ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಕುಮಟಾ (Kumta): ಗೋವಾ (Goa) ಬೋಟಿನಲ್ಲಿ ಕೆಲಸಕ್ಕೆಂದು ತೆರಳಿದ್ದ ಮೀನುಗಾರನೊರ್ವ ಅನುಮಾನಾಸ್ಪದವಾಗಿ ಸಾವನ್ನಪ್ಪಿದ (Suspect Death) ಘಟನೆ ನಡೆದಿದೆ.
50 ವರ್ಷದ ಅನಂತ್ ಅಂಬಿಗ ಸಾವನ್ನಪ್ಪಿದ ಮೀನುಗಾರ. ಕುಮಟಾ (Kumta) ತಾಲೂಕಿನ ತದಡಿ ಗ್ರಾಮದ(Tadri Village) ಅನಂತ್ ವಾರದ ಹಿಂದೆ ಗೋವಾಕ್ಕೆ ತೆರಳಿದ್ದ. ಗೋವಾದ ಶೈನಿಂಗ್ ಸ್ಟಾರ್ ಎನ್ನುವ ಬೋಟ್ ನಲ್ಲಿ ಕೆಲಸ ಮಾಡುತ್ತಿದ್ದ ಅನಂತ್ ಮೃತ ದೇಹ ಬೋಟ್ ನ ಎಂಜಿನ್ ರೂಮಿನಲ್ಲಿ ಪತ್ತೆಯಾಗಿದೆ.
ಬುಧವಾರ ರಾತ್ರಿ ಬೋಟಿನವರು ಮೃತದೇಹವನ್ನು ಹೊನ್ನಾವರದಲ್ಲಿ ಬಂದರಿಗೆ ತಂದು ಊರಿಗೆ ಕಳಿಸುವ ಪ್ರಯತ್ನದಲ್ಲಿದ್ದರು. ಅದಕ್ಕೆ ವಿರೋಧ ವ್ಯಕ್ತವಾದಾಗ ತದಡಿ ಬಂದರಿಗೆ ತರಲಾಯಿತು. ಆಗ ಸ್ಥಳೀಯರು ಅನುಮಾನಗೊಂಡು ತೀವ್ರ ವಿರೋಧ ವ್ಯಕ್ತಪಡಿಸಿದರು.
ಇದು ಕೊಲೆ ಇರಬಹುದೆಂದು ಸಂಶಯ ವ್ಯಕ್ತಪಡಿಸಿ ಪ್ರತಿಭಟಿಸಿದರು. ಬೋಟ್ ಮಾಲೀಕ ಸ್ಥಳಕ್ಕೆ ಆಗಮಿಸಿ ಸಾವಿಗೆ ನಿಖರ ಕಾರಣ ನೀಡಬೇಕೆಂದು ಒತ್ತಾಯಿಸಿದರು. ಅಲ್ಲಿವರೆಗೆ ಮೃತದೇಹ ಒಯ್ಯುವುದಿಲ್ಲ ಎಂದು ಪಟ್ಟು ಹಿಡಿದರು. ಕೆಲ ತಾಸಿನ ಬಳಿಕ ಬೋಟ್ ಕಂಪನಿಯ ಮ್ಯಾನೇಜರ್ ಆಗಮಿಸಿ ಸಮಜಾಯಿಸಿ ಹೇಳಿದರು ಗ್ರಾಮಸ್ಥರು ಸಮಾಧಾನಗೊಂಡಿಲ್ಲ. ರಾತ್ರಿ ಎಂಟು ಗಂಟೆವರೆಗೂ ಸ್ಥಳೀಯರು ಗೋಕರ್ಣ ಆಸ್ಪತ್ರೆ ಮುಂದೆ ಜಮಾಯಿಸಿದರು.
ಗೋಕರ್ಣ ಪೊಲೀಸರು(Gokarn Police) ಅನುಮಾನಾಸ್ಪದ ಸಾವು ಎಂದು ಪ್ರಕರಣ ದಾಖಲಿಸಿಕೊಂಡಿದ್ದಾರೆ. ತನಿಖೆ ನಡೆಸಲಾಗಿದೆ.
ಇದನ್ನು ಓದಿ : ಹೆದ್ದಾರಿ ತಡೆ, ಠಾಣೆಗೆ ಮುತ್ತಿಗೆ ಹಾಕಿದವರ ಮೇಲೆ ಮುಲಾಜಿಲ್ಲದೆ ಕ್ರಮ
ಆನ್ಲೈನ್ ಪ್ರೇಮಕ್ಕೆ ಸಾಕ್ಷಿಯಾಯ್ತು, ಅಮೇರಿಕಾ ಯುವತಿ ಮತ್ತು ಆಂಧ್ರ ಯುವಕನ ಪ್ರೀತಿ.
ಭಾವಿ ಅತ್ತೆಯೊಂದಿಗೆ ಓಡಿ ಹೋದ ಅಳಿಯ. ವಧುವಿನ ಕುಟುಂಬದವರು ಕಂಗಾಲು.
ಯಾಸಿನ್ ಭಟ್ಕಳ್ ಸೇರಿ ಐವರಿಗೆ ಮರಣ ದಂಡನೆ ಫಿಕ್ಸ್. ಶಿಕ್ಷೆ ಎತ್ತಿ ಹಿಡಿದ ಹೈಕೋರ್