ. ಸಹೋದ್ಯೋಗಿಗಳು, ಸ್ನೇಹಿತರು ಹಾಗೂ ನಾಗರಿಕರು ಯಲ್ಲಾಲಿಂಗ್ ಕುನ್ನೂರು ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.

ಇದನ್ನು ಓದಿ : ಪತಿ–ಪತ್ನಿ ಕಲಹ.  ತಾಯಿಯೊಂದಿಗೆ ಇರಲು ಬಯಸದ ಮಕ್ಕಳು. ಭಾವನ ಮುಗಿಸಿದ ಕಿರಾತಕಿ

ಜೈಲಿನಲ್ಲಿ ನಿಲ್ಲದ ಖೈದಿಗಳ ಉಪಟಳ. ಕೇಂದ್ರ ಕಾರಾಗೃಹದಲ್ಲಿ ಗಾಂಜಾ, ಮೊಬೈಲ್ ಪೂರೈಕೆ

ಇಷ್ಟವಿಲ್ಲದ ಮದುವೆಗೆ ವಧುವೆ ವಿಲನ್. ಲವರ್ ಜೊತೆ ಆರೆಸ್ಟ್.