ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಕಾರವಾರ (Karwar): ಉತ್ತರಕನ್ನಡ ಜಿಲ್ಲೆಯಲ್ಲಿ ಮತ್ತೆ ಗೋ ಗಳ್ಳರು ಬಾಲ ಬಿಚ್ಚಿದ್ದಾರೆ. ತಾಲೂಕಿನ ಮಾಜಾಳಿ(Majali) ಬಳಿ ತಡರಾತ್ರಿ ವಾಹನಗಳ ಮೂಲಕ ಗೋವುಗಳನ್ನ(Cows) ಕದಿಯಲು ಮುಂದಾಗಿದ್ದಾರೆ.
ಮಾಜಾಳಿಯಲ್ಲಿ ಗೋ ಕಳ್ಳತನ ಮಾಡುತ್ತಿರುವ ದೃಶ್ಯ ಸೆರೆಯಾಗಿದೆ. ಜಗದೀಶ್ ಗುರವ ಎಂಬುವವರ ಅಂಗಡಿ ಹತ್ತಿರ ರಾತ್ರಿ ಮುಸುಕುಧಾರಿಯಾಗಿ ಬಂದ ಗೋ ಕಳ್ಳರು ತಮ್ಮ ಕಾರಿನಲ್ಲಿ ಗೋವು ಕದಿಯಲು ಮುಂದಾಗಿದ್ದರು. ಗೋಕಳ್ಳರ ಕಂಡು ಆಕಳು ಮತ್ತು ಕರುಗಳು ದಿಕ್ಕಾಪಾಲಾಗಿ ಓಡಿವೆ.
ಮಧ್ಯ ರಾತ್ರಿಯಾದಂತೆ ಗೋಕಳ್ಳರ ಗ್ರಾಮೀಣ ಪ್ರದೇಶಗಳಲ್ಲಿ ರಸ್ತೆ ಮೇಲೆ ಇರುವ ಗೋವುಗಳನ್ನ ಹಿಡಿದು ಮಾರಾಟ ಮಾಡುವ ದಂಧೆ ಮುಂದುವರಿದಿದೆ. ಈ ಹಿಂದೆ ಹೊನ್ನಾವರ ಮತ್ತು ಭಟ್ಕಳದಲ್ಲಿ ಗೋ ಹತ್ಯೆ ಪ್ರಕರಣ ರಾಜ್ಯದಲ್ಲಿ ಬಾರೀ ಸದ್ದು ಮಾಡಿದ್ದವು. ಪ್ರಕರಣದಲ್ಲಿ ಹಲವರ ಬಂಧನವಾಗಿದೆ. ಆದರೂ ಸಹ ಜಿಲ್ಲೆಯಲ್ಲಿ ಗೋವು ಕಳ್ಳತನ ವಾಗುತ್ತಿರುವುದು ಪೊಲೀಸ್ ಇಲಾಖೆಗೆ ಸವಾಲಾಗಿದೆ.
ಕೃತ್ಯ ಎಸಗುವ ಗೋಕಳ್ಳರನ್ನು ಬಂಧಿಸುವಂತೆ ಸ್ಥಳೀಯರು ಒತ್ತಾಯಿಸುತ್ತಿದ್ದಾರೆ.
ಇದನ್ನು ಓದಿ : ಅರಬ್ಬೀ ಸಮುದ್ರದಲ್ಲಿ ವಾಯುಭಾರ ಕುಸಿತ. ಕರಾವಳಿ ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ.
ಎರಡು ಮಕ್ಕಳ ತಂದೆಯೊಂದಿಗೆ ಪ್ರೇಮಾಂಕುರ. ಜೀವ ಕಳೆದುಕೊಂಡ ಧರ್ಮಸ್ಥಳ ಮೂಲದ ಏರೋಸ್ಪೆಸ್ ಎಂಜಿನಿಯರ್.