ಹೊನ್ನಾವರ (Honnavar): ಚಾಮರಾಜಪೇಟೆಯಲ್ಲಿ ಹಸುವಿನ ಕೆಚ್ಚಲನ್ನ ಕಡಿದ ಘಟನೆ ಅಲ್ಲೋಲ ಕಲ್ಲೋಲ ಎಬ್ಬಿಸಿದ ಬೆನ್ನಲ್ಲೇ . ಈ ಹೊನ್ನಾವರದಲ್ಲಿ ಜಾನುವಾರುಗಳ (Cattle) ಮೇಲೆ ರಾಕ್ಷಸರು ಅಟ್ಟಹಾಸ ಮೆರೆದಿದ್ದಾರೆ.
ಗರ್ಭ ಧರಿಸಿದ್ದ ಹಸುವನ್ನೇ ಕೊಂದು ಮಾಂಸ ಕದ್ದು ಆರೋಪಿಗಳು ಪರಾರಿಯಾಗಿದ್ದಾರೆ. ಹೊನ್ನಾವರ ತಾಲೂಕಿನ ಸಾಲ್ಕೋಡು ಗ್ರಾಮದ ಬಳಿಯ ಕೊಂಡುಕುಳಿಯ ಕೃಷ್ಣ ಆಚಾರಿ ಎನ್ನುವವರು ಸಾಕಿದ ಹಸುವೊಂದು ನಿನ್ನೆ ಮೇಯಲು ಸಮೀಪದ ಕಾಡಿಗೆ ತೆರಳಿತ್ತು. ಆದರೆ ಬೆಳಗಾದರೂ ಹಸು ಮನೆಗೆ ವಾಪಾಸ್ ಬರದಿರೋದನ್ನ ಕಂಡ ಮನೆಯ ಮಾಲಿಕರು ಹಸುವಿನ ಹುಡುಕಾಟ ನಡೆಸಿದ್ದಾರೆ. ಆಗ ದುಷ್ಕರ್ಮಿಗಳು ತಲೆ ಕತ್ತರಿಸಿ ಹೋಗಿರುವ ಘಟನೆ ಬೆಳಕಿಗೆ ಬಂದಿದೆ.
ಹಸುವಿನ ರುಂಡ ಕತ್ತರಿಸಿ ಕಾಲುಗಳನ್ನ ಎಸೆದು ಮಾಂಸವನ್ನ ಆರೋಪಿಗಳು ಕದ್ದು ಪರಾರಿಯಾಗಿದ್ದಾರೆ. ಭಾನುವಾರ ಬೆಳಿಗ್ಗೆ ಜಾನುವಾರಿಗೆ ಹಿಂಸೆ ಮಾಡಿರೋದು ಬೆಳಕಿಗೆ ಬರುತ್ತಿದ್ದಂತೆ ಊರಿನವರು ಸ್ಥಳದಲ್ಲಿ ಜಮಾಯಿಸಿದ್ದರು. ಹೊನ್ನಾವರ ಪೊಲೀಸರಿಗೆ ತಿಳಿಸಿದ್ದರಿಂದ ಸ್ಥಳಕ್ಕೆ ಪೊಲೀಸರು ಆಗಮಿಸಿ ತನಿಖೆ ಕೈಗೊಂಡಿದ್ದಾರೆ.
ಕಳೆದ ಹಲವು ದಿನಗಳಿಂದ ಹಸು ನಾಪತ್ತೆಯಾಗುತ್ತಿರುವುದು ಚಿರತೆಯಿಂದ ಎಂದು ಜನ ತಿಳಿದಿದ್ದರು. ಆದರೆ ಈ ರೀತಿ ದುಷ್ಕೃತ್ಯ ಆಗಿರುವುದು ಗೋ ಗಳ್ಳರಿಂದ ಎಂಬುದು ಗೊತ್ತಾಗಿದೆ. ಹೀಗಾಗಿ ಪೊಲೀಸರು ಕಳ್ಳರನ್ನ ಬಂಧಿಸಿ ಕಠಿಣ ಕ್ರಮ ಕೈಗೊಳ್ಳಬೇಕೆಂಬುದು ಸ್ಥಳೀಯರು ಆಗ್ರಹಿಸಿದ್ದಾರೆ.
ಸ್ಥಳಕ್ಕೆ ಕುಮಟಾ ಶಾಸಕ ದಿನಕರ ಶೆಟ್ಟಿ ಭೇಟಿ ನೀಡಿ ಘಟನೆ ಖಂಡಿಸಿದ್ದಾರೆ. ತಕ್ಷಣ ಆರೋಪಿಗಳನ್ನ ಬಂಧಿಸಬೇಕೆಂದು ಒತ್ತಾಯಿಸಿದ್ದಾರೆ.