ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಯಲ್ಲಾಪುರ(Yallapur) : ತಾಲೂಕಿನ ಕಿರವತ್ತಿಯ ಡೊಮಗೇರಿಯಲ್ಲಿ(Kiravatti Domageri) ಬೃಹತ್ ಮರವೊಂದು ಉರುಳಿ ಬಿದ್ದ ಪರಿಣಾಮ ಗರ್ಭಿಣಿ ಮಹಿಳೆಯೋರ್ವಳು(Pregnant women) ದಾರುಣ ಸಾವನ್ನಪ್ಪಿ ಕೆಲ ಮಕ್ಕಳು ತೀವೃವಾಗಿ ಗಾಯಗೊಂಡ ಘಟನೆ ಸಂಭವಿಸಿದೆ.
ಸೋಮವಾರ ಸಂಜೆ ಅಂಗನವಾಡಿ(Anganawadi) ಮುಗಿಸಿ ಮನೆಗೆ ತೆರಳುತ್ತಿದ್ದ ವೇಳೆ ಈ ದುರ್ಘಟನೆ ನಡೆದಿದೆ. ಮಕ್ಕಳನ್ನು ಮನೆಗೆ ಕರೆತರಲು ತೆರಳಿದ್ದ 5 ತಿಂಗಳ ಗರ್ಭಿಣಿ ಸಾವಿತ್ರಿ ಬಾಬು ಖರಾತ್(28) ಘಟನೆಯಲ್ಲಿ ಸಾವನ್ನಪ್ಪಿದ್ದಾಳೆ. ಘಟನೆಯಲ್ಲಿ ಸ್ವಾತಿ ಬಾಬು ಖರಾತ್ (17), ಘಾಟು ಲಕ್ಕು ಕೊಕರೆ (5), ಶ್ರಾವಣಿ ಬಾಬು ಖರಾತ್ (2), ಶಾಂಭವಿ ಬಾಬು ಖರಾತ್ (4) ತೀವೃವಾಗಿ ಗಾಯಗೊಂಡಿದ್ದು ಹೆಚ್ಚಿನ ಚಿಕೆತ್ಸೆಗಾಗಿ ಹುಬ್ಬಳ್ಳಿಗೆ ರವಾನಿಸಲಾಗಿದೆ.
ಇನ್ನುಳಿದಂತೆ ಸಾನ್ವಿ ಬಾಬು ಕೊಕರೆ (5), ವಿನಯ್ ಲಕ್ಕು ಖರಾತ್ (5), ಅನುಶ್ರೀ ಮಾಂಬು ಕೊಕರೆ (5) ಘಟನೆಯಲ್ಲಿ ಅದೃಷ್ಟವಶಾತ್ ಪಾರಾಗಿದ್ದಾರೆ. ಘಟನೆ ತಿಳಿಯುತ್ತಿದ್ದಂತೆ ಸಿಪಿಐ ರಮೇಶ ಹನಾಪೂರ, ಪೊಲೀಸ್ ಸಿಬ್ಬಂದಿಗಳು ಮತ್ತು ಹೆಸ್ಕಾಂ ಸಿಬ್ಬಂದಿಗಳು ಸ್ಥಳಕ್ಕೆ ತೆರಳಿ ರಕ್ಷಣಾ ಕಾರ್ಯ ನಡೆಸಿದರು. ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ(Yallapur Police Station) ಪ್ರಕರಣ ದಾಖಲಾಗಿದೆ.
ಶಾಸಕಶಿವರಾಮಹೆಬ್ಬಾರ್ಸಂತಾಪ : ಶಾಸಕ ಶಿವರಾಮ ಹೆಬ್ಬಾರ್ ಅವರು ಸುದ್ದಿ ತಿಳಿದ ತಕ್ಷಣವೇ ಸರಕಾರಿ ಆಸ್ಪತ್ರೆಗೆ ಭೇಟಿ ನೀಡಿ, ಪಾರ್ಥಿವ ಶರೀರಕ್ಕೆ ಅಂತಿಮ ನಮನ ಸಲ್ಲಿಸಿದರು. ದುಃಖಿತರಾದ ಕುಟುಂಬಸ್ಥರಿಗೆ ಸಾಂತ್ವನ ಹೇಳಿ, ಧೈರ್ಯ ತುಂಬಿದರು ಹಾಗೂ ಸರ್ಕಾರದಿಂದ ಅಗತ್ಯ ಪರಿಹಾರ ಒದಗಿಸುವ ಭರವಸೆಯನ್ನು ನೀಡಿದ್ದಾರೆ.
ಇದನ್ನು ಓದಿ : ರಾತ್ರಿ ನಭೋಮಂಡಲದಲ್ಲಿ ನಡೆದ ಚಮತ್ಕಾರ. ಸಪ್ಟೆಂಬರ್ 21ಕ್ಕೆ ಸೂರ್ಯಗ್ರಹಣ.
ಬೆಣ್ಣೆಹೊಳೆಯಲ್ಲಿ ಜಾರಿ ಬಿದ್ದು ಅರಣ್ಯ ವಿದ್ಯಾರ್ಥಿ ನಾಪತ್ತೆ. ಈಜು ತಜ್ಞರಿಂದ ಶೋಧ.
