ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news)ಕಾರವಾರ (Karwar): ಬಾರೀ ಮಳೆಯಿಂದಾಗಿ ಶಿರಸಿ-ಕುಮಟಾ ರಸ್ತೆಯಲ್ಲಿ(Sirsi-kumta Road) ನಡೆಯುತ್ತಿರುವ ಬೆಣ್ಣೆ ಹಳ್ಳ ಬ್ರಿಜ್ ಕಾಮಗಾರಿ(Bridge Work) ಕೊಚ್ಚಿ ಹೋಗಿದೆ. ಹೀಗಾಗಿ ರಸ್ತೆ ಸಂಚಾರಕ್ಕೆ ತೊಂದರೆಯಾಗಿದ್ದು ಮಾರ್ಗವನ್ನ ತಾತ್ಕಾಲಿಕ ಸ್ಥಗಿತಗೊಳಿಸಿ ಜಿಲ್ಲಾಧಿಕಾರಿ ಅದೇಶಿಸಿದ್ದಾರೆ.

ಸೇತುವೆ ಕಾಮಗಾರಿ ಸ್ಥಳದ ಪಕ್ಕದಲ್ಲಿ ತಾತ್ಕಾಲಿಕ ಸಂಚಾರ ವ್ಯವಸ್ಥೆಗಾಗಿ ಕಲ್ಪಿಸಿದ್ದ ಪರ್ಯಾಯ ರಸ್ತೆಯ ಮೇಲೆ “ಬೆಣ್ಣೆ ಹೊಳೆ”ಯ ನೀರು ಉಕ್ಕಿ ಹರಿಯುತ್ತಿದೆ. ಹೀಗಾಗಿ ಶಿರಸಿ ಕುಮಟಾ ರಸ್ತೆಯಲ್ಲಿ ಬ್ಯಾರೀಕೆಡ್ ಅಳವಡಿಸಿ ಎಲ್ಲಾ ಮಾದರಿಯ ವಾಹನ ಸಂಚಾರವನ್ನು ತಾತ್ಕಾಲಿಕ ವಾಗಿ ನಿಷೇಧಿಸಲಾಗಿದ್ದು,  ವಾಹನ ಸವಾರರು ಈ ರಸ್ತೆ ಯಲ್ಲಿ ಸಂಚರಿಸದಂತೆ ಎಚ್ಚರಿಕೆ ವಹಿಸುವಂತೆ  ಜಿಲ್ಲಾಧಿಕಾರಿ ಕೆ ಲಕ್ಷ್ಮಿ ಪ್ರಿಯ ತಿಳಿಸಿದ್ದಾರೆ.

ಈ ಭಾಗದ ನಾಗರಿಕರಿಗೆ ಜಿಲ್ಲಾಡಳಿತದ ವತಿಯಿಂದ ಎಲ್ಲಾ ರೀತಿಯ ಅಗತ್ಯ ನೆರವು ಒದಗಿಸಲಾಗುವುದು ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.

ಶಿರಸಿ-ಕುಮಟಾ ರಸ್ತೆ ಕಾಮಗಾರಿ ಕಳೆದ ಸುಮಾರು ಐದು ವರ್ಷಗಳಿಂದ ನಡೆಯುತ್ತಿದ್ದು ಇದುವರೆಗೆ ಪೂರ್ಣಗೊಂಡಿಲ್ಲ.  ಸೇತುವೆ ಕಾಮಗಾರಿ ಸಂಬಂಧ ಕಳೆದ ಕೆಲ ತಿಂಗಳಿಂದ ಈ ಮಾರ್ಗದಲ್ಲಿ ಬಾರೀ ವಾಹನಗಳ ಸಂಚಾರ ನಿಷೇಧಿಸಲಾಗಿತ್ತು. ಇದೀಗ ಎಲ್ಲಾ ರೀತಿಯ ವಾಹನಗಳಿಗೆ ಸಂಚಾರಕ್ಕೆ ನಿಷೇಧ ಹೇರಲಾಗಿದೆ.

ಇದನ್ನು ಓದಿ : ತಾಳಿ ಕಟ್ಟುವ ವೇಳೆ ಮದುವೆ ಬೇಡ ಎಂದ ವಧು. ಪೋಷಕರು ಕಂಗಾಲು

ನದಿಗೆ ಬಿದ್ದ ಮರಳು ತುಂಬಿದ ಲಾರಿ. ಚಾಲಕ ಬಚಾವ್.