ಶಿರಸಿ : ಯಲ್ಲಾಪುರ ಶಾಸಕ ಶಿವರಾಮ ಹೆಬ್ಬಾರ್ (SHIVRAM HEBBAR) ಅಂಬ್ಯುಲೆನ್ಸ್ ಓಡಿಸುವ ಮೂಲಕ ಗಮನ ಸೆಳೆದಿದ್ದಾರೆ.

ಸರ್ಕಾರದಿಂದ ತಾಲೂಕಿನ ಬನವಾಸಿಯ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ 108 ಆಂಬ್ಯುಲೆನ್ಸ್‌ ವಾಹನ ಮಂಜೂರಾಗಿದೆ. ತುರ್ತು ಸೇವೆಯನ್ನು ಕ್ಷೇತ್ರದ ಶಾಸಕ ಶಿವರಾಮ ಹೆಬ್ಬಾರ ಉದ್ಘಾಟಿಸಿದರು. ಬಳಿಕ ವಾಹನವೇರಿ ಸೈರನ್‌ ಹಾಕಿಕೊಂಡು ಆರೋಗ್ಯ ಕೇಂದ್ರದ ಆವಾರದಿಂದ ಹೊರಭಾಗದ ರಸ್ತೆವರೆಗೂ ಚಲಾಯಿಸಿದರು.

ಈ ಹಿಂದೆ ಬಾರೀ ವಾಹನಗಳನ್ನ ಓಡಿಸುತ್ತಿದ್ದ ಶಿವರಾಮ್ ಹೆಬ್ಬಾರ್ ತಮ್ಮ ಹಿಂದಿನ ನೆನಪುಗಳನ್ನ ಮೆಲುಕು ಹಾಕಿಕೊಂಡರು. ಶಾಸಕರಾದ ಆಂಬುಲೆನ್ಸ್ ಕಂಡು  ನಾಗರಿಕರು ಅಚ್ಚರಿಗೊಂಡರು.