ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news)ಬೆಂಗಳೂರು(Bangaluru) : ಅರಬ್ಬೀ ಸಮುದ್ರದಲ್ಲಿ ಇನ್ನೆರಡು ದಿನಗಳಲ್ಲಿ ವಾಯುಭಾರ ಕುಸಿತ ಆಗುವ ಸಾಧ್ಯತೆ ಇರುವುದರಿಂದ ಕರಾವಳಿ(Coastal) ಸೇರಿ ರಾಜ್ಯದ ಹಲವು ಜಿಲ್ಲೆಗಳಲ್ಲಿ ಮುಂದಿನ ಮೂರು ದಿನಗಳ ಕಾಲ  ಮಳೆಯ ಮುನ್ಸೂಚನೆ ನೀಡಲಾಗಿದೆ.

ಬೆಂಗಳೂರಿನಲ್ಲೂ ಸಹ ಮಳೆಯ ಎಚ್ಚರಿಕೆ ನೀಡಲಾಗಿದೆ.  ಅರಬ್ಬೀ ಸಮುದ್ರದಲ್ಲಿ (Ocean Sea) ವಾಯುಭಾರ ಕುಸಿತ ಆಗುತ್ತಿರುವುದರಿಂದ  ದಕ್ಷಿಣ ಕನ್ನಡ(Southcanar), ಉಡುಪಿ(Udupi) ಹಾಗೂ ಉತ್ತರ ಕನ್ನಡಕ್ಕೆ(North canara) ಮೇ 20 ರಂದು ರೆಡ್ ಅಲರ್ಟ್(Red Alert) ಘೋಷಿಸಲಾಗಿದೆ. ಹೀಗಾಗಿ ಬಾರೀ ಮಳೆ ಸುರಿಯುವ ಸಾಧ್ಯತೆ ಇದೆ.  ಮೇ 21 ಹಾಗೂ 22 ರಂದು ಕೂಡಾ ಆರೆಂಜ್ ಅಲರ್ಟ್(Orange Alert) ಘೋಷಣೆ ಆಗಿದೆ.

ಒಟ್ಟಾರೆ ಬೆಂಗಳೂರು(Bangaluru) ಹಾಗೂ ಕರಾವಳಿ(Karavali) ಜಿಲ್ಲೆ ಹೊರತುಪಡಿಸಿಯೂ ರಾಜ್ಯದ 17 ಜಿಲ್ಲೆಗಳಿಗೆ ಭಾರಿ ಮಳೆ ಸುರಿಯಲಿದೆ. ಬೆಳಗಾವಿ, ಬಳ್ಳಾರಿ,  ಬಾಗಲಕೋಟೆ, ಬೀದರ್, ಧಾರವಾಡ, ಗದಗ, ಹಾವೇರಿ, ಕಲಬುರ್ಗಿ, ಕೊಪ್ಪಳ, ವಿಜಯಪುರ, ಬೆಂಗಳೂರು ಗ್ರಾಮಾಂತರ, ನಗರ, ಚಿಕ್ಕಬಳ್ಳಾಪುರ, ಚಾಮರಾಜನಗರ, ಚಿಕ್ಕಮಗಳೂರು, ಹಾಸನ, ಕೊಡಗು,  ಮೈಸೂರು, ಶಿವಮೊಗ್ಗ ಜಿಲ್ಲೆಗಳಿಗೆ ಈಗಾಗಲೇ ಅಲರ್ಟ್ ನೀಡಲಾಗಿದೆ.

ಮೇ 25 ರವರೆಗೂ ರಾಜ್ಯದಲ್ಲಿ ವ್ಯಾಪಕ ಪ್ರಮಾಣದ ಮಳೆಯಾಗಲಿದೆ. ಹೀಗಾಗಿ ಮುಂದಿನ 5 ದಿನಗಳಲ್ಲಿ ಕರ್ನಾಟಕದಲ್ಲಿ ಗರಿಷ್ಠ ತಾಪಮಾನವು 2-3 ಡಿಗ್ರಿ ಸೆಲ್ಸಿಯಸ್‌ನಷ್ಟು ಕಡಿಮೆಯಾಗುವ ಸಾಧ್ಯತೆಯಿದೆ.

ಇದನ್ನು ಓದಿ : ಎರಡು ಮಕ್ಕಳ ತಂದೆಯೊಂದಿಗೆ ಪ್ರೇಮಾಂಕುರ. ಜೀವ ಕಳೆದುಕೊಂಡ ಧರ್ಮಸ್ಥಳ ಮೂಲದ ಏರೋಸ್ಪೆಸ್ ಎಂಜಿನಿಯ‌ರ್.

ಕುಮಟಾ ಮೂಲದ ನಿವೃತ್ತ ನ್ಯಾಯಮೂರ್ತಿ ಎಸ್. ಆರ್. ನಾಯಕ ನಿಧನ.

ಪ್ರಯಾಣಿಕರ ಗಮನಕ್ಕೆ. ಯಶ್ವಂತಪುರ-ಮಂಗಳೂರು-ಕಾರವಾರ ರೈಲು ಸಂಚಾರ ರದ್ದು.