ಕೋಝೀಕೊಡ್(KOZHIKODE) : ಕರ್ನಾಟಕ ರಾಜ್ಯದ ಅಂಕೋಲಾ(ANKOLA) ಶಿರೂರಿನಲ್ಲಿ ಸಂಭವಿಸಿದ ದುರಂತದಲ್ಲಿ ಸಾವನ್ನಪ್ಪಿದ ಕೊಝೀಕೊಡ್ ನ ಅರ್ಜುನ್(ARJUN) ಮೃತದೇಹ ತವರೂರಿನಲ್ಲಿ ಅಂತ್ಯ ಸಂಸ್ಕಾರ ಮಾಡಲಾಗಿದೆ.
ಈ ಸಂದರ್ಭದಲ್ಲಿ ಕರ್ನಾಟಕ ಸರ್ಕಾರದ(KARNATAKA GOVERNMENT) ಪರವಾಗಿ ಕಾರವಾರ ಶಾಸಕ ಸತೀಶ್ ಸೈಲ್ (SATISH SAIL) ಆಗಮಿಸಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಹಾಗೆ ಸರ್ಕಾರದ ಐದು ಲಕ್ಷ ರೂ. ಚೆಕ್ ನೀಡಿದರು. ಅಲ್ಲದೇ ಕುಟುಂಬದ ಪರಿಸ್ಥಿತಿ ನೋಡಿ ವಯಕ್ತಿಕವಾಗಿ ಅವರು ಒಂದು ಲಕ್ಷ ರೂ. ನೀಡಿದರು.
ಇದೇ ವೇಳೆ ಅರ್ಜುನ್ ಅವರನ್ನ ನೆನೆದು ಬಾವುಕರಾಗಿ ಅವರ ಪುಟ್ಟ ಮಗ ಅಯಾನ್ ನ್ನ ಶಾಸಕ ಸತೀಶ್ ಸೈಲ್ ಸಂತೈಸಿದರು. ಕಳೆದ ಎರಡು ತಿಂಗಳಿಂದ ಸತೀಶ್ ಸೈಲ್ ಶಿರೂರಿನಲ್ಲಿದ್ದು ಅರ್ಜುನ್ ಅವರ ಹುಡುಕಾಟಕ್ಕೆ ಬೇಕಾದ ಸಹಕಾರವನ್ನು ನೀಡುತ್ತಾ ಬಂದಿದ್ದಾರೆ. ಡ್ರೆಜಿಂಗ್ ಯಂತ್ರಗಳ ಮೂಲಕ ಹುಡುಕಾಟ ನಡೆಸಿದಾಗ ಅರ್ಜುನ್ ಇರುವ ಟ್ರಕ್ ನೊಂದಿಗೆ ಅರ್ಜುನ್ ಮೃತದೇಹ ಪತ್ತೆಯಾಗಿತ್ತು.
ಇನ್ನೂ ಜಗನ್ನಾಥ ಮತ್ತು ಲೋಕೇಶ್ ಅವರ ಕುಟುಂಬದವರ ವಿನಂತಿ ಮೇರೆಗೆ ಮೃತದೇಹಗಳಿಗಾಗಿ ಶೋಧ ಮುಂದುವರಿಸುವಂತೆ ಸೈಲ್ ಕಂಪನಿಗೆ ಸೂಚಿಸಿದ್ದಾರೆ.
ಇದನ್ನು ಓದಿ : ಬಾಣಲೆಗೆ ಬಿದ್ದು ಮೀನುಗಾರ ಸಾವು