ಇ ಸಮಾಚಾರ ಡಿಜಿಟಲ್ ನ್ಯೂಸ್(esamachara digital news) ನವದೆಹಲಿ (Newdelhi) : ಟೆಸ್ಟ್ ಕ್ರಿಕೆಟ್‌ಗೆ ವಿರಾಟ್ ಕೊಹ್ಲಿ (Virat Kohli) ನಿವೃತ್ತಿ ಘೋಷಿಸಿದ್ದಾರೆ. ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಈ ಬಗ್ಗೆ ಪೋಸ್ಟ್ ಮಾಡುವ ಮೂಲಕ ಸೋಮವಾರ ಮಾಹಿತಿಯನ್ನು ನೀಡಿದ್ದಾರೆ.
2011ರಲ್ಲಿ ವೆಸ್ಟ್ ಇಂಡೀಸ್(WestIndies) ವಿರುದ್ಧ ಟೆಸ್ಟ್ ಕ್ರಿಕೆಟ್‌ಗೆ ವಿರಾಟ್ ಕೊಹ್ಲಿ(Virat Kohli) ಪಾದಾರ್ಪಣೆ ಮಾಡಿದರು. 14 ವರ್ಷಗಳ ಕ್ರಿಕೆಟ್ ಜೀವನದಲ್ಲಿ ಕೊಹ್ಲಿ 123 ಟೆಸ್ಟ್ ಪಂದ್ಯಗಳಲ್ಲಿ ಅಡಿ 9,230 ರನ್‌ಗಳನ್ನು ಗಳಿಸಿದ್ದಾರೆ. 30 ಶತಕಗಳು ಮತ್ತು 31 ಅರ್ಧಶತಕಗಳೊಂದಿಗೆ ಭಾರತದ ನಾಲ್ಕನೇ ಅತಿ ಹೆಚ್ಚು ರನ್ ಗಳಿಸಿದ ಟೆಸ್ಟ್ ಆಟಗಾರ(Test Player) ಎಂದು ಕೀರ್ತಿ ಪಡೆದಿದ್ದಾರೆ.
ಭಾರತೀಯ ಕ್ರಿಕೆಟ್ ಒಂದು ವಾರದೊಳಗೆ ಎರಡು ಪ್ರಮುಖ ಶಾಕಿಂಗ್ ಸಂಗತಿ ನೀಡಿದೆ. 2020ರ ವರೆಗೆ ವಿಶ್ವ ಕ್ರಿಕೆಟ್‌ನ್ನು ತನ್ನ ಬ್ಯಾಟಿಂಗ್‌ನಿಂದ ಆಳಿದ ವಿರಾಟ್ ಕೊಹ್ಲಿ(Virat Kohli) ನಂತರ ಫಾರ್ಮ್ ಕಳೆದುಕೊಂಡಿದ್ದರು. ವಿರಾಟ್ ಕೊಹ್ಲಿ 2020 ರವರೆಗೆ 27 ಟೆಸ್ಟ್ ಶತಕಗಳೊಂದಿಗೆ ಅಗ್ರ ಸ್ಥಾನದಲ್ಲಿದ್ದರು.
ಭಾರತ ಪರ ಅತಿಹೆಚ್ಚು ಟೆಸ್ಟ್ ಪಂದ್ಯಗಳನ್ನು ಗೆದ್ದ ನಾಯಕ ಎನ್ನುವ ಹೆಗ್ಗಳಿಕೆಯೂ ವಿರಾಟ್ ಕೊಹ್ಲಿ ಹೆಸರಿನಲ್ಲಿ ಇದೆ.
ಇದನ್ನು ಓದಿ : ಭಟ್ಕಳ, ಮುರ್ಡೇಶ್ವರದಲ್ಲಿ ರಾತ್ರಿ 7:30ರಿಂದ ರಾತ್ರಿ 8 ಗಂಟೆಯವರೆಗೆ ಬ್ಲಾಕ್ಔಟ್