ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news)ಹೈದ್ರಾಬಾದ್ (Hydrabad): ಶಿಕ್ಷಣಕ್ಕೆ ತಕ್ಕಂತೆ ಉದ್ಯೋಗ ಸಿಗಬೇಕು. ವಯಸ್ಸಿಗೆ ತಕ್ಕಂತೆ ಮದುವೆಯಾಗಬೇಕು ಎಂದು ಎಲ್ಲರೂ ಅಂದುಕೊಳ್ತಾರೆ. ಆದರೆ ಇಲ್ಲೋರ್ವ ವ್ಯಕ್ತಿಗೆ ಉದ್ಯೋಗ ಸಿಕ್ಕಿದರೂ ತುಂಬಾ ಕಷ್ಟಕರವಾಗಿ ಡ್ಯೂಟಿ ಮಾಡಬೇಕಾಗಿದೆ. ಈತನಿಗೆ ಎತ್ತರವೇ ಮುಳುವಾಗಿ ಪರಿಣಮಿಸಿದೆ. ಏಳು ಅಡಿ ಎತ್ತರವಿರುವ ವೃತ್ತಿಯಲ್ಲಿ ಬಸ್ ಕಂಡಕ್ಟರ್(Bus conductor) ಆಗಿರುವ ಯುವಕನ ಕಥೆ ಇದು.
ಬಸ್ ನ ಒಳಬದಿಯ ಎತ್ತರ ಆರು ಅಡಿ ಇದೆ. ಹೀಗಾಗಿ ಏಳು ಅಡಿಯಿರುವ ಈತ ಕರ್ತವ್ಯದಲ್ಲಿರುವಾಗಲೆಲ್ಲ ಕುತ್ತಿಗೆಯನ್ನು ಅರ್ಧ ಬಗ್ಗಿಸಿಕೊಂಡೇ ಕೆಲಸ ಮಾಡುತ್ತಾರೆ. ಇವರ ಹೆಸರು ಅಮೀನ್ ಅಹ್ಮದ್ ಅನ್ಸಾರಿ. ಇವರು ಚಂದ್ರಾಯನಗುಟ್ಟದ ಶಾಹಿನಗರದ ನಿವಾಸಿ. ಇವರ ತಂದೆ ಹೈದರಾಬಾದ್ನ(Hydrabad) ಕಾಚಿಗುಡ ಡಿಪೋದಲ್ಲಿ ಹೆಡ್ ಕಾನ್ ಸ್ಟೆಬಲ್ ಆಗಿ ಕೆಲಸ ಮಾಡುತ್ತಿದ್ದರು. 2021ರಲ್ಲಿ ಅನಾರೋಗ್ಯದ ಕಾರಣದಿಂದ ಅವರು ನಿಧನರಾದರು. ಅನುಕಂಪದ ನೇಮಕಾತಿಯಡಿಯಲ್ಲಿ ಇಂಟರ್ (ಪಿಯುಸಿ) ಪೂರ್ಣಗೊಳಿಸಿದ ಅನ್ಸಾರಿ ಅವರಿಗೆ ಮೆಹದಿಪಟ್ನಂ ಆರ್ ಟಿಸಿ(RTC) ಡಿಪೋದಲ್ಲಿ ಕಂಡಕ್ಟರ್ ಕೆಲಸ ಸಿಕ್ಕಿತು. ಅನ್ಸಾರಿ ಅವರಿಗೆ ಕೆಲಸ ಸಿಕ್ಕಿದ ಖುಷಿ ಒಂದೆಡೆಯಾದರೆ, 7 ಅಡಿ ಎತ್ತರದಿಂದಾಗಿ ಕರ್ತವ್ಯ ನಿರ್ವಹಿಸುವುದು ಒಂದು ಸವಾಲಾಗಿದೆ.
ದಯವಿಟ್ಟು ನನಗೆ ಬೇರೆ ಕೆಲಸ ಕೊಡಿ, ನಾನು ದಿನಕ್ಕೆ ಸರಾಸರಿ 5 ಟ್ರಿಪ್ಗಳಂತೆ 10 ಗಂಟೆಗಳ ಕಾಲ ಬಸ್ಗಳಲ್ಲಿ ಪ್ರಯಾಣಿಸಬೇಕು. ನಾನು ಬಸ್ ಕ್ಕಿಂತ ಎತ್ತರವಾಗಿರುವುದರಿಂದ ಮತ್ತು ಗಂಟೆಗಟ್ಟಲೆ ತಲೆ ಬಾಗಿಸಿ ಪ್ರಯಾಣಿಸುವುದರಿಂದ ಕುತ್ತಿಗೆ ಮತ್ತು ಬೆನ್ನು ನೋವು, ನಿದ್ರಾಹೀನತೆಯಿಂದ ಆಸ್ಪತ್ರೆಗಳಿಗೆ ಓಡಾಡಬೇಕಾಗಿದೆ ಎಂದು ಅನ್ಸಾರಿ ತಾವು ಅನುಭವಿಸುತ್ತಿರುವ ಸಮಸ್ಯೆ ಬಗ್ಗೆ ಹೇಳಿದ್ದಾರೆ.
ಉನ್ನತ ಅಧಿಕಾರಿಗಳು ಸ್ಪಂದಿಸಿ ಅವರಿಗೆ ಆರ್ಟಿಸಿಯಲ್ಲಿ ಬೇರೆ ಕೆಲಸ ನೀಡುವಂತೆ ಪ್ರಯಾಣಿಕರು ಮನವಿ ಮಾಡುತ್ತಿದ್ದಾರೆ.
ಇದನ್ನು ಓದಿ: ಪಾಕ್ ಸಿಬ್ಬಂದಿಯನ್ನ ರಕ್ಷಿಸಿದ ಭಾರತದ ನೌಕಾಪಡೆ.
ವೈಭವಯುತವಾಗಿ ಜರುಗಿದ ಭಟ್ಕಳ ಜಾತ್ರೆ. ಸಹಸ್ರಾರು ಸಂಖ್ಯೆಯ ಭಕ್ತರಿಂದ ಹರ್ಷೋದ್ಘಾರ