ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಜೋಯಿಡಾ (Joida): ಮಹಿಳೆ ಜೊತೆ ಅನುಚಿತವಾಗಿ ವರ್ತಿಸಿ ಹಲ್ಲೆ ಮಾಡಿದ ರೌಡಿಶೀಟರ್ ನನ್ನು ಬಂಧಿಸಿ(Arrest), ಜೈಲಿಗೆ ಕಳಿಸಿದ ಘಟನೆ ರಾಮನಗರದಲ್ಲಿ ನಡೆದಿದೆ.
ಪ್ರವೀಣ ಮನೋಹರ ಸುಧೀರ ಬಂಧಿತನಾಗಿದ್ದಾನೆ. ಈತ ಜೋಯಿಡಾ(Joida) ತಾಲೂಕಿನ ರಾಮನಗರದ(RamNagara) ರಾಮಲಿಂಗ ನಿವಾಸಿ. ಆರೋಪಿತನಾದ ಪ್ರವೀಣ ಈತನು ಶುಭಮ್ ಉತ್ತುರೆ ಎಂಬುವವರಿಗೆ ಸರಾಯಿ ಕುಡಿಸುವಂತೆ ಅವಾಚ್ಯವಾಗಿ ಬೈಯುವುದು ತೊಂದರೆ ನೀಡುತ್ತಿದ್ದ. ಅಲ್ಲದೇ ಮಾರ್ಚ್ 9ರಂದು ರಾತ್ರಿ ಶುಭಮ್ ಮನೆಗೆ ಬಂದು ತಾಯಿ-ಅಕ್ಕನ ಹತ್ತಿರ ‘ನಿನ್ನ ಮಗನ ಮೇಲೆ ನಾನು ತುಂಬಾನೇ ಹಣ ಖರ್ಚು ಮಾಡಿದ್ದೇನೆ ಅಂತಾ ಪಿರ್ಯಾದಿಯ ಕೆನ್ನೆಗೆ ಹೊಡೆದು. ಆಗ ಮದ್ಯ ಬಂದ ಪಿರ್ಯಾದಿಯ ಸಹೋದರಿ ಮೈ ಮುಟ್ಟಿ ಕೈಯಿಂದ ದೂಡಿ ಹಾಕಿ, “ನನ್ನ ಮೇಲೆ ಕೇಸು ಮಾಡಿ ಏನು ಮಾಡುತ್ತೀರಿ. ಈಗಾಗಲೇ ನನ್ನ ಮೇಲೆ ತುಂಬಾ ಕೇಸುಗಳು ನಡಿತಾ ಇದೆ. ನಾನು ಪೊಲೀಸ್ ರೇಕಾರ್ಡನಲ್ಲಿದ್ದು, ಪೊಲೀಸರಿಂದ ನನಗೆ ಏನು ಮಾಡಿಕೊಳ್ಳಲು ಆಗುವುದಿಲ್ಲ ಎಂದಿದ್ದ. ಬಳಿಕ ಬೈಕ್ ನ್ನು ಬಲವಂತದಿಂದ ತೆಗೆದುಕೊಂಡು ಹೋಗಿ, ಅವಾಚ್ಯ ಶಬ್ದದಿಂದ ಬೈದು, ಧಮಕಿ ಹಾಕಿದ ಬಗ್ಗೆ ಎಂದು ದೂರಿನಲ್ಲಿ ತಿಳಿಸಲಾಗಿತ್ತು.
ರಾಮನಗರ ಪೊಲೀಸ್ ಠಾಣೆಯ(Ramanagar police station) ಪಿ.ಎಸ್.ಐ ಹಾಗೂ ಸಿಬ್ಬಂದಿಗಳು ಪ್ರಕರಣದ ವಿಚಾರಣೆಗೆ ಹಾಜರಾಗಲು ತಿಳಿಸಲು ಹೋದ ಸಂದರ್ಭದಲ್ಲಿ ಪೊಲೀಸರೊಂದಿಗೆ ಅನುಚಿತವಾಗಿ ವರ್ತಿಸಿ, ಪೊಲೀಸ್ ಸಿಬ್ಬಂದಿ ರಾಜು ಚಲವಾದಿ ಇವರನ್ನು ಉದ್ದೇಶಿಸಿ ಜಾತಿ ವಿಚಾರದಲ್ಲಿ ಅವಾಚ್ಯವಾಗಿ ಬೈದು, ಸಿಬ್ಬಂದಿಗಳಾದ ರಾಜು ಚಲವಾದಿ ಮತ್ತು ಸದಾಶಿವ ಮಠಪತಿ ಮೇಲೆ ಹಲ್ಲೆ ಮಾಡಿದ ಪ್ರಕರಣ ದಾಖಲಾಗಿತ್ತು.
ಇದನ್ನು ಓದಿ : ಇಂದಿನಿಂದ ರಾಜ್ಯದಲ್ಲಿ ಜನಸಾಮಾನ್ಯರಿಗೆ ದರ ಏರಿಕೆ ಬರೆ.
ಸೆಪ್ಟೆಂಬರ್ ನಲ್ಲಿ ಪ್ರಧಾನಿ ಮೋದಿ ನಿವೃತ್ತಿ ?
ಕಾರ್ಮಿಕನ ಕಾಲಿಗೆ ಕಚ್ಚಿ ಗಾಯಗೊಳಿಸಿದ ಕೋತಿ. ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲು

