ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಬೆಂಗಳೂರು (Bangaluru):  ಸುರಕ್ಷತೆ ಮತ್ತು ವಿದ್ಯುದ್ದೀಕರಣ ಕಾಮಗಾರಿ ಹಿನ್ನೆಲೆಯಲ್ಲಿ  ಜೂನ್ 1 ರಿಂದ ನವೆಂಬರ್ 1 ರವರೆಗೆ  ಪ್ರಮುಖ ರೈಲುಗಳ ಸಂಚಾರವನ್ನು ರದ್ದು(Train Cancel) ಮಾಡಿ ರೈಲ್ವೆ ಇಲಾಖೆ  ಆದೇಶಿಸಿದೆ.

ಸಕಲೇಶಪುರ-ಸುಬ್ರಹ್ಮಣ್ಯ (Sakaleshapura-Subrhamanya) ಮಾರ್ಗದಲ್ಲಿ ಮೇ 31 ರಿಂದ ನವೆಂಬರ್ 1 ರವರೆಗೆ ಪ್ರತಿ ಶನಿವಾರ ಸಂಚರಿಸುವ ಯಶವಂತಪುರ-ಮಂಗಳೂರು(Yashavantapura-Mangaluru) ಎಕ್ಸಪ್ರೆಸ್ ಸಂಚಾರವನ್ನು (ರೈಲು ಸಂಖ್ಯೆ 16539) ರದ್ದು ಮಾಡಲಾಗಿದೆ. ಜೂನ್ 1 ರಿಂದ ನವೆಂಬರ್ 2 ರವರೆಗೆ ಪ್ರತಿ ಭಾನುವಾರ ಮಂಗಳೂರು-ಯಶವಂತಪುರ ಸಾಪ್ತಾಹಿಕ ಎಕ್ಸ್ ಪ್ರೆಸ್ (ರೈಲು ಸಂಖ್ಯೆ 16540), ಜೂನ್ 1 ರಿಂದ ಅಕ್ಟೋಬರ್ 30 ರವರೆಗೆ ಮಂಗಳವಾರ, ಗುರುವಾರ ಮತ್ತು ಭಾನುವಾರ ಸಂಚರಿಸುವ ಯಶವಂತಪುರ-ಮಂಗಳೂರು ಜಂಕ್ಷನ್ ಟ್ರೈ-ವೀಕ್ಲಿ ಎಕ್ಸೆಸ್ (ರೈಲು ಸಂಖ್ಯೆ 16575) ಮತ್ತು ಜೂನ್ 2 ರಿಂದ ಅಕ್ಟೋಬರ್ 31 ರವರೆಗೆ ಸೋಮವಾರ, ಬುಧವಾರ ಮತ್ತು ಶುಕ್ರವಾರ ಸಂಚರಿಸುವ ಮಂಗಳೂರು – ಯಶವಂತಪುರ ಟ್ರೈ-ವೀಕ್ಲಿ ಎಕ್ಸ್ಪ್ರೆಸ್ ಕೂಡ ತುರ್ತು ಕಾಮಗಾರಿಗಾಗಿ (ರೈಲು ಸಂಖ್ಯೆ 16576) ರದ್ದು ಮಾಡಲಾಗಿದೆ.

ಜೂನ್ 2 ರಿಂದ ಅಕ್ಟೋಬರ್ 31 ರವರೆಗೆ ಸೋಮವಾರ, ಬುಧವಾರ ಮತ್ತು ಶುಕ್ರವಾರ ಸಂಚರಿಸುವ ಯಶವಂತಪುರ-ಕಾರವಾರ(Yashwantapura-Karwar) ಟ್ರೈ-ವೀಕ್ಲಿ ಎಕ್ಸ್ ಪ್ರೆಸ್  (ರೈಲು ಸಂಖ್ಯೆ 16515) ರೈಲು ಮತ್ತು ಜೂನ್ 3 ರಿಂದ ನವೆಂಬರ್ 1, ರವರೆಗೆ ಮಂಗಳವಾರ, ಗುರುವಾರ ಮತ್ತು ಶನಿವಾರ ಸಂಚರಿಸುವ ಕಾರವಾರ-ಯಶವಂತಪುರ (Karwar-yashwantapur) ಟ್ರೈ-ವೀಕ್ಲಿ ಎಕ್ಸ್ಪ್ರೆಸ್ (ರೈಲು ಸಂಖ್ಯೆ 16516) ರೈಲುಗಳ ಸಂಚಾರವನ್ನು ರದ್ದು ಮಾಡಲಾಗಿದೆ ಎಂದು ತಿಳಿಸಲಾಗಿದೆ.

ಇದನ್ನು ಓದಿ : ಮದುವೆ ಮಂಟಪದಲ್ಲಿ ಸಂಭವಿಸಿತು ದುರಂತ. ವಧುವಿಗೆ ಬರ ಸಿಡಿಲು.

ಪಾಕಿಸ್ತಾನಕ್ಕೆ ಬಿತ್ತು ಹೊನ್ನಾವರದ ಬರೋಬ್ಬರಿ ಹೊಡೆತ. ಕಾರಣ ಏನು?

ಅಪ್ರಾಪ್ತ ಬಾಲಕನಿಂದ ಗರ್ಭಿಣಿಯಾದ ಶಿಕ್ಷಕಿ. ಗರ್ಭಪಾತಕ್ಕೆ ಕೋರ್ಟ್ ಅನುಮತಿ.