ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಜೋಯಿಡಾ(Joida) : ತಾಲ್ಲೂಕಿನ ಜಗಲ್‌ಬೆಟ್ ಗ್ರಾಮದಲ್ಲಿ ಮಹಿಳೆಯೊಬ್ಬರು ಹುಟ್ಟು ಹಬ್ಬದ(Birthday) ದಿನವೇ ಮೃತಪಟ್ಟಿದ್ದಾರೆ.
ರೋಹಿಣಿ ಹಣಬರ(30) ಎಂಬಾಕೆಯೇ ಅಕಾಲಿಕ ನಿಧನ ಹೊಂದಿದ್ದು ಸ್ಥಳೀಯರಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಹೆರಿಗೆಗೆಂದು ರೋಹಿಣಿ ಅವರನ್ನು ದಾಂಡೇಲಿಯ ಆಸ್ಪತ್ರೆಗೆ(Dandeli Hospital) ದಾಖಲಿಸಲಾಗಿತ್ತು. ಆದರೆ ಹೆಚ್ಚಿನ ಚಿಕಿತ್ಸೆಗಾಗಿ ಧಾರವಾಡ ಆಸ್ಪತ್ರೆಗೆ(Dharwad Hospital) ಕಳಿಸಲು ವೈದ್ಯರು ಸೂಚಿಸಿದ್ದರು. ಹೀಗಾಗಿ ಕರೆದೊಯ್ಯುವ ಸಂದರ್ಭದಲ್ಲಿ ಹಳಿಯಾಳ(Haliyal) ಸಮೀಪದಲ್ಲಿ ಮೃತಪಟ್ಟಿದ್ದಾಳೆ.
ವೈದ್ಯರ ನಿರ್ಲಕ್ಷ್ಯವೇ(Doctor Negligence) ಸಾವಿಗೆ ಕಾರಣ ಎಂದು ಸಂಬಂಧಿಕರು ಗಂಭೀರ ಆರೋಪ ಮಾಡಿದ್ದಾರೆ. ಆದರೆ, ಚಿಕಿತ್ಸೆ ನೀಡಿದ ವೈದ್ಯರು ಆರೋಪವನ್ನು ತಳ್ಳಿ ಹಾಕಿದ್ದು, ಮಹಿಳೆ ಹೆರಿಗೆಯಿಂದಾಗಿ ಸಾವನ್ನಪ್ಪಿಲ್ಲ” ಎಂದಿದ್ದಾರೆ.
ಮೃತದೇಹವನ್ನು ಹಳಿಯಾಳದಿಂದ ಕಾರವಾರ(Haliyal to Karwar) ಜಿಲ್ಲಾ ಆಸ್ಪತ್ರೆಗೆ ಸಾಗಿಸಲಾಗಿದ್ದು, ಕಾರವಾರ ಜಿಲ್ಲಾ ಆರೋಗ್ಯ ಕೇಂದ್ರದಲ್ಲಿ ಶವಪರೀಕ್ಷೆ ಪೂರ್ಣಗೊಂಡ ನಂತರ ದೇಹವನ್ನು ಬಂಧುಗಳಿಗೆ ಹಸ್ತಾಂತರಿಸಲಾಗಿದೆ.
ಈ ಘಟನೆ ಹಿನ್ನೆಲೆಯಲ್ಲಿ ಗ್ರಾಮದಲ್ಲಿ ಶೋಕ ಮತ್ತು ಆಕ್ರೋಶದ ವಾತಾವರಣ ಮುಂದುವರಿದಿದೆ. ಮೃತ ಮಹಿಳೆಗೆ ಇಬ್ಬರು ಚಿಕ್ಕ ಹೆಣ್ಣು ಮಕ್ಕಳಿದ್ದು, ತಾಯಿ ಕಳೆದುಕೊಂಡ ನೋವಿನಲ್ಲಿ ಕುಟುಂಬಸ್ಥರು ಕಣ್ಣೀರಿನಲ್ಲಿ ಮುಳುಗಿದ್ದಾರೆ. ಹುಟ್ಟುಹಬ್ಬದ ದಿನವೇ ಜೀವ ಕಳೆದುಕೊಂಡಿರುವುದು ಕುಟುಂಬದ ನೋವನ್ನು ಇನ್ನಷ್ಟು ಹೆಚ್ಚಿಸಿದೆ. ಮಹಿಳೆಯ ಅಕಾಲಿಕ ಸಾವು ಜಗಲ್‌ಬೆಟ್ ಗ್ರಾಮದಲ್ಲಿ(Jagalbet Village) ತೀವ್ರ ಆಘಾತ ಮತ್ತು ದುಃಖದ ವಾತಾವರಣವನ್ನು ಉಂಟುಮಾಡಿದೆ.
ಇದನ್ನು ಓದಿ : ಗೋವಾ ನೈಟ್ ಕ್ಲಬ್ ದುರಂತ. ಪಾರ್ಟನರ್ ಓರ್ವ ದೆಹಲಿಯಲ್ಲಿ ವಶಕ್ಕೆ.
ಕಾರವಾರ ಜೈಲಿನಲ್ಲಿ ಮತ್ತೆ ಗಲಾಟೆ. ಮಂಗಳೂರು ಮೂಲದ ಆರು ಖೈದಿಗಳಿಂದ ರಂಪಾಟ.
ಮಲ್ಪೆಯಲ್ಲಿ ಸಿಕ್ಕಿ ಬಿದ್ದಿದ್ದ ಅಕ್ರಮ ಬಾಂಗ್ಲಾ ವಲಸಿಗರಿಗೆ ಶಿಕ್ಷೆ.
ಗೋವಾದ ನೈಟ್ ಕ್ಲಬ್ ಮಾಲೀಕರು ವಿದೇಶಕ್ಕೆ ಎಸ್ಕೇಪ್. ಮತ್ತೊಂದು ಕ್ಲಬ್ ಉಡೀಸ್ದ ಮಾಡಿದ ಸರ್ಕಾರ.
