ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news)ನವದೆಹಲಿ (Newdelhi) :  ಇರಾನಿನ (Iran) ಮೀನುಗಾರಿಕಾ ಹಡಗಿನಲ್ಲಿದ್ದ ಪಾಕಿಸ್ತಾನಿ ಸಿಬ್ಬಂದಿಯೋರ್ವನ ನೆರವಿಗೆ ಭಾರತೀಯ ನೌಕಾಪಡೆ ಧಾವಿಸಿದ ಘಟನೆ ಓಮನ್ ಕರಾವಳಿಯಲ್ಲಿ ನಡೆದಿದೆ.

ಹಡಗಿನ ಎಂಜಿನ್ ಕೆಲಸ ಮಾಡುವಾಗ ಸಿಬ್ಬಂದಿ ಕೈ ಬೆರಳುಗಳಿಗೆ ತೀವ್ರ ಗಾಯಗಳಾಗಿ ರಕ್ತಸ್ರಾವವಾಗಿತ್ತು. ಈ ಸಂದರ್ಭದಲ್ಲಿ ಇರಾನಿನ ಧೋ ಅಲ್ ಒಮೀದಿಯಿಂದ  ತುರ್ತು ಕರೆ ರವನಿಸಲಾಗಿತ್ತು. ಇದಕ್ಕೆ ಭಾರತೀಯ ನೌಕಾಪಡೆ(Indian Navy) ಸ್ಪಂದಿಸಿದೆ. ಬಳಿಕ ಓಮನ್ ಕರಾವಳಿಯಲ್ಲಿ(Oman Coastal) ಕಾರ್ಯನಿರ್ವಹಿಸುತ್ತಿದ್ದ ನೌಕಾಪಡೆಯ ರಹಸ್ಯ ಯುದ್ಧನೌಕೆ ಐಎನ್ಎಸ್ ತ್ರಿಕಾಂಡ್ (INS Trikand), ತಕ್ಷಣವೇ ಘಟನಾ ಸ್ಥಳಕ್ಕೆ ತಲುಪಿತು.  ಗಾಯಗೊಂಡ ಸಿಬ್ಬಂದಿಗೆ ವೈದ್ಯಕೀಯ ಸಹಾಯ ಮಾಡಿದೆ ಎಂದು ತಿಳಿದುಬಂದಿದೆ.

ಐಎನ್ಎಸ್ ತ್ರಿಕಂಡ್ ನೌಕೆಯ ವೈದ್ಯಕೀಯ ಸಿಬ್ಬಂದಿಗಳು ಅರಿವಳಿಕೆ ನೀಡಿ ಮೂರು ತಾಸುಗಳ ಕಾಲ ಬೆರಳುಗಳಿಗೆ ಹೊಲಿಗೆ ಹಾಕುವ ಮೂಲಕ ಶಸ್ತ್ರಚಿಕಿತ್ಸೆ ಮಾಡಿದರು. ಇರಾನ್ ತಲುಪುವವರೆಗೆ ಗಾಯಗೊಂಡ ಸಿಬ್ಬಂದಿಗೆ ಅಗತ್ಯ ಔಷಧವನ್ನು ನೀಡಲಾಯಿತು ಎಂದು ನೌಕಾಪಡೆ ತಿಳಿಸಿದೆ.

ಮೀನುಗಾರಿಕಾ ಬೋಟ್ನಲ್ಲಿ 11 ಪಾಕಿಸ್ತಾನಿಗಳು (ಒಂಬತ್ತು ಬಲೂಚ್ ಮತ್ತು ಇಬ್ಬರು ಸಿಂಧಿ) ಮತ್ತು ಐದು ಇರಾನಿನ ಸಿಬ್ಬಂದಿ ಇದ್ದರು. ಗಾಯಗೊಂಡ ಪಾಕಿಸ್ತಾನಿ (ಬಲೂಚ್) ಪ್ರಜೆಯ ಕೈಗೆ ತೀವ್ರ ಗಾಯಗಳಾಗಿತ್ತು. ಇದರ ಪರಿಣಾಮವಾಗಿ ಭಾರೀ ರಕ್ತಸ್ರಾವವಾಗಿತ್ತು ಎಂದು ನೌಕಾಪಡೆ ತಿಳಿಸಿದೆ.

ತಮ್ಮ ಸಿಬ್ಬಂದಿಯ ಜೀವವನ್ನು ಉಳಿಸುವಲ್ಲಿ ನೆರವು ನೀಡಿದ್ದಕ್ಕೆ ಭಾರತೀಯ ನೌಕಾಪಡೆಗೆ ಹಡಗಿನ ಸಿಬ್ಬಂದಿಗಳು ಕೃತಜ್ಞತೆ ಸಲ್ಲಿಸಿದ್ದಾರೆ.


ಇದನ್ನು ಓದಿ : ವೈಭವಯುತವಾಗಿ ಜರುಗಿದ ಭಟ್ಕಳ ಜಾತ್ರೆ. ಸಹಸ್ರಾರು ಸಂಖ್ಯೆಯ ಭಕ್ತರಿಂದ ಹರ್ಷೋದ್ಘಾರ.