ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಸಿಕ್ಕಿಂ(Sikkim) ರಾಜ್ಯದ ಛಾಟೆನ್ ಸೇನಾ ಶಿಬಿರದ ಸಮೀಪ ಭೂಕುಸಿತವಾಗಿದ್ದು(Landslide), ಮೂವರು ಯೋಧರು(Soldiers) ಸಾವನ್ನಪ್ಪಿ ಆರು ಜನರು ಕಣ್ಮರೆಯಾದ ಘಟನೆ ಸಂಭವಿಸಿದೆ.
ಈಶಾನ್ಯ ರಾಜ್ಯಗಳಲ್ಲಿ ಭಾರಿ ಮಳೆಯಾಗುತ್ತಿದ್ದು, ಸಿಕ್ಕಿಂನಲ್ಲಿ ಪ್ರವಾಹ ಭೀತಿ ಎದುರಾಗಿದೆ. ಸೇನಾ ಶಿಬಿರದ(Army Camp) ಮೇಲೆ ಭೂಕುಸಿತ(Landslide) ಸಂಭವಿಸಿದ್ದರಿಂದ ನಾಲ್ವರು ಗಾಯಗೊಂಡಿರುವುದಾಗಿ ರಕ್ಷಣಾ(Defence) ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಮಳೆಯಿಂದಾಗಿ ಸಿಕ್ಕಿಂ ನ ಹಲವು ಕಡೆಗಳಲ್ಲಿ ಭೂಕುಸಿತ(Landslide) ಸಂಭವಿಸುತ್ತಿದ್ದು, ರಾಜ್ಯದಲ್ಲಿ ಪ್ರವಾಹದ ವಾತಾವರಣ ನಿರ್ಮಾಣವಾಗಿದೆ. ಮನೆಗಳು, ಕಟ್ಟಡಗಳು ಸಂಪೂರ್ಣ ನೆಲಸಮವಾಗಿದೆ. ಬಹುತೇಕ ಕಡೆಗಳಲ್ಲಿ ಹೆದ್ದಾರಿಗಳೇ ಕುಸಿದಿದ್ದು ನಿಂತಿರುವ ವಾಹನಗಳು ಕೊಚ್ಚಿ ಹೋಗಿವೆ. ವಿವಿಧ ಭಾಗಗಳಲ್ಲಿ ರಸ್ತೆ ಸಂಪರ್ಕ ಸಂಪೂರ್ಣ ಕಡಿತಗೊಂಡಿದ್ದು 1500 ಪ್ರವಾಸಿಗರು ಸಿಲುಕಿಕೊಂಡು ಪರದಾಟ ಅನುಭವಿಸಿದ್ದಾರೆ ಎನ್ನಲಾಗಿದೆ.
ಪ್ರವಾಸಿಗರ ವಾಹನವೊಂದು ಮಂಗನ್ ಜಿಲ್ಲೆಯಲ್ಲಿ ತೀಸ್ತಾ ನದಿಗೆ ಉರುಳಿ ಬಿದ್ದು ಓರ್ವ ಮೃತಪಟ್ಟಿದ್ದಾರೆ. ಎಂಟು ಜನರು ನಾಪತ್ತೆಯಾಗಿದ್ದಾರೆ. ಓರ್ವ ಗಂಭೀರವಾಗಿ ಗಾಯಗೊಂಡಿರುವ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ನಾಪತ್ತೆಯಾಗಿರುವವರ ಶೋಧಕಾರ್ಯಾಚರಣೆ ನಡೆಸಲಾಗಿದ್ದು ಜನತೆ ಆತಂಕದಿಂದ ಕಾಲ ಕಳೆಯುವಂತಾಗಿದೆ.
ಇದನ್ನು ಓದಿ : ಬೋಟಿಂಗ್ ಚಟುವಟಿಕೆ ನಿಷೇಧ : ಜಿಲ್ಲಾಧಿಕಾರಿ.