ಜೋಯಿಡಾ (Joida) :  ತಾಲೂಕಿನ ಗಣೇಶಗುಡಿಯ(Ganeshagudi) ಹತ್ತಿರ ಖಾಸಗಿ ಬಸ್ ಪಲ್ಟಿಯಾಗಿ ಪ್ರವಾಸಕ್ಕೆ ಬಂದಿದ್ದ 40 ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಗಾಯಗೊಂಡ ಘಟನೆ  ಇಂದು ನಡೆದಿದೆ.

ಚಿತ್ರದುರ್ಗ(Chitradurga) ಜಿಲ್ಲೆಯ ಹೊಸಗುರ್ಗಾದ(Hosagurga) ಸೇಂಟ್ ಅಂತೋನಿ ಪ್ರೌಢಶಾಲೆಯ(St Antony Highschool) ವಿದ್ಯಾರ್ಥಿಗಳು ಮೂರು ಖಾಸಗಿ ಬಸ್ಸಿನಲ್ಲಿ ದಾಂಡೇಲಿ – ಜೋಯಿಡಾಕ್ಕೆ(Dandeli-joida) ಪ್ರವಾಸಕ್ಕೆ ಬಂದಿದ್ದರು. ಮೌಳಂಗಿ ಹತ್ತಿರದ ಹೋಂ ಸ್ಟೇಯೊಂದರಲ್ಲಿ ತಂಗಿದ್ದ  ತಂಡ ಇಂದು ಬೆಳಿಗ್ಗೆ ಗಣೇಶಗುಡಿಗೆ (Ganeshagudi) ತೆರಳಿ ಅಲ್ಲಿ ಜಲ ಸಾಹಸ ಚಟುವಟಿಕೆಗಳನ್ನು ತೊಡಗಿ ವಾಪಸ್ ಬರುತ್ತಿದ್ದಾಗ ಗಣೇಶಗುಡಿ ಹತ್ತಿರ  ಚಾಲಕನ ನಿಯಂತ್ರಣ ತಪ್ಪಿ ಬಸ್ ಪಲ್ಟಿಯಾಗಿದೆ.

ಬಸ್ಸಲ್ಲಿ ಸುಮಾರು 50 ವಿದ್ಯಾರ್ಥಿಗಳಿದ್ದರು, 40 ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಗಾಯವಾಗಿದೆ. ತಕ್ಷಣವೇ ಸ್ಥಳೀಯ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಅರುಣ್ ಭಗವತಿರಾಜ ಸೇರಿದಂತೆ ಗ್ರಾ.ಪಂ ಸದಸ್ಯರು ಮತ್ತು ಸ್ಥಳೀಯರು ಸೇರಿ, ಬಸ್ಸಿನಲ್ಲಿ ಸಿಲುಕಿಕೊಂಡಿದ್ದ ವಿದ್ಯಾರ್ಥಿಗಳನ್ನು ಹೊರತೆಗೆದಿದ್ದಾರೆ. ತಕ್ಷಣವೇ ಗಾಯಗೊಂಡವರನ್ನು ಎರಡು ಆಂಬುಲೆನ್ಸ್ ಹಾಗೂ ಇನ್ನಿತರ ಖಾಸಗಿ ವಾಹನಗಳಲ್ಲಿ ದಾಂಡೇಲಿಯ ಸರ್ಕಾರಿ ಆಸ್ಪತ್ರೆಗೆ(Dandeli Government Hospital) ದಾಖಲಿಸಲಾಗಿದೆ.

ಇದನ್ನು ಓದಿ : ಅರಬ್ಬೀ ಸಮುದ್ರದಲ್ಲಿ ಆಯಾ ತಪ್ಪಿ ಬಿದ್ದ ಮೀನುಗಾರ.  ಮೃತದೇಹಕ್ಕಾಗಿ ಮೀನುಗಾರರ ಕಾರ್ಯಾಚರಣೆ

ಪೊಲೀಸರಿಂದ ತಪ್ಪಿಸಿಕೊಳ್ಳಲು ಆಂಬುಲೆನ್ಸ್ ಕದ್ದು ಎಸ್ಕೇಪ್ ಆಗಲು ವಿಫಲ ಪ್ರಯತ್ನ.

ಸಹಕಾರಿ ಧುರೀಣ ಜಾರ್ಜ್ ಫರ್ನಾಂಡಿಸ್ ಅವರಿಗೆ ಕೊಂಕಣಿ ಕುರೋವ್ ಗೌರವ ಪ್ರಶಸ್ತಿ.

ಉದ್ಯಮಿ ಆರ್ ಎನ್ ನಾಯಕ ಹತ್ಯೆ ಆರೋಪಿ ಬನ್ನಂಜೆ ಸಹಚರ  ಸಾವು.