ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news)ಮುಂಬೈ(Mumbai): ಪ್ರಯಾಗರಾಜ್ ನಲ್ಲಿ ನಡೆದ ಮಹಾಕುಂಭ ಮೇಳದಲ್ಲಿ ಎಲ್ಲರ ಗಮನ ಸೆಳೆದಿದ್ದ ಮಣಿ ಮಾರುವ ಹುಡುಗಿ ಮೊನಾಲಿಸಾಳಿಗೆ(Monalisa) ಚಿತ್ರದಲ್ಲಿ ನಟಿಸಲು ಆಫರ್ ನೀಡಿದ್ದ ನಿರ್ದೇಶಕ ಸನೋಜ್ ಮಿಶ್ರಾ(Sanoj Mishra) ಅವರನ್ನು ಪೊಲೀಸರು ಬಂಧಿಸಿದ್ದಾರೆ.
ಅತ್ಯಾಚಾರ ಪ್ರಕರಣವೊಂದರಲ್ಲಿ ಪೊಲೀಸರು ಬಂಧಿಸಿದ್ದಾರೆ. 2021ರಲ್ಲಿ ಯುವತಿಯೊರ್ವಳಿಗೆ ಚಿತ್ರದಲ್ಲಿ ನಟಿಸಲು ಅವಕಾಶ ನೀಡುವುದಾಗಿ ನಂಬಿಸಿ ಅತ್ಯಾಚಾರ ಎಸಗಿರುವ ಆರೋಪದಡಿ ಮಿಶ್ರಾರನ್ನು ಆರೆಸ್ಟ್ ಮಾಡಲಾಗಿದೆ.
ಐದು ವರ್ಷಗಳ ಹಿಂದೆ ಝಾನ್ಸಿ ಮೂಲದ ಯುವತಿಯನ್ನು ಟಿಕ್ ಟಾಕ್ (TikTok) ಮತ್ತು ಇನ್ಸ್ಟಾಗ್ರಾಮ್ (Instragram) ಮೂಲಕ ಸನೋಜ್ ಮಿಶ್ರಾ ಪರಿಚಯಿಸಿಕೊಂಡಿದ್ದರು. ಬಳಿಕ ದೂರವಾಣಿ ಮೂಲಕ ಸಂಪರ್ಕದಲ್ಲಿ ಇದ್ದರು. 2021ರ ಜೂನ್ 17ರಂದು ಝಾನ್ಸಿ ರೈಲು ನಿಲ್ದಾಣದಲ್ಲಿ(Jhancy Railway Station) ತಮ್ಮನ್ನು ಭೇಟಿ ಮಾಡುವಂತೆ ಸನೋಜ್ ಹೇಳಿದ್ದರು ಆದರೆ ಆ ಯುವತಿ ನಿರಾಕರಿಸಿದಾಗ, ಒಂದು ವೇಳೆ ಭೇಟಿ ಆಗದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಸನೋಜ್ ಬೆದರಿಕೆ ಹಾಕಿದ್ದರು ಎಂದು ಯುವತಿ ದೂರು ನೀಡಿದ್ದಾರೆನ್ನಲಾಗಿದೆ.
ಆತ್ಮಹತ್ಯೆ ಮಾಡಿಕೊಳ್ಳಬಹುದೆಂಬ ಭಯದಿಂದ ಮಾರನೇ ದಿನ ಸನೋಜ್ ಅವರನ್ನು ಆ ಯುವತಿ ಭೇಟಿ ಮಾಡಿದ್ದರು. ಆಕೆಯನ್ನು ರೆಸಾರ್ಟ್ಗೆ ಕರೆದುಕೊಂಡು ಹೋಗಿ ಮತ್ತು ಬರಿಸುವ ಔಷಧಿ ನೀಡಿ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ. ಆಕೆಯ ಖಾಸಗಿ ವಿಡಿಯೋ ರೆಕಾರ್ಡ್ ಮಾಡಿಕೊಂಡು ಸನೋಜ್ ಮಿಶ್ರಾ ಬ್ಲ್ಯಾಕ್ ಮೇಲ್ ಮಾಡಿದ್ದಾರೆ ಎನ್ನಲಾಗಿದೆ.
ನಂತರ ಹಲವು ಬಾರಿ ಆಕೆಯ ಮೇಲೆ ಸನೋಜ್ ಮಿಶ್ರಾ ದೌರ್ಜನ್ಯ ನಡೆಸಿದ್ದಾರೆ. ಮದುವೆ ಆಗೋದಾಗಿ ಮತ್ತು ಸಿನಿಮಾದಲ್ಲಿ ಅವಕಾಶ ಕೊಡಿಸುವುದಾಗಿ ಆಮಿಷವೊಡ್ಡಿ ಈ ರೀತಿ ಮಾಡಲಾಗಿದೆ ಎಂದು ಯುವತಿ ದೂರು ನೀಡಿದ್ದಾರೆ. ನಿರ್ದೇಶಕನ ಗಂಭೀರ ಆರೋಪದ ಕಾರಣಕ್ಕೆ ಬಂಧಿಸಲಾಗಿದೆ.
ನಿರ್ದೇಶಕನನ್ನನಂಬಿದಮೊನಾಲಿಸಾ : ಇಂದೋರ್ ಮೂಲದ ಮಣಿ ಮಾರುವ ಹುಡುಗಿ ಮೊನಾಲಿಸಾ(Monalis), ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ಸುದ್ದಿಯಾದಾಗ ನಿರ್ದೇಶಕ ಸನೋಜ್ ಮಿಶ್ರಾ ಮೊನಾಲಿಸಾ ಕುಟಂಬವನ್ನು ಭೇಟಿ ಮಾಡಿ ಸಿನಿಮಾದಲ್ಲಿ ನಟಿಸುವಂತೆ ಆಫರ್ ನೀಡಿದ್ದರು. ಎನ್ನಲಾಗಿದೆ. ಮುಂಬರುವ ‘ದಿ ಡೈರಿ ಆಫ್ ಮಣಿಪುರ್’ (The Dairy Of Manipur) ಚಿತ್ರದಲ್ಲಿ ನಟಿಸಲು ಮೊನಾಲಿಸಾ ಸಹಿ ಹಾಕಿದ್ದರು.
ಇದಕ್ಕೆ ಸಂಬಂಧಿಸಿದ ವಿಡಿಯೋವೊಂದರಲ್ಲಿ ‘ಮೊನಾಲಿಸಾ ಕುಟುಂಬವನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದೇನೆ. ನಮ್ಮ ಸಿನಿಮಾದಲ್ಲಿ ನಟಿಸಲು ಆಕೆ ಹಾಗೂ ಕುಟುಂಬ ಒಪ್ಪಿಕೊಂಡಿದೆ. ಮೊನಾಲಿಸಾ ಅವರ ಕುಟುಂಬದವರು ನಿಜಕ್ಕೂ ಮುಗ್ಧರು ಮತ್ತು ವಿನಮ್ರ ನಡವಳಿಕೆಯವರು’ ಎಂದು ಹೇಳಿದ್ದರು ನಿರ್ದೇಶಕ ಸನೋಜ್ ಮಿಶ್ರಾ.
ಸನೋಜ್ ಈ ಹಿಂದೆ ನಿರ್ದೇಶಿಸಿದ್ದ ‘ದಿ ಡೈರಿ ಆಫ್ ಬೆಂಗಾಲ್'(The Dairy Of Bengal) ಚಿತ್ರ ಪ್ರೇಕ್ಷಕರ ಮನ ಗೆದ್ದಿತ್ತು. ಅಚ್ಚರಿಯ ಸಂಗತಿ ಏನೆಂದರೆ, ಸನೋಜ್ ಮಿಶ್ರಾ (Sanoj Mishra) ಮೇಲೆ ಈಗ ಅತ್ಯಾಚಾರದ ಆರೋಪ ಎದುರಾಗಿದ್ದು ಯುವತಿಯೊಬ್ಬಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ದೆಹಲಿಯಲ್ಲಿ ಬಂಧಿಸಲಾಗಿದೆ. ಸನೋಜ್ ಮಿಶ್ರಾ ಮೇಲೆ ಈ ಮೊದಲೇ ಅನೇಕರು ಸಂಶಯ ವ್ಯಕ್ತಪಡಿಸಿದ್ದರು. ಗಂಭೀರ ಆರೋಪದಲ್ಲಿ ಅರೆಸ್ಟ್ ಆಗಿದ್ದರಿಂದ ಮೊನಾಲಿಸಾ ಭವಿಷ್ಯ ಹಾಳಾಗುತ್ತಿದೆ ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ.
ಇದನ್ನು ಓದಿ : ರೌಡಿಶೀಟರ್ ನ ಬಂಧಿಸಿ, ಜೈಲಿಗಟ್ಟಿದ ಪೊಲೀಸರು.