ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಭಟ್ಕಳ (Bhatkal) : ಭಟ್ಕಳದ ಕುವರಿಯೊಬ್ಬಳು ಬೆಂಗಳೂರಿನ ಪ್ರತಿಷ್ಠಿತ ಕಲಾ ನವೀನ್ ಫೀಲಂ ಅಕಾಡೆಮಿ ಆಯೋಜಿಸಿದ ಮಿಸ್ ಗ್ರಾಂಡ್ ಸೌತ್ ಇಂಡಿಯಾ ಪ್ಯಾಶನ್ ಶೋ(Miss grand south india fashion show) ಸ್ಪರ್ಧೆಯಲ್ಲಿ ಚಾಂಪಿಯನ್ ಆಗಿ ಹೊರ ಹೊಮ್ಮಿದ್ದಾಳೆ.
ಭಟ್ಕಳ ತಾಲೂಕಿನ ತಲಾಂದ(Talanda) ಗ್ರಾಮದ ಹೂವಿನಹಿತ್ಲು ಮನೆಯ ನಾರಾಯಣ ನಾಯ್ಕ ಹಾಗೂ ಸುನಿತಾ ದಂಪತಿಗಳ ಪುತ್ರಿ ಸಂಜನಾ ನಾಯ್ಕ ಪ್ರಥಮ ಸ್ಥಾನ ಪಡೆದು ಚಾಂಪಿಯನ್ ಆಗಿ ಆಯ್ಕೆಯಾಗಿದ್ದಾಳೆ.
ಬೆಂಗಳೂರಿನ ಚೌಡಯ್ಯ ಮೆಮೋರಿಯಲ್ ಸಭಾಂಗಣದಲ್ಲಿ ನಡೆದ ಈ ಸ್ಪರ್ಧೆಯಲ್ಲಿ ದೇಶದ ನಾನಾ ರಾಜ್ಯಗಳಿಂದ ಹಲವು ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಸಂಜನಾ ನಾಯ್ಕ ಎಲ್ಲರನ್ನೂ ಮೀರಿಸಿ ಮಿಸ್ ಸೌಥ್ ಗ್ರಾಂಡ್ ಪದಕವನ್ನು ತನ್ನದಾಗಿಸಿಕೊಂಡು ಮಿಸ್ ಇಂಡಿಯಾ (Miss India) ಹಾಗೂ ಹೊರದೇಶಗಳಲ್ಲಿ ನಡೆಯುವ ಪ್ಯಾಶನ್ ಶೋ ಗಳಿಗೆ(Fashion Show) ಸ್ಪರ್ದಿಸುವ ಅರ್ಹತೆ ಪಡೆದಿದ್ದಾಳೆ.
ಬೆಂಗಳೂರಿನ ಬೆಂಗಳೂರು ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕಾಲೇಜಿನಲ್ಲಿ ದ್ವಿತಿಯ ವರ್ಷದ ತರಗತಿಯಲ್ಲಿ ಕಲಿಯುತ್ತಿದ್ದು ಸಂಜನಾ ಸಾಧನೆಗೆ ಊರ ನಾಗರಿಕರು ಹಾಗೂ ವಿವಿಧ ಸಂಘ ಸಂಸ್ಥೆಗಳು ಹರ್ಷ ವ್ಯಕ್ತಪಡಿಸಿದ್ದಾರೆ.
ಇದನ್ನು ಓದಿ : ಸ್ವಚ್ಛ ಅಘನಾಶಿನಿಗೆ ಭಕ್ತಿಯ ಆರತಿ. ಅಭೂತಪೂರ್ವ ಕಾರ್ಯಕ್ರಮಕ್ಕೆ ಸಾಕ್ಷಿಯಾಯಿತು ಯುವಾ ಬ್ರಿಗೇಡ್.