ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news)ಹಾಸನ(Hasan): ತಾಳಿ ಕಟ್ಟುವ ವೇಳೆಯಲ್ಲಿಯೇ ನಾನು ಬೇರೊಬ್ಬ ಹುಡುಗನನ್ನು ಪ್ರೀತಿಸುತ್ತಿದ್ದೇನೆ, ಮದುವೆ ಬೇಡ ಎಂದು ವಧು ಹಠ ಹಿಡಿದ ಘಟನೆ ನಗರದ ಶ್ರೀ ಆದಿಚುಂಚನಗಿರಿ ಕಲ್ಯಾಣ ಮಂಟಪದಲ್ಲಿ ನಡೆದಿದೆ.

ಸ್ನಾತಕೋತ್ತರ ಪದವಿಧರೆಯಾದ ಹಾಸನ ತಾಲ್ಲೂಕಿನ ಬೂವನಹಳ್ಳಿ ಗ್ರಾಮದ ಪಲ್ಲವಿ ಮತ್ತು ಆಲೂರು ತಾಲ್ಲೂಕಿನ ಈಶ್ವರಹಳ್ಳಿ ಕೂಡಿಗೆಯ ಸರ್ಕಾರಿ ಶಾಲಾ ಶಿಕ್ಷಕ ವೇಣುಗೋಪಾಲ್.ಜಿ ಅವರ ಮದುವೆ ಇಂದು ನಿಗದಿಯಾಗಿತ್ತು. ಆದರೆ ಪಲ್ಲವಿಗೆ ಮುಹೂರ್ತದ ವೇಳೆ  ಒಂದು ಕರೆ ಬಂತು.  ನಂತರ ಆಕೆ ತಕ್ಷಣವೇ ಮದುವೆಯನ್ನು ನಿರಾಕರಿಸಿ, ಕಲ್ಯಾಣ ಮಂಟಪದ ಕೋಣೆಗೆ ಹೋಗಿ ಬಾಗಿಲು ಹಾಕಿಕೊಂಡಿದ್ದಾಳೆ.

ಪೋಷಕರು ಎಷ್ಟೇ ಮನವೊಲಿಸಲು ಪ್ರಯತ್ನ ಮಾಡಿದರೂ ಪಲ್ಲವಿ ಒಪ್ಪಲಿಲ್ಲ. ತನಗೆ ಈ ಮದುವೆ ಬೇಡ  ಎಂದು ದೃಢವಾಗಿ ಹೇಳಿದ್ದಾರೆ. ಇದರಿಂದ ವರ ವೇಣುಗೋಪಾಲ್ ಕೂಡ ಶಾಕ್ ಗೆ ಒಳಗಾದ. “ಯುವತಿಗೆ ಈ ಮದುವೆ  ಒಪ್ಪಿಗೆಯಿಲ್ಲದ್ದರಿಂದ   ಕಲ್ಯಾಣ ಮಂಟಪದಲ್ಲಿ  ಮದುವೆ ಸಮಾರಂಭಕ್ಕೆ ಆಗಮಿಸಿದ್ದ ವಧು-ವರನ ಕಡೆಯವರು ಆಘಾತಕ್ಕೊಳಗಾಗಬೇಕಾಯಿತು.

ಮದುವೆ ಸ್ಥಳಕ್ಕೆ ಬಡಾವಣೆ ಮತ್ತು ನಗರ ಠಾಣೆ ಪೊಲೀಸರು ಆಗಮಿಸಿ ಮಧ್ಯೆ ಪ್ರವೇಶಿಸಿದರಾದರೂ, ಪಲ್ಲವಿಯ ನಿರ್ಧಾರ ಒಪ್ಪಲಿಲ್ಲ. ಈ ಘಟನೆಯಿಂದ ಪಲ್ಲವಿಯ ಪೋಷಕರು ಕಣ್ಣೀರಿಡುವಂತಾಯಿತು.  ಮದುವೆಯ ಎಲ್ಲ ಸಿದ್ಧತೆಗಳು ಪೂರ್ಣಗೊಂಡು ಕೊನೆಯ ಸಂದರ್ಭದಲ್ಲಿ ಮದುವೆ ನಿಂತುಹೋಗಿರುವುದಕ್ಕೆ ಶ್ರಮ ವ್ಯರ್ಥವಾದಂತಾಯಿತು.

ಇದನ್ನು ಓದಿ : ನದಿಗೆ ಬಿದ್ದ ಮರಳು ತುಂಬಿದ ಲಾರಿ. ಚಾಲಕ ಬಚಾವ್.

ಗೋ ಮಾಂಸ ಅಡ್ಡೆ ಮೇಲೆ ಪೊಲೀಸರ ದಾಳಿ. ಆರೋಪಿಗಳು ಪರಾರಿ.

ಶಿರೂರು  ಪ್ರದೇಶದಲ್ಲಿ ಮತ್ತೆ ಅಪಾಯ ಸಾಧ್ಯತೆ. ಪ್ರತಿಬಂಧಕಾಜ್ಞೆ : ಜಿಲ್ಲಾಧಿಕಾರಿ ಆದೇಶ.

ವಿದ್ಯುತ್ ತಂತಿ ಸ್ಪರ್ಶಿಸಿ ಯುವಕ ಮತ್ತು ಜಾನುವಾರು ಸಾವು.