ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news)ಹೊನ್ನಾವರ(Honnavar): ರಾಷ್ಟ್ರೀಯ ಹೆದ್ದಾರಿ 66ರ ಪಕ್ಕದಲ್ಲಿರುವ ಗುಜರಿ ಗೋಡೌನ್ ಗೆ (Scrap Godown) ಬೆಂಕಿ(Fire) ಬಿದ್ದ ಘಟನೆ ತಾಲೂಕಿನ ಗುಣವಂತಿ ಬಳಿ ಗುರುವಾರ ಸಂಭವಿಸಿದೆ.
ಬಿಸಿಲಿನ ಬೆಂಕಿ ಕೆನ್ನಾಲಿಗೆಗೆ ಗುಜರಿ ವಸ್ತುಗಳು(Scrap Items) ಸುಟ್ಟು ಭಸ್ಮವಾಗಿದೆ. ಸ್ಥಳದಲ್ಲಿದ್ದ ಎರಡು ವಾಹನಗಳಿಗೂ ಬೆಂಕಿ ತಗುಲಿದೆ ಎನ್ನಲಾಗಿದೆ. ಬೆಂಕಿ ಅವಘಡದಿಂದ ದಟ್ಟಣೆಯ ಹೊಗೆ ಕಾಣಿಸಿಕೊಂಡಿದ್ದು, ಆತಂಕದ ವಾತಾವರಣ ನಿರ್ಮಾಣವಾಗಿತ್ತು.
ಅಗ್ನಿ ಶಾಮಕ ದಳದ(Fire Brigade) ಸಿಬ್ಬಂದಿಗಳು ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸುವ ಪ್ರಯತ್ನ ನಡೆಸುತ್ತಿದ್ದಾರೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ಕೆಲ ಕಾಲ ವಾಹನ ಸಂಚಾರ ಸ್ಥಗಿತಗೊಳಿಸಲಾಗಿತ್ತು. ಕರಾವಳಿ ಭಾಗದಲ್ಲಿ ಹೆಚ್ಚಿರುವ ಬಿಸಲಿನ ತಾಪಮಾನಕ್ಕೆ ಬೆಂಕಿ ಹೊತ್ತಿಕೊಂಡಿರುವ ಸಾಧ್ಯತೆ ಇದೆ.
ಇದನ್ನು ಓದಿ,: ಅನ್ಯ ಜಾತಿ ವಿವಾಹದಿಂದ ಸಿಟ್ಟಾದ ತಂದೆ. ಇಬ್ಬರಿಗೂ ಚಾಕು ಇರಿದ. ತಾನು ವಿಷ ಸೇವಿಸಿದ.
ಪವಿತ್ರ ಜಲದಿಂದ ಶಿವನಿಗೆ ಅಭಿಷೇಕ ಮಾಡಿದ ಸಚಿವ ಮಾಂಕಾಳ್ ವೈದ್ಯ. ರಾತ್ರಿ ಪೂರ್ತಿ ಜಾಗರಣೆ.
ವಧುವಿನ ಸ್ನೇಹಿತಗೆ ಹಾರ ಹಾಕಿದ ವರ. ಕೆನ್ನೆಗೆ ಬಾರಿಸಿ ಹೊರ ನಡೆದ ವಧು.