ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news)ಪಂಜಾಬ್(Panjab) : ಇಲ್ಲಿನ ಕಾಲೇಜು ಒಂದರಲ್ಲಿ  ನಿಗೂಢವಾಗಿ ಮೃತಪಟ್ಟ ಧರ್ಮಸ್ಥಳ ಮೂಲದ ಏರೋಸ್ಪೆಸ್ ಎಂಜಿನಿಯ‌ರ್ (Airospace Engineer) ಪ್ರಕರಣದ ಸಂಗತಿ ಬಯಲಿಗೆ ಬಂದಿದೆ.

ಧರ್ಮಸ್ಥಳದ(Dharmasthala) ಬೊಳಿಯೂರು ನಿವಾಸಿ  ಆಕಾಂಕ್ಷಾ ನಾಯರ್ ಪ್ರೇಮ ವೈಫಲ್ಯದಿಂದ ಆತ್ಮಹತ್ಯೆ ಮಾಡಿಕೊಂಡಿರುವ ವಿಚಾರ ಇದೀಗ ಬೆಳಕಿಗೆ ಬಂದಿದೆ.  ಆಕಾಂಕ್ಷ ಎಸ್ ನಾಯರ್ ಆರು ತಿಂಗಳ ಹಿಂದೆ ದೆಹಲಿಯ(Delhi) ಸ್ಟೈಸ್ ಜೆಟ್ ಏರೋಸ್ಪೇಸ್‌ನಲ್ಲಿ (Space Jet Airospace) ಕೆಲಸ ನಿರ್ವಹಿಸುತ್ತಿದ್ದರು. ಹೆಚ್ಚಿನ ತರಬೇತಿಗೆ ಜರ್ಮನಿಗೆ(Germany) ತೆರಳಲು ತಯಾರಿ ನಡೆಸಿದ್ದಳು. ಕೆಲವು ಶೈಕ್ಷಣಿಕ ದಾಖಲೆಗಳನ್ನು ಶುಕ್ರವಾರ ಪಂಜಾಬ್‌ನ(Panjab) ಲವಿ ಪ್ರೊಫೆಷನಲ್ ಯೂನಿವರ್ಸಿಟಿಗೆ ಕಳಿಸಿದ್ದರು. ಅದಾದ ನಂತರ ಕಾಲೇಜಿನ ನಾಲ್ಕನೇ ಮಹಡಿಯಿಂದ ಬಿದ್ದು ಮೃತಪಟ್ಟಿದ್ದರು.   ಕಾಲೇಜಿನವರೇ ನನ್ನ ಮಗಳಿಗೆ ಏನೋ ಮಾಡಿದ್ದಾರೆ. ಆಕೆ ಆತ್ಮಹತ್ಯೆ ಮಾಡಿಕೊಳ್ಳುವ ಹುಡುಗಿಯಲ್ಲ ಎಂದು ಪೋಷಕರು ಆರೋಪಿಸಿದ್ದರು. ಆದರೆ ಸತ್ಯ ಸಂಗತಿ ಗೊತ್ತಾಗಿದೆ.

ಆಕಾಂಕ್ಷ ಪ್ರೀತಿಯಲ್ಲಿ ಬಿದ್ದು(Love) ಸಾವು ತಂದುಕೊಂಡಿದ್ದಾಳೆ ಎಂಬುದು ಗೊತ್ತಾಗಿದೆ. ಆಕಾಂಕ್ಷಗೆ ತಾನು ಓದುತ್ತಿದ್ದ ಯೂನಿವರ್ಸಿಟಿಯ ಪ್ರೊಫೆಸರ್ ಜೊತೆ ಪ್ರೇಮಾಂಕುರವಾಗಿತ್ತು. ಕೇರಳದ ಕೊಟ್ಟಾಯಂ ನಿವಾಸಿ ಬಿಜಿಲ್ ಮ್ಯಾಥ್ಯ ಜೊತೆ ಆಕಾಂಕ್ಷ ರಿಲೇಷನ್‌ಶಿಪ್‌ನಲ್ಲಿದ್ದರು. ಅಲ್ಲದೇ ಮ್ಯಾಥ್ಯ ಜೊತೆ ಆತನ ಮನೆಗೆ ಹೋಗಿ ಮದುವೆಯಾಗುವಂತೆ ಒತ್ತಾಯಿಸಿ ಆಕಾಂಕ್ಷ ಜಗಳ ಮಾಡಿದ್ದಳು. ಮ್ಯಾಥ್ಯ ಹೆಂಡತಿ, ಮಕ್ಕಳ ಎದುರು ಆಕಾಂಕ್ಷ ತನ್ನನ್ನು ಮದುವೆಯಾಗುವಂತೆ ಕೇಳಿದ್ದಳಂತೆ. ಈ ಜಗಳದ ನಂತರ ಮ್ಯಾಥ್ ಕಾಲೇಜಿಗೆ ಬಂದಿದ್ದರು. ಬಳಿಕ ಕಾಲೇಜಿನಲ್ಲೂ ಜಗಳ ಮಾಡಿ ಕಟ್ಟಡದ ನಾಲ್ಕನೇ ಮಹಡಿಗೆ ಹೋಗಿ ಕೆಳಗೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎನ್ನಲಾಗಿದೆ.

ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದ ಮೇಲೆ ಮ್ಯಾಥ್ಯ ವಿರುದ್ದ ಪಂಜಾಬ್‌ನ ಜಲಂಧ‌ರ್ ಪೊಲೀಸ್‌ ಠಾಣೆಯಲ್ಲಿ(Jalandhar Police Station) ಪ್ರಕರಣ ದಾಖಲಿಸಲಾಗಿದೆ.

ಇದನ್ನು ಓದಿ : ಕುಮಟಾ ಮೂಲದ ನಿವೃತ್ತ ನ್ಯಾಯಮೂರ್ತಿ ಎಸ್. ಆರ್. ನಾಯಕ ನಿಧನ.

ಪ್ರಯಾಣಿಕರ ಗಮನಕ್ಕೆ. ಯಶ್ವಂತಪುರ-ಮಂಗಳೂರು-ಕಾರವಾರ ರೈಲು ಸಂಚಾರ ರದ್ದು.

ಮದುವೆ ಮಂಟಪದಲ್ಲಿ ಸಂಭವಿಸಿತು ದುರಂತ. ವಧುವಿಗೆ ಬರ ಸಿಡಿಲು.