ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news)ಹೊನ್ನಾವರ (Honnavar): ಟಿಪ್ಪರ್ ವಾಹನಕ್ಕೆ ಮರಳು(Sand) ತುಂಬುತ್ತಿದ್ದ ವೇಳೆ ಆಯಾ ತಪ್ಪಿ ನದಿಗೆ ಬಿದ್ದ ಘಟನೆ ಹೊನ್ನಾವರದ ಕಾಸರಕೋಡ(Honnavar Kasarakodu) ಬಳಿ ನಡೆದಿದೆ.
ಶರಾವತಿ ನದಿಯ(Sharavati River) ತಟದಲ್ಲಿ ಮರಳು ತುಂಬುವಾಗ ಈ ಘಟನೆ ನಡೆದಿದ್ದು, ಟಿಪ್ಪರ್ ವಾಹನದ ಹಿಂಭಾಗ ನೀರಿನಲ್ಲಿ ಜಾರಿ ಮುಳುಗಿದೆ. ಪರಿಣಾಮವಾಗಿ ಟಿಪ್ಪರ್ ವಾಹನದ ಕ್ಯಾಬಿನ್ ನೀರಿನಲ್ಲಿ ಮುಳುಗದೆ ಇರುವುದರಿಂದ ಚಾಲಕ ಸೇರಿ ಕಾರ್ಮಿಕರು ಬಚಾವ್ ಆಗಿದ್ದಾರೆ.
ರಾತ್ರಿ ಕ್ರೇನ್ ಬಳಸಿ ಟಿಪ್ಪರ್ ವಾಹನವನ್ನ ಮೇಲಕ್ಕೆ ಎತ್ತಲಾಗಿದೆ. ಹೊನ್ನಾವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಆದರೆ ಕ್ರಮಬದ್ಧವಾಗಿ ಮರಳು ತುಂಬಲಾಗುತ್ತಿತ್ತೋ, ಅಕ್ರಮ ಗೊತ್ತಾಗಿಲ್ಲ.
ಇದನ್ನು ಓದಿ : ಗೋ ಮಾಂಸ ಅಡ್ಡೆ ಮೇಲೆ ಪೊಲೀಸರ ದಾಳಿ. ಆರೋಪಿಗಳು ಪರಾರಿ.
ಶಿರೂರು ಪ್ರದೇಶದಲ್ಲಿ ಮತ್ತೆ ಅಪಾಯ ಸಾಧ್ಯತೆ. ಪ್ರತಿಬಂಧಕಾಜ್ಞೆ : ಜಿಲ್ಲಾಧಿಕಾರಿ ಆದೇಶ.