ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news)ಮಂಗಳೂರು(Manglore) : ರಾಜಧಾನಿ ಸೇರಿ ಕರಾವಳಿ ಜಿಲ್ಲೆಗಳಲ್ಲಿ ಮಳೆ ಸುರಿಯುತ್ತಿದೆ. ಉಡುಪಿ(Udup), ದಕ್ಷಿಣ ಕನ್ನಡ(Dakshinakannada) ಮತ್ತು ಉತ್ತರಕನ್ನಡ(Uttarakannada) ಜಿಲ್ಲೆಗಳಲ್ಲಿ ಭಾರೀ ಮಳೆಯಾಗುತ್ತಿದೆ. ಶ್ರೀ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದ(Kukke Subrahmanya) ಸಮೀಪ ಇರುವ ಕುಮಾರಧಾರ ನದಿ(Kumaradhara River) ಉಕ್ಕಿ ಹರಿಯುತ್ತಿದೆ.
ದಕ್ಷಿಣಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಆರೆಂಜ್ ಅಲರ್ಟ್ (Orange Alert) ಘೋಷಣೆ ಮಾಡಲಾಗಿದೆ. ಈ ಕಾರಣಕ್ಕೆ ಕುಕ್ಕೆ ಸುಬ್ರಹ್ಮಣ್ಯಕ್ಕೆ (Kukke Subrahmanya) ಭೇಟಿ ನೀಡುವ ಭಕ್ತರು ಕುಮಾರಧಾರ ನದಿಗೆ ಇಳಿಯದಂತೆ ಸೂಚನೆ ನೀಡಲಾಗಿದೆ. ಆ ಮೂಲಕ ತೀರ್ಥಸ್ನಾನಕ್ಕೂ ಚಂಡಮಾರುತದ ಎಫೆಕ್ಟ್(Cyclone Effect) ತಟ್ಟಿದಂತಾಗಿದೆ.
ದಕ್ಷಿಣ ಕನ್ನಡ (Dakshinakannada) ಜಿಲ್ಲೆ ಕಡಬ(Kadaba) ತಾಲೂಕಿನ ಶ್ರೀಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯಕ್ಕೆ(Kukke Subrahmanya) ಸಾಕಷ್ಟು ಪ್ರವಾಸಿಗರು ಭೇಟಿ ನೀಡುತ್ತಿದ್ದಾರೆ. ಚಂಡಮಾರುತದ ಪರಿಣಾಮ ನದಿಗಳಲ್ಲಿ ಪ್ರವಾಹ ಉಂಟಾಗಿದ್ದು, ಕುಕ್ಕೆ ಸುಬ್ರಹ್ಮಣ್ಯಕ್ಕೆ ಬರುವ ಪ್ರವಾಸಿಗರು ಕುಮಾರಧಾರಾ ನದಿಗೆ ಇಳಿಯಬಾರದು ಎಂದು ಪುತ್ತೂರು (Putturu) ಉಪ ಆಯುಕ್ತ ಜುಬಿನ್ ಮೊಹಪಾತ್ರ ತಿಳಿಸಿದ್ದಾರೆ.
ಇದನ್ನು ಓದಿ : ಬಿಗ್ ಬಾಸ್ ಸ್ಪರ್ಧಿ ಶೋಭಾಗೆ ಅನಾರೋಗ್ಯ